ಅಂತಾರಾಷ್ಟ್ರೀಯ ಮಹಿಳಾ ದಿನದ ಅಂಗವಾಗಿ ಸ್ಟ್ರೀಮಿಂಗ್‌ಗೆ ಸಿದ್ಧವಾಗುತ್ತಿರುವ ಸರಣಿ, ಸಿನಿಮಾಗಳ ಸ್ತ್ರೀ ಪಾತ್ರಗಳ ಫಸ್ಟ್‌ಲುಕ್‌ ರಿವೀಲ್‌ ಮಾಡಿದೆ ನೆಟ್‌ಫ್ಲಿಕ್ಸ್‌. ಮಾಯಿ, ಕ್ವಲಾ, ಥಾರ್‌, ಮಸಬಾ ಮಸಬಾ 2, She 2, ಕಥಾಲ್‌.. ಶೋಗಳ ಪಾತ್ರಗಳು ವೀಕ್ಷಕರಿಗೆ ಪರಿಚಯವಾಗಿವೆ.

ಮಹಿಳಾ ದಿನದ ಅಂಗವಾಗಿ ನೆಟ್‌ಫ್ಲಿಕ್ಸ್‌ ‘#HerKahaniHaiZaruri’ ಕ್ಯಾಂಪೇನ್‌ ಹಮ್ಮಿಕೊಂಡಿದೆ. ಈ ಕ್ಯಾಂಪೇನ್‌ನ ಅಂಗವಾಗಿ ನೆಟ್‌ಫ್ಲಿಕ್ಸ್‌ನಲ್ಲಿ ಮುಂಬರುವ ದಿನಗಳಲ್ಲಿ ಸ್ಟ್ರೀಮ್‌ ಆಗಲಿರುವ ಸಿನಿಮಾ, ಸರಣಿಗಳ ಸ್ತ್ರೀ ಪಾತ್ರಗಳ ಫಸ್ಟ್‌ಲುಕ್‌ ಬಿಡುಗಡೆಯಾಗಿವೆ. ಮಾಯಿ, ಕ್ವಲಾ, ಥಾರ್‌, ಮಸಬಾ ಮಸಬಾ 2, She 2, ಕಥಾಲ್‌ ಸ್ತ್ರೀ ಪಾತ್ರಗಳು ವೀಕ್ಷಕರಿಗೆ ಪರಿಚಯವಾಗಿವೆ. ಆದರೆ ಈ ಸರಣಿ, ಸಿನಿಮಾಗಳ ಸ್ಟ್ರೀಮಿಂಗ್‌ ದಿನಾಂಕವನ್ನು ನೆಟ್‌ಫ್ಲಿಕ್ಸ್‌ ಘೋಷಿಸಿಲ್ಲ. ಅನ್ವಿತಾ ದತ್‌ ನಿರ್ದೇಶನದ ‘ಕ್ವಲಾ’ ಸಿನಿಮಾದ ಫಸ್ಟ್‌ಲುಕ್‌ ಜೊತೆಗೆ, “Relationships find new depths in #Qala. @tripti_dimri23 and @swastika24 star in this in this hauntingly beautiful tale about a daughter who yearns for her mother’s love. Coming soon on Netflix!” ಎನ್ನುವ ಸಂದೇಶವಿದೆ. ಪೋಸ್ಟರ್‌ನಲ್ಲಿ ತೃಪ್ತಿ ದಿಮ್ರಿ ಮತ್ತು ಸ್ವಸ್ತಿಕಾ ಮುಖರ್ಜಿ ಇದ್ದಾರೆ.

ಮುಂದಿನ ಕೆಲವು ದಿನಗಳಲ್ಲಿ ವೀಕ್ಷಕರಿಗೆ ಸಿಗಲಿರುವ ‘ಥಾರ್‌’ ರಿವೇಂಜ್‌ ಡ್ರಾಮಾದ ನಾಯಕಿಯರಾಗಿ ಫಾತಿಮಾ ಸನಾ ಶೇಕ್‌ ಮತ್ತು ಮುಕ್ತಿ ಮೋಹನ್‌ ಇದ್ಧಾರೆ. ಈ ಸಿನಿಮಾದಲ್ಲಿ ಬಾಲಿವುಡ್‌ ನಟ ಅನಿಲ್‌ ಕಪೂರ್‌ ಮತ್ತು ಅವರ ಪುತ್ರ ಹರ್ಷವರ್ಧನ್‌ ಕಪೂರ್‌ ಜೊತೆಯಾಗಿ ನಟಿಸುತ್ತಿದ್ದಾರೆ. “There’s more to people and places than what meets the eye. But right now, it’s all eyes on @fattysanashaikh and @thisIsmukti as they get ready to take the desert by the storm in #Thar. Coming soon on Netflix!” ಎನ್ನುವ ಕ್ಯಾಪ್ಶನ್‌ನೊಂದಿಗೆ ಫಾತಿಮಾ ಮತ್ತು ಮುಕ್ತಿ ಪಾತ್ರಗಳ ಫಸ್ಟ್‌ಲುಕ್‌ ರಿವೀಲ್‌ ಮಾಡಿದೆ ನೆಟ್‌ಫ್ಲಿಕ್ಸ್‌.

‘ಮಾಯಿ’ ವೆಬ್‌ ಸರಣಿಯಲ್ಲಿ ನಟಿ ಸಾಕ್ಷಿ ತನ್ವರ್‌ ಪ್ರಮುಖ ಪಾತ್ರದಲ್ಲಿದ್ದಾರೆ. ಅವರ ಜೊತೆ ರೈಮಾ ಸೇನ್‌ ಮತ್ತು ವಾಮಿಕಾ ಗಬ್ಬಿ ಅವರ ಪಾತ್ರಗಳ ಫಸ್ಟ್‌ಲುಕ್‌ಗಳೂ ರಿವೀಲ್‌ ಆಗಿವೆ. ನಟಿ ಅನುಷ್ಕಾ ಶರ್ಮಾ ಒಡೆತನದ ಕ್ಲೀನ್‌ ಸ್ಲೇಟ್‌ ಫಿಲ್ಮ್ಸ್‌ ಬ್ಯಾನರ್‌ನಲ್ಲಿ ಸರಣಿ ತಯಾರಾಗುತ್ತಿದೆ. “#SakshiTanwar is back to rule our screens alongside @GabbiWamiqa and @raimasen! #Mai is the story of how far a mother will go to care for the ones she loves. Arriving soon on Netflix.” ಎನ್ನುವ ಕ್ಯಾಪ್ಶನ್‌ನೊಂದಿಗೆ ನೆಟ್‌ಫ್ಲಿಕ್ಸ್‌ ‘ಮಾಯಿ’ ಪೋಸ್ಟರ್‌ ಟ್ವೀಟ್‌ ಮಾಡಿದೆ.

‘ಮಸಬಾ ಮಸಬಾ’ ಸೆಕೆಂಡ್‌ ಸೀಸನ್‌ ವೆಬ್‌ ಸರಣಿಯಲ್ಲಿನ ಮಸಬಾ ಗುಪ್ತಾ ಮತ್ತು ನೀನಾ ಗುಪ್ತಾ ಪಾತ್ರಗಳ ಫಸ್ಟ್‌ಲುಕ್‌ಗಳು ಗಮನ ಸೆಳೆಯುತ್ತವೆ. ಕಿರೀಟ ತೊಟ್ಟು ರಾಣಿಯ ಆಸನದಲ್ಲಿ ಮಸಬಾ ಕುಳಿತಿದ್ದರೆ, ನೀನಾ ಗುಪ್ತಾ ಕ್ಯಾಶ್ಯುಯಲ್‌ ಅವತಾರದಲ್ಲಿ ಪೋಸು ಕೊಟ್ಟಿದ್ದಾರೆ. ಇಮ್ತಿಯಾಜ್‌ ಆಲಿ ನಿರ್ದೇಶನದ ‘She’ ಸರಣಿಯ ಎರಡನೇ ಸೀಸನ್‌ನ ‘ಭೂಮಿಕಾ’ ಪಾತ್ರದಲ್ಲಿ ಅದಿತಿ ಪೊಹಾಂಕರ್‌ ಫಸ್ಟ್‌ಲುಕ್‌ ಕೂಡ ರಿವೀಲ್‌ ಆಗಿದೆ. ಬಾಲಿವುಡ್‌ ನಟಿ ಅಲಿಯಾ ಭಟ್‌ರ ಹಾಲಿವುಡ್‌ ಡೆಬ್ಯೂ ಸಿನಿಮಾ ‘ಹಾರ್ಟ್‌ ಆಫ್‌ ಸ್ಟೋನ್‌’ ಕುರಿತಾಗಿಯೂ ನೆಟ್‌ಫ್ಲಿಕ್ಸ್‌ ಮಾಹಿತಿ ನೀಡಿತ್ತು. ಗಾಲ್‌ ಗ್ಯಾಡೊಟ್‌, ಜೆಮಿ ಡಾರ್ನಾನ್‌ ಈ ಸಿನಿಮಾದ ಇತರೆ ಪ್ರಮುಖ ಪಾತ್ರಧಾರಿಗಳು.

Previous articleಕಥೆ ಹೇಳುವ ಕನ್ನಡಿ…
Next articleತಬಾಹಿ ಸಾಂಗ್‌ | ವೀಕ್ಷಕರಿಗೆ ಇಷ್ಟವಾದ ಬಾದ್‌ಷಾ ಮತ್ತು ತಮನ್ನಾ ಭಾಟಿಯಾ

LEAVE A REPLY

Connect with

Please enter your comment!
Please enter your name here