ನಟರಾದ ಸುದೀಪ್ ಮತ್ತು ಅಜಯ್ ದೇವಗನ್ ಮಧ್ಯೆಯ ನಿನ್ನೆಯ ಟ್ವೀಟ್ ವಾರ್ ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ. ಸಿಎಂ ಬೊಮ್ಮಾಯಿ ಸೇರಿದಂತೆ ಹಲವು ರಾಜಕಾರಣಿಗಳು ಹಾಗೂ ದಕ್ಷಿಣದ ಸಿನಿಮಾರಂಗದ ಅನೇಕರು ಸುದೀಪ್ರನ್ನು ಬೆಂಬಲಿಸಿ ಟ್ವೀಟ್ ಮಾಡಿದ್ದಾರೆ.
ನಿನ್ನೆ ಬಾಲಿವುಡ್ ನಟ ಅಜಯ್ ದೇವಗನ್ ಮತ್ತು ನಟ ಸುದೀಪ್ ಭಾಷೆಗೆ ಸಂಬಂಧಿಸಿದಂತೆ ಟ್ವೀಟ್ಗಳ ಮೂಲಕ ಸುದ್ದಿಯಾಗಿದ್ದರು. ಇಬ್ಬರಿಗೂ ದೊಡ್ಡ ಸಂಖ್ಯೆಯಲ್ಲಿ ಪರ – ವಿರೋಧದ ಬೆಂಬಲ ವ್ಯಕ್ತವಾಗಿದ್ದವು. ದಕ್ಷಿಣ ಭಾರತದ ಅನೇಕರು ಅಜಯ್ ದೇವಗನ್ರ ‘ಹಿಂದಿ ರಾಷ್ಟ್ರಭಾಷೆ’ ಹೇಳಿಕೆಯನ್ನು ಬಲವಾಗಿ ಖಂಡಿಸಿದ್ದಾರೆ. ಅವಸರದ ಹೇಳಿಕೆಯಿಂದಾಗಿ ಅಜಯ್ ದೇವಗನ್ ಮುಜುಗರಕ್ಕೊಳಗಾಗಿದ್ದಾರೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸುದೀಪ್ ಮಾತನಾಡಿರುವುದು ಸರಿ ಎಂದಿದ್ದರೆ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಿನ್ನೆಯೇ ಟ್ವೀಟ್ ಮೂಲಕ ತಮ್ಮ ನಿಲುವು ಸ್ಪಷ್ಟಪಸಡಿಸಿದ್ದರು. ನಟಿ ರಮ್ಯಾ, “ಹಿಂದಿ ರಾಷ್ಟ್ರಭಾಷೆ ಎಂದಿರುವ ಅಜಯ್ ತಿಳಿವಳಿಕೆ ಬಗ್ಗೆ ಸಂದೇಹ ಮೂಡುತ್ತದೆ” ಎನ್ನುವ ಅರ್ಥದಲ್ಲಿ ಖಾರವಾಗಿ ಟ್ವೀಟ್ ಮಾಡಿದ್ದರು. ನಟರಾದ ನೀನಾಸಂ ಸತೀಶ್, ಚೇನತ್ ಸೇರಿದಂತೆ ಮತ್ತೆ ಕೆಲವರು ಸುದೀಪ್ ನಿಲುವನ್ನು ಸಮರ್ಥಿಸಿಕೊಂಡದ್ದಲ್ಲದೆ ದೇವಗನ್ಗೆ ಭಾಷಾ ನೀತಿಯ ಬಗ್ಗೆ ಪಾಟ ಮಾಡಿದ್ದಾರೆ. ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಚಿತ್ರನಿರ್ದೇಶಕ ರಾಮ್ಗೋಪಾಲ್ ವರ್ಮಾ, ನಟ ಪ್ರಕಾಶ್ ಬೆಳವಾಡಿ ಸೇರಿದಂತೆ ಇಂದು ಹಲವರು ಟ್ವೀಟ್ಗಳನ್ನು ಮಾಡಿದ್ದಾರೆ.