ಚೇತನ್‌ ಕೇಶವ್‌ ನಿರ್ದೇಶನದಲ್ಲಿ ವಸಿಷ್ಠ ಸಿಂಹ ನಟಿಸುತ್ತಿರುವ ‘Love…ಲಿ’ ಚಿತ್ರದ ಪ್ರಮುಖ ಪಾತ್ರದಲ್ಲಿ ಸಮೀಕ್ಷಾ ನಟಿಸುತ್ತಿದ್ದಾರೆ. ಚಿತ್ರದಲ್ಲಿ ಅವರು ಕಾರ್ಪೋರೇಟ್‌ ಕಂಪನಿಯೊಂದರ ಉದ್ಯೋಗಿಯಾಗಿ ಕಾಣಿಸಿಕೊಳ್ಳಲಿದ್ದಾರೆ.

ಕನ್ನಡ ಚಿತ್ರರಂಗದಲ್ಲಿ ಇತ್ತೀಚೆಗೆ ಗಮನ ಸೆಳೆಯುತ್ತಿರುವ ಮಲೆನಾಡಿನ ಸಮೀಕ್ಷಾ ‘Love…ಲಿ’ ಚಿತ್ರದ ಪ್ರಮುಖ ಪಾತ್ರದಲ್ಲಿ ನಟಿಸಲಿದ್ದಾರೆ. ಇತ್ತೀಚೆಗಷ್ಟೇ ತೆರೆಕಂಡ ಪುನೀತ್‌ ರಾಜಕುಮಾರ್‌ ಅವರ ಕೊನೆಯ ಸಿನಿಮಾ ‘ಜೇಮ್ಸ್‌’ನಲ್ಲಿ ಅವರು ನಟಿಸಿದ್ದರು. ಗಣೇಶ್ ಹಾಗೂ ಭಾವನಾ ನಟನೆಯ ’99’ ಸಿನಿಮಾದಲ್ಲೂ ಅವರಿಗೆ ಉತ್ತಮ ಪಾತ್ರವಿತ್ತು. ‘Love..ಲಿ’ ರೋಮ್ಯಾಂಟಿಕ್ – ಲವ್ ಸ್ಟೋರಿ ಸಿನಿಮಾ. ರೋಮ್ಯಾಂಟಿಕ್‌ ಲವ್ ಸ್ಟೋರಿ ಜೊತೆಗೆ ರೌಡಿಯಿಸಂ ಕೂಡ ಕಥಾಹಂದರದಲ್ಲಿ ಹಾಸುಹೊಕ್ಕಾಗಿದೆ ಎನ್ನುತ್ತಾರೆ ನಿರ್ದೇಶಕರು. ಕಳೆದ ಎಂಟು ವರ್ಷಗಳಿಂದ ವಸಿಷ್ಠ ಸಿಂಹ ಜೊತೆಯಲ್ಲಿರುವ, ‘ಮಫ್ತಿ’ ನಿರ್ದೇಶಕ ನರ್ತನ್ ಜೊತೆ ಕೆಲಸ ಮಾಡಿ ಅನುಭವವಿರುವ ಚೇತನ್ ಕೇಶವ್ ‘Love…ಲಿ’ ಸಿನಿಮಾ ನಿರ್ದೇಶಿಸುತ್ತಿದ್ದಾರೆ. ಮೇ 4 ರಿಂದ ಬೆಂಗಳೂರು ಸುತ್ತಮುತ್ತ ಸಿನಿಮಾದ ಶೂಟಿಂಗ್ ಶುರುವಾಗಲಿದೆ.

ಎಂ.ಆರ್.ರವೀಂದ್ರ ಕುಮಾರ್ ನಿರ್ಮಾಣ, ಅನೂಪ್ ಸೀಳಿನ್ ಸಂಗೀತ, ಅಶ್ವಿನ್ ಕೆನೆಡಿ ಛಾಯಾಗ್ರಹಣ ಈ ಸಿನಿಮಾಕ್ಕಿದೆ. ಕಂಚಿನ ಕಂಠದ ವಸಿಷ್ಠ ಸಿಂಹ ಕನ್ನಡದ ಜೊತೆಗೆ ತೆಲುಗು ಭಾಷೆಯಲ್ಲಿಯೂ ಬ್ಯುಸಿಯಾಗಿದ್ದಾರೆ. ಸದ್ಯ ಅವರ ಕಾಲಚಕ್ರ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಈ ಸಿನಿಮಾ ಜೊತೆಗೆ ‘ತಲ್ವಾರ್ ಪೇಟೆ’ ಸಿನಿಮಾದಲ್ಲಿ ಹೀರೋ ಆಗಿ ನಟಿಸುತ್ತಿದ್ದಾರೆ. ಹೆಡ್ ಬುಷ್, ಸಿಂಬಾ, ಓದೆಲಾ ರೈಲ್ವೇ ಸ್ಟೇಷನ್… ವಸಿಷ್ಠರ ಇತರೆ ಸಿನಿಮಾಗಳು.

Previous articleನಟ ಸುದೀಪ್‌ಗೆ ರಾಜಕಾಣಿಗಳು, ಕಲಾವಿದರು ಮತ್ತಿತರರ ಬೆಂಬಲ
Next articleಸಸ್ಪೆನ್ಸ್‌ – ಥ್ರಿಲ್ಲರ್‌ ‘ದ್ವಿಮುಖ’; ಮೇ 6ಕ್ಕೆ ಸಿನಿಮಾ ತೆರೆಗೆ

LEAVE A REPLY

Connect withPlease enter your comment!
Please enter your name here