ಪ್ರಮೋದ್‌ ಜೋಯಿಸ್‌ ನಿರ್ದೇಶನದ ‘REDRUM’ ಚಿತ್ರದ ‘ಅನುಪಮ’ ರೊಮ್ಯಾಂಟಿಕ್‌ ಸಾಂಗ್‌ ರಿಲೀಸ್‌ ಆಗಿದೆ. ನಿರ್ದೇಶಕರೇ ರಚಿಸಿರುವ ಈ ಹಾಡಿಗೆ ಚೇತನ್‌ ಕೃಷ್ಣ ಸಂಗೀತ ನೀಡಿದ್ದು, ‘ಸರಿಗಮಪ’ ಖ್ಯಾತಿಯ ದರ್ಶನ್‌ ನಾರಾಯಣ್‌ ಹಾಡಿದ್ದಾರೆ.

‘ಇದೊಂದು ಕ್ರೈಮ್ ಥ್ರಿಲ್ಲರ್ ಕಥಾಹಂದರ ಹೊಂದಿರುವ ಕಥೆ. ಸಿನಿಮಾದೊಳಗೆ ನಡೆಯುವ ಸಿನಿಮಾ ಕಥೆಯೂ ಹೌದು‌. ನಿರ್ದೇಶಕನೊಬ್ಬ ತನ್ನ ಟ್ರೇಲರ್ ಬಿಡುಗಡೆ ಮಾಡಿದಾಗ, ಆ ಟ್ರೇಲರ್ ಬಾರಿ ಸಂಚಲನ ಉಂಟು ಮಾಡುತ್ತದೆ‌. ಆ ಮೂಲಕ ಚಿತ್ರದ ಕಥೆ ಶುರುವಾಗುತ್ತದೆ. ಉತ್ತರ ಭಾರತದಲ್ಲಿ ನಡೆದ ನೈಜಘಟನೆ ಆಧರಿಸಿರುವ ಈ ಚಿತ್ರದ ಬಹುಪಾಲು ಚಿತ್ರೀಕರಣವನ್ನು ಉತ್ತರ ಭಾರತದಲ್ಲೇ ನಡೆಸಿದ್ದೇವೆ. ‘REDRUM’ ಹೆಸರನ್ನು ನೀವು ಕನ್ನಡಿಯಲ್ಲಿ ನೋಡಿದಾಗ ‘MURDER’ ಎಂದು ಆಗುತ್ತದೆ‌. ಕ್ರೈಮ್ ಥ್ರಿಲ್ಲರ್ ಚಿತ್ರಕ್ಕೆ ಇದು ಸೂಕ್ತ ಶೀರ್ಷಿಕೆಯೂ ಆಗಿದೆ’ ಎನ್ನುತ್ತಾರೆ ‘REDRUM’ ಚಿತ್ರದ ನಿರ್ದೇಶಕ ಪ್ರಮೋದ್‌ ಜೋಯಿಸ್‌. ಚಿತ್ರದ ರೊಮ್ಯಾಂಟಿಕ್‌ ಸಾಂಗ್‌ ಬಿಡುಗಡೆಯಾಗಿದೆ. ನಿರ್ದೇಶಕರೇ ರಚಿಸಿರುವ ಈ ಹಾಡಿಗೆ ಚೇತನ್‌ ಕೃಷ್ಣ ಸಂಗೀತ ನೀಡಿದ್ದು, ‘ಸರಿಗಮಪ’ ಖ್ಯಾತಿಯ ದರ್ಶನ್‌ ನಾರಾಯಣ್‌ ಹಾಡಿದ್ದಾರೆ.

ಚಿತ್ರದ ಕಾರ್ಯಕಾರಿ ನಿರ್ಮಾಪಕರಾಗಿ ಕೆಲಸ ಮಾಡಿರುವ ಅಫ್ಜಲ್‌ ಅವರು ಚಿತ್ರದ ಬಗ್ಗೆ ಮಾತನಾಡಿ, ‘ನಾನು ಈ ಚಿತ್ರದ ಪ್ರಮುಖಪಾತ್ರದಲ್ಲೂ ನಟಿಸಿದ್ದೇನೆ. ಹೈದರಾಬಾದ್‌ನ FMD ಮ್ಯೂಸಿಕ್‌ ಮೂಲಕ ಚಿತ್ರದ ಮೊದಲ ಹಾಡು ಬಿಡುಗಡೆಯಾಗಿದೆ. ಈ ಚಿತ್ರದ ಸಹ ನಿರ್ಮಾಪಕರೂ ಆಗಿರುವ ರಮೇಶ್ ಭಂಡಾರಿ ಅವರ ಸಾರಥ್ಯದ ಈ ಆಡಿಯೋ ಕಂಪನಿ ನಮ್ಮ ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೂ ಅಡಿಯಿಟ್ಟಿದೆ. ನವೆಂಬರ್ ವೇಳಗೆ ಚಿತ್ರ ತೆರೆಗೆ ಬರಲಿದೆ’ ಎನ್ನುತ್ತಾರೆ. ಅಶೋಕ್ ದೇವನಾಂಪ್ರಿಯ, ಮೋಹನ್ ರಾಜ್ ಹಾಗೂ ಹನಿ ಚೌಧರಿ ನಿರ್ಮಾಣದ ಚಿತ್ರದ ಪ್ರಮುಖ ಪಾತ್ರಗಳಲ್ಲಿ ಮುಂಬೈ ಮೂಲದ ರಾಜವೀರ್, ಪ್ರಾಚಿ ಶರ್ಮ, ದ್ರಿತೇಶ್, ವಿನಯ್ ಸೂರ್ಯ, ಯತಿರಾಜ್, ಮಧುರ ನಟಿಸಿದ್ದಾರೆ.

LEAVE A REPLY

Connect with

Please enter your comment!
Please enter your name here