ಸದಭಿರುಚಿಯ ಸಿನಿಮಾಗಳ ನಿರ್ದೇಶಕ ಮಹೇಶ್‌ ಬಾಬು ‘ಅಪರೂಪ’ ಚಿತ್ರದೊಂದಿಗೆ ತೆರೆಗೆ ಮರಳುತ್ತಿದ್ದಾರೆ. ಇದು ಸುಘೋಷ್‌ ಮತ್ತು ಹೃತಿಕಾ ಮುಖ್ಯಭೂಮಿಕೆಯಲ್ಲಿ ನಟಿಸುತ್ತಿರುವ ಆಕ್ಷನ್‌ – ಲವ್‌ ಸಿನಿಮಾ. ಜುಲೈ 14ರಂದು ತೆರೆಕಾಣುತ್ತಿರುವ ಚಿತ್ರವನ್ನು KRG ಸ್ಟುಡಿಯೋಸ್‌ ವಿತರಿಸುತ್ತಿದೆ.

ಅರಸು, ಆಕಾಶ್‌, ಅಜಿತ್‌, ಅತಿರಥ, ಅಭಯ್‌ ಸೇರಿದಂತೆ ಸದಭಿರುಚಿಯ ಸಿನಿಮಾಗಳ ಮೂಲಕ ಕನ್ನಡಿಗರಿಗೆ ಪರಿಚಿತರಾದವರು ಮಹೇಶ್‌ ಬಾಬು. ಈ ಬಾರಿಯೂ ಅವರು ‘ಅ’ ಅಕ್ಷರದಿಂದ ಆರಂಭವಾಗುವ ‘ಅಪರೂಪ’ ಶೀರ್ಷಿಕೆಯ ಸಿನಿಮಾದೊಂದಿಗೆ ತೆರೆಗೆ ಮರಳುತ್ತಿದಾರೆ. ಈ ಚಿತ್ರದೊಂದಿಗೆ ಸುಘೋಷ್‌ ಮತ್ತು ಹೃತಿಕಾ ನಾಯಕ, ನಾಯಕಿಯಾಗಿ ಸ್ಯಾಂಡಲ್‌ವುಡ್‌ಗೆ ಪದಾರ್ಪಣೆ ಮಾಡುತ್ತಿದ್ದಾರೆ. ‘ಇದು ಹೊಸ ರೀತಿಯ ಪ್ರೇಮಕತೆ. ಇಲ್ಲಿ ನಾಯಕ ನಾಯಕಿಯ ನಡುವೆ ಬರುವ ಅಹಂ ವಿಲನ್‌ ಆಗುತ್ತದೆ. ಅದರಿಂದ ಏನೇನು ತೊಂದರೆ ಉಂಟಾಗುತ್ತದೆ ಅನ್ನೋದು ಚಿತ್ರದಲ್ಲಿ ಕಟ್ಟಿಕೊಡಲಾಗಿದೆ’ ಎನ್ನುತಾರೆ ನಿರ್ದೇಶಕ ಮಹೇಶ್‌ ಬಾಬು. ಮಂಡ್ಯ ಮೂಲದ ನಟ ಸುಘೋಷ್‌ ಈ ಹಿಂದೆ ಮಹೇಶ್‌ ಬಾಬು ಅವರ ‘ಅತಿರಥ’ ಸಿನಿಮಾದಲ್ಲಿ ನಟಿಸಿದ್ದರು. ಅಲ್ಲಿ ಅವರನ್ನು ನೋಡಿದ್ದ ನಿರ್ದೇಶಕರು ತಮ್ಮ ‘ಅಪರೂಪ’ ಸಿನಿಮಾದ ಹೀರೋ ಆಗಿ ಅವರನ್ನು ಆಯ್ಕೆ ಮಾಡಿದ್ದಾರೆ.

ಚಿಕ್ಕಂದಿನಿಂದಲೇ ಸಿನಿಮಾ‌ ಕನಸು ಕಟ್ಟಿಕೊಂಡ ಮಹೇಶ್‌ ನಟನೆ ಜೊತೆ ನೃತ್ಯ, ಸ್ಟಂಟ್ಸ್‌ಗಳಲ್ಲೂ ಪಳಗಿದ್ದಾರೆ. ಅವರು ಹೆಜ್ಜೆ ಹಾಕಿರುವ ‘ಲವ್ ಗೆ ನೋ ನೋ’ ವೀಡಿಯೋ ಸಾಂಗ್‌ಗೆ ದೊಡ್ಡ ಮಟ್ಟದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ. ನಾಯಕಿ ಹೃತಿಕಾ ತೆಲುಗಿನ ಖ್ಯಾತ ನಟಿ ಅಮನಿ ಸಹೋದರನ ಪುತ್ರಿ. ಅಶೋಕ್, ಅರುಣಾ ಬಲರಾಜ್, ಅವಿನಾಶ್, ಕುರಿಪ್ರತಾಪ್ , ದಿನೇಶ್ ಮಂಗಳೂರು, ವಿಜಯ್ ಚೆಂಡೂರು, ಕಡ್ಡಿಪುಡಿ‌ ಚಂದ್ರು ಚಿತ್ರದ ಇತರೆ ಪ್ರಮಖ ಪಾತ್ರಗಳಲ್ಲಿದ್ದಾರೆ. ಪ್ರಜ್ವಲ್‌ ಪೈ ಸಂಗೀತದ ಹಾಡುಗಳಿಗೆ ಅರ್ಮನ್ ಮಲ್ಲಿಕ್, ಅನಿರುದ್ಧ್ ಶಾಸ್ತ್ರೀ, ಸಂಗೀತ ರವೀಂದ್ರನಾಥ್, ಪ್ರಜ್ವಲ್ ಪೈ ದನಿಯಾಗಿದ್ದಾರೆ. ಅಗಲಿದ ನಟ ಪುನೀತ್ ರಾಜ್ ಕುಮಾರ್ ಅವರೂ ಚಿತ್ರದ ಒಂದು ಹಾಡಿಗೆ ದನಿಯಾಗಿದ್ದಾರೆ ಎನ್ನುವುದು ವಿಶೇಷ. KRG ಸ್ಟುಡಿಯೋಸ್‌ ರಾಜ್ಯಾದ್ಯಂತ ಚಿತ್ರವನ್ನು ವಿತರಿಸುತ್ತಿದೆ.

Previous articleಅಲ್ಲು ಅರ್ಜುನ್‌ – ತ್ರಿವಿಕ್ರಮ್‌ ತೆಲುಗು ಸಿನಿಮಾ | ಮತ್ತೊಮ್ಮೆ ಒಂದಾದ ಹಿಟ್‌ ಜೋಡಿ
Next articleಸತ್ಯ ಹೆಗಡೆ ಸ್ಟುಡಿಯೋಸ್‌ ‘ಟ್ರೈನ್‌’ | ಪ್ರತಿಭಾವಂತರಿಗೆ ‘AnekaPlus’ OTTಯಲ್ಲಿ ಅವಕಾಶ

LEAVE A REPLY

Connect with

Please enter your comment!
Please enter your name here