ಬಹುನಿರೀಕ್ಷಿತ ತೆಲುಗು ಸಿನಿಮಾ ‘ಟೈಗರ್ ನಾಗೇಶ್ವರ ರಾವ್’ ಮೊದಲ ಹಾಡು ‘ಏಕ್ ದಮ್ ಏಕ್ ದಮ್’ ಬಿಡುಗಡೆಯಾಗಿದೆ. ಕನ್ನಡ ಅವತರಣಿಕೆಯ ಸಾಂಗ್ ಕೂಡ ರಿಲೀಸ್ ಆಗಿದ್ದು, ಸಂತೋಷ್ ವಿಶ್ವರತ್ನ ಸಾಹಿತ್ಯ ರಚಿಸಿದ್ದಾರೆ. ಜಿ ವಿ ಪ್ರಕಾಶ್ ಸಂಗೀತ ಸಂಯೋಜನೆಗೆ ಅನಿರುದ್ಧ ಶಾಸ್ತ್ರಿ ಹಾಡಿದ್ದಾರೆ.
ರವಿತೇಜ ನಟನೆಯ ಬಹುನಿರೀಕ್ಷಿತ ಟೈಗರ್ ನಾಗೇಶ್ವರ ರಾವ್ ಸಿನಿಮಾದ ಮೊದಲ ಹಾಡು ರಿಲೀಸ್ ಆಗಿದೆ. ‘ಏಕ್ ದಮ್ ಏಕ್ ದಮ್’ ಹಾಡು ಮೂಲ ತೆಲುಗು ಸೇರಿದಂತೆ ಐದು ಭಾಷೆಗಳಲ್ಲಿ ಬಿಡುಗಡೆಯಾಗಿದೆ. ಕನ್ನಡ ಅವತರಣಿಕೆಗೆ ಸಂತೋಷ್ ವಿಶ್ವರತ್ನ ಸಾಹಿತ್ಯ ಬರೆದಿದ್ದು, ಅನಿರುದ್ಧ್ ಶಾಸ್ತ್ರೀ ಹಾಡಿದ್ದಾರೆ. ರವಿತೇಜ ಮತ್ತು ನೂಪುರ್ ಸನೂನ್ ಈ ಪೆಪ್ಪಿ ಸಾಂಗ್ ಗೆ ಹೆಜ್ಜೆ ಹಾಕಿದ್ದು, ಜಿವಿ ಪ್ರಕಾಶ್ ಸಂಗೀತ ಸಂಯೋಜಿಸಿದ್ದಾರೆ. 70ರ ಕಾಲಘಟ್ಟದ ಹೈದರಾಬಾದ್ ಸ್ಟುವರ್ಟ್ ಪುರಂ ಹಳ್ಳಿಯೊಂದರ ಕುಖ್ಯಾತ ಕಳ್ಳನ ಜೀವನಾಧಾರಿತ ಸಿನಿಮಾ ಇದು. ನೂಪುರ್ ಸನೂನ್ ಮತ್ತು ಗಾಯತ್ರಿ ಭಾರದ್ವಾಜ್ ನಾಯಕಿಯರಾಗಿ ಕಾಣಿಸಿಕೊಂಡಿದ್ದಾರೆ.
ಆರ್ ಮಧಿ ಛಾಯಾಗ್ರಹಣ, ಶ್ರೀಕಾಂತ್ ವೀಸಾ ಸಂಭಾಷಣೆ, ಜಿ ವಿ ಪ್ರಕಾಶ್ ಕುಮಾರ್ ಸಂಗೀತ ಸಿನಿಮಾಕ್ಕಿದೆ. ಅವಿನಾಶ್ ಕೊಲ್ಲಾ ಕಾರ್ಯಕಾರಿ ನಿರ್ಮಾಪಕರಾಗಿದ್ದು, ಮಯಾಂಕ್ ಸಿಂಘಾನಿಯಾ ಸಹ ನಿರ್ಮಾಣದ ಜವಾಬ್ದಾರಿ ಹೊತ್ತಿದ್ದಾರೆ. ಟೈಗರ್ ನಾಗೇಶ್ವರ್ ರಾವ್ ಅಕ್ಟೋಬರ್ 20ರಂದು ತೆರೆಕಾಣಲಿದೆ. ದಸರಾ ಹಬ್ಬದ ಸುಸಂದರ್ಭ ಹಾಗೂ ದಸರಾ ರಜೆ ಹಿನ್ನೆಲೆಯ ಯೋಜನೆ ಹಾಕಿಕೊಂಡು ನಿರ್ಮಾಪಕರು ಚಿತ್ರವನ್ನು ಬಿಡುಗಡೆ ಮಾಡುತ್ತಿದ್ದಾರೆ. ‘ಕಾರ್ತಿಕೇಯ 2’, ‘ಕಾಶ್ಮೀರಿ ಫೈಲ್ಸ್’ ಸಿನಿಮಾ ನಿರ್ಮಿಸಿರುವ ಅಭಿಷೇಕ್ ಅಗರ್‌ವಾಲ್ ತಮ್ಮದೇ ಅಭಿಷೇಜ್ ಅಗರ್‌ವಾಲ್ ಆರ್ಟ್ಸ್ ಬ್ಯಾನರ್‌ನಡಿ ಚಿತ್ರ ನಿರ್ಮಿಸಿದ್ದಾರೆ. ವಂಶಿ ಚಿತ್ರ ನಿರ್ದೇಶಿಸಿದ್ದಾರೆ.