ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣ ಅವರು ‘ಸಿಕಂದರ್’ ಹಿಂದಿ ಸಿನಿಮಾದ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಖ್ಯಾತ ಚಿತ್ರನಿರ್ದೇಶಕ ಮುರುಗದಾಸ್ ನಿರ್ದೇಶನದಲ್ಲಿ ಸಲ್ಮಾನ್ ಖಾನ್ ನಟಿಸುತ್ತಿರುವ ಚಿತ್ರವಿದು. ನಟಿ ರಶ್ಮಿಕಾ ಈ ವಿಷಯವನ್ನು ತಮ್ಮ X ಖಾತೆಯಲ್ಲಿ ಹಂಚಿಕೊಂಡಿದ್ದು, ಚಿತ್ರತಂಡಕ್ಕೆ ಧನ್ಯವಾದ ಹೇಳಿದ್ದಾರೆ.
‘ಸಿಕಂದರ್’ ಹಿಂದಿ ಚಿತ್ರದ ನಾಯಕಿಯಾಗಿ ತಾವು ಆಯ್ಕೆಯಾಗಿರುವುದಾಗಿ ನಟಿ ರಶ್ಮಿಕಾ ಮಂದಣ್ಣ ತಮ್ಮ Xನಲ್ಲಿ ದೃಢಪಡಿಸಿದ್ದಾರೆ. ಮುರುಗದಾಸ್ ನಿರ್ದೇಶನದಲ್ಲಿ ಸಲ್ಮಾನ್ ಖಾನ್ ನಟಿಸುತ್ತಿರುವ ಆಕ್ಷನ್ ಥ್ರಿಲ್ಲರ್ ಚಿತ್ರವಿದು. ‘ಘಜಿನಿ’ ಖ್ಯಾತಿಯ ನಿರ್ದೇಶಕ ಮುರುಗದಾಸ್ ಈ ಚಿತ್ರದೊಂದಿಗೆ ಬಾಲಿವುಡ್‌ಗೆ ಮರಳುತ್ತಿದ್ದಾರೆ. ಇದೊಂದು high-octane ಆಕ್ಷನ್ ಪ್ರಾಜೆಕ್ಟ್ ಆಗಿದ್ದು, ಬಾಲಿವುಡ್‌ನಲ್ಲಿ ಚಿತ್ರದ ಬಗ್ಗೆ ಸಾಕಷ್ಟು buzz ಸೃಷ್ಟಿಯಾಗಿದೆ. ಸಾಜಿದ್ ನಾಡಿಯಾದ್‌ವಾಲಾ ನಿರ್ಮಿಸುತ್ತಿರುವ ಚಿತ್ರವಿದು. ನಟಿ ರಶ್ಮಿಕಾ ತಮ್ಮ X ಖಾತೆಯಲ್ಲಿ, ‘You guys for a long time have been asking me for the next update and here it is.. Surprise!! I am truly grateful and honoured to be a part of #Sikandar’ ಎಂದು ಬರೆದುಕೊಂಡಿದ್ದಾರೆ.
ಈಗಾಗಲೇ ‘ಸಿಕಂದರ್’ ಚಿತ್ರದ ಶೂಟಿಂಗ್ ಶುರುವಾಗಿದೆ. ಭಾರತ ಮತ್ತು ಯೂರೋಪ್ ದೇಶಗಳಲ್ಲಿ ಚಿತ್ರೀಕರಣ ನಡೆಯಲಿದ್ದು, ಸುಮಾರು 400 ಕೋಟಿ ರೂಪಾಯಿ ಬಜೆಟ್‌ನಲ್ಲಿ ಸಿನಿಮಾ ನಿರ್ಮಾಣವಾಗಲಿದೆ ಎನ್ನಲಾಗುತ್ತಿದೆ! ಸಿನಿಮಾದ ಬಿಡುಗಡೆ ದಿನಾಂಕ ನಿಗಧಿಯಾಗಿದ್ದು, 2025ರ ಈದ್ ಹಬ್ಬಕ್ಕೆ ‘ಸಿಕಂದರ್’ ಥಿಯೇಟರ್‌ಗೆ ಬರಲಿದೆ. ದಕ್ಷಿಣ ಭಾರತದಲ್ಲೂ ಖ್ಯಾತಿ ಪಡೆದಿರುವ ನಟಿ ರಶ್ಮಿಕಾ ಅವರ ಸೇರ್ಪಡೆ ಚಿತ್ರದ ಮಾರುಕಟ್ಟೆಗೆ ನೆರವಾಗಲಿದೆ ಎನ್ನುವುದು ನಿರ್ಮಾಪಕರ ಅಂದಾಜು. ತೆರೆ ಮೇಲೆ ಸಲ್ಮಾನ್ ಖಾನ್ ಮತ್ತು ರಶ್ಮಿಕಾ ಮಂದಣ್ಣ ಕೆಮಿಸ್ಟ್ರಿ ಯಾವ ರೀತಿ ಇರಲಿದೆ ಎನ್ನುವುದನ್ನು ಕಾದುನೋಡಬೇಕು.