ಕಿರುತೆರೆಯಲ್ಲಿ ದೊಡ್ಡ ಜನಪ್ರಿಯತೆ ಪಡೆದ ಕಿರಣ್‌ ರಾಜ್‌ ನಟನೆಯ ‘ರಾನಿ’ ಸಿನಿಮಾ ಸದ್ದು ಮಾಡುತ್ತಿದೆ. ಸದ್ಯ ಚಿತ್ರದ ‘ಕೋಲೆ ಕೋಲೆ’ ಸಾಂಗ್‌ ಬಿಡುಗಡೆಯಾಗಿದೆ. ಗುರುತೇಜ್‌ ಶೆಟ್ಟಿ ನಿರ್ದೇಶನದ ಚಿತ್ರಕ್ಕೆ ಕದ್ರಿ ಮಣಿಕಾಂತ್‌ ಗೀತ ಸಂಗೀತ ಮತ್ತು ಸಚಿನ್‌ ಬಸ್ರೂರು ಹಿನ್ನೆಲೆ ಸಂಗೀತವಿದೆ.

ಕಿರಣ್ ರಾಜ್ ನಾಯಕನಾಗಿ ನಟಿಸಿರುವ ‘ರಾನಿ’ ಚಿತ್ರದ ‘ಕೋಲೆ ಕೋಲೆ’ ಜಾನಪದ ಶೈಲಿಯ ಮಾಸ್ ಹಾಡು T -Series Youtube ಚಾನಲ್‌ನಲ್ಲಿ ಬಿಡುಗಡೆಯಾಗಿದೆ. ‘ನಾನು ನಿರ್ದೇಶಕರ ನಟನಾಗಬೇಕು. ನಿರ್ದೇಶಕ ಬರೆಯುವ ಪಾತ್ರಕ್ಕೆ ನ್ಯಾಯ ಕೊಡುವುದು ಪ್ರತಿಯೊಬ್ಬ ನಟನ ಕರ್ತವ್ಯ. ಆ ಕಾರಣದಿಂದ ನಾನು ಸದಾ ಕಲಿಯುತ್ತಿರುತ್ತೇನೆ. ‘ರಾನಿ’ ಒಂದು ಕ್ಲಾಸಿಕ್ ಸಿನಿಮಾ. ಹಾಸ್ಯ, ಪ್ರೇಮ, ಕೌಟುಂಬಿಕ ಕಥೆ, ಆಕ್ಷನ್ ಎಲ್ಲವೂ ಒಂದೇ ಸಿನಿಮಾದಲ್ಲಿ ಸಿಕ್ಕಿರುವುದು ನನ್ನ ಭಾಗ್ಯ. ಚಿತ್ರದ ಮೊದಲ ಹಾಡು ಬಿಡುಗಡೆಯಾಗಿ ಹಿಟ್ ಆಗಿದೆ ಜನರ ಪ್ರತಿಕ್ರಿಯೆ ನೋಡಿ ಕೆಲಸ ಮಾಡುವ ಉತ್ಸಾಹ ಇನ್ನಷ್ಟು ಬಂದಿದೆ’ ಎನ್ನುತ್ತಾರೆ ಚಿತ್ರದ ಹೀರೋ ಕಿರಣ್ ರಾಜ್.

ಗುರುತೇಜ್‌ ಶೆಟ್ಟಿ ನಿರ್ದೇಶನದ ಚಿತ್ರ ತೆರೆಗೆ ಸಿದ್ಧವಾಗುತ್ತಿದೆ. ಮೊದಲ ಪ್ರತಿ ಸಿದ್ಧವಾಗಿದ್ದು, ಸದ್ಯದಲ್ಲೇ ಬಿಡುಗಡೆ ದಿನಾಂಕ ಘೋಷಿಸುತ್ತೇವೆ ಎನ್ನುತ್ತಾರೆ ನಿರ್ದೇಶಕರು. ಇದು Star Creations ಬ್ಯಾನರ್‌ನ ಮೊದಲ ಚಿತ್ರವಾಗಿದ್ದು, ಉಮೇಶ್ ಹೆಗ್ಡೆ‌ ಮತ್ತು ಚಂದ್ರಕಾಂತ್ ಪೂಜಾರಿ ನಿರ್ಮಾಣ ಮಾಡಿದ್ದಾರೆ. ಚಿತ್ರದಲ್ಲಿ ಸಮೀಕ್ಷಾ, ರಾಧ್ಯ ಮತ್ತು ಅಪೂರ್ವ ಮೂವರು ನಾಯಕಿಯರಿದ್ದಾರೆ. ರವಿ ಶಂಕರ್, ಮೈಕೋ ನಾಗರಾಜ್, ಗಿರೀಶ್ ಹೆಗ್ಡೆ, ಸೂರ್ಯ ಕುಂದಾಪುರ, ಧರ್ಮಣ್ಣ ಕಡೂರ್ ಚಿತ್ರದ ಇತರೆ ಪ್ರಮುಖ ಪಾತ್ರಗಳಲ್ಲಿದ್ದಾರೆ. ಕದ್ರಿ ಮಣಿಕಾಂತ್ ಸಂಗೀತ ನಿರ್ದೇಶನ, ಪ್ರಮೋದ್‌ ಮರವಂತೆ ಗೀತರಚನೆ, ಸಚಿನ್ ಬಸ್ರೂರ್ ಹಿನ್ನೆಲೆ ಸಂಗೀತ, ರಾಘವೇಂದ್ರ ಬಿ ಕೋಲಾರ ಛಾಯಾಗ್ರಾಹಣ ಚಿತ್ರಕ್ಕಿದೆ. ಸದಾ ಒಂದಲ್ಲೊಂದು ಸಾಹಸ ಚಟುವಟಿಕೆಯಲ್ಲಿ ತೊಡಗಿಕೊಳ್ಳುವ ಕಿರಣ್ ರಾಜ್ ‘ರಾನಿ’ ಚಿತ್ರಕ್ಕಾಗಿ ಸ್ಕೈ ಡೈವಿಂಗ್ ಹಾಗೂ ಪ್ಯಾರಾಗ್ಲೈಡಿಂಗ್ ಮಾಡಿ ಗಮನ ಸೆಳೆದಿದ್ದರು.

LEAVE A REPLY

Connect with

Please enter your comment!
Please enter your name here