ರಾಜಮೌಳಿ ನಿರ್ದೇಶನದ ‘RRR’ ಜಾಗತಿಕ ಸಿನಿಪ್ರಿಯರನ್ನು ಸೆಳೆದ ಸಿನಿಮಾ. ದಾಖಲೆಯ ವಹಿವಾಟು ನಡೆಸಿದ ಸಿನಿಮಾದ ಮೇಕಿಂಗ್‌ ಕುರಿತು ಸಾಕ್ಷ್ಯಚಿತ್ರವೊಂದು ತಯಾರಾಗಿದೆ. ‘RRR: Behind and Beyond’ ಶೀರ್ಷಿಕೆಯಡಿ ತಯಾರಾಗಿರುವ ಸಾಕ್ಷ್ಯಚಿತ್ರದ ಟ್ರೇಲರ್‌ ರಿಲೀಸ್‌ ಆಗಿದೆ. ಈ ಸಾಕ್ಷ್ಯಚಿತ್ರ ನಾಳೆ (ಡಿಸೆಂಬರ್‌ 20) ಕೆಲವು ಆಯ್ದ ಚಿತ್ರಮಂದಿರಗಳಲ್ಲಿ ಸ್ಕ್ರೀನ್‌ ಆಗುತ್ತಿರುವುದು ವಿಶೇಷ.

ಎಸ್‌ ಎಸ್‌ ರಾಜಮೌಳಿ ನಿರ್ದೇಶನ, ರಾಮ್‌ ಚರಣ್‌ ಮತ್ತು ಜ್ಯೂನಿಯರ್‌ NTR ಅಭಿನಯದ ‘RRR’ ತೆಲುಗು ಸಿನಿಮಾ ಜಾಗತಿಕ ವೇದಿಕೆಯಲ್ಲಿ ಗಮನ ಸೆಳೆದಿತ್ತು. ಚಿತ್ರದ ‘ನಾಟು ನಾಟು’ ಹಾಡು ಆಸ್ಕರ್‌ನಲ್ಲಿ Best Original Song ಪ್ರಶಸ್ತಿ ಗಳಿಸಿತ್ತು. larger-than-life ಇಮೇಜ್‌ನ ಸಿನಿಮಾದ ಮೇಕಿಂಗ್‌ ಬಗ್ಗೆ ಸಿನಿಪ್ರಿಯರಲ್ಲಿ ಕುತೂಹಲವಂತೂ ಇದೆ. ಈ ಕುತೂಹಲ ತಣಿಸುವ ಹಾದಿಯಲ್ಲಿ ಚಿತ್ರತಂಡ ‘RRR: Behind and Beyond’ ಸಾಕ್ಷ್ಯಚಿತ್ರ ನಿರ್ಮಿಸಿದೆ. ಸಾಕ್ಷ್ಯಚಿತ್ರದ ಟ್ರೇಲರ್‌ ರಿಲೀಸ್‌ ಆಗಿದ್ದು, ನಾಳೆ (ಡಿಸೆಂಬರ್‌ 20) ಕೆಲವು ಆಯ್ದ ಚಿತ್ರಮಂದಿರಗಳಲ್ಲಿ ಸ್ಕ್ರೀನ್‌ ಆಗಲಿದೆ. ಟ್ರೇಲರ್‌ನಲ್ಲಿ ಅದ್ಧೂರಿ ಮತ್ತು ಬೃಹತ್ತಾದ ಸೆಟ್‌ಗಳಿವೆ. ‘ನಾಟು ನಾಟು’ ಐಕಾನಿಕ್‌ ಡ್ಯಾನ್ಸ್‌ ಪ್ರಾಕ್ಟೀಸ್‌ ಸೆಷನ್‌, ಪ್ರೇಕ್ಷಕರನ್ನು ಅಚ್ಚರಿಗೆ ದೂಡಿದ ಸೀನ್‌ಗಳ ತಯಾರಿ ಕುರಿತ ಮಾಹಿತಿ ಸಿಗುತ್ತದೆ. ‘ಎರಡು ಹುಲಿಗಳೊಂದಿಗೆ ಚಿತ್ರೀಕರಣ ಮಾಡುವ ಸವಾಲು ನನ್ನದಾಗಿತ್ತು! RRR ನನ್ನ ಉಸಿರಿರುವವರೆಗೂ ನೆನಪಿನಲ್ಲಿ ಉಳಿದಿರುತ್ತದೆ’ ಎನ್ನುವ ನಿರ್ದೇಶಕ ರಾಜಮೌಳಿ ಅವರ ಮಾತುಗಳು ಕೇಳಿಸುತ್ತವೆ. ವೀಡಿಯೋ ತುಣುಕಿನಲ್ಲಿ ರಾಜಮೌಳಿ ಅವರನ್ನು ಪ್ರೀತಿಯಿಂದ ‘ಜಕ್ಕಣ್ಣ’ ಎಂದು ಕರೆದಿದ್ದಾರೆ ಜ್ಯೂನಿಯರ್‌ ಎನ್‌ಟಿಆರ್‌.

ಹಾಲಿವುಡ್‌ನ ಮೇರು ಚಿತ್ರನಿರ್ದೇಶಕರಾದ ಸ್ಟೀವನ್‌ ಸ್ಪಿಲ್‌ಬರ್ಗ್‌, ಜೇಮ್ಸ್‌ ಕೆಮರಾನ್‌ ಅವರಿಂದಲೂ ‘RRR’ ಮೆಚ್ಚುಗೆಗೆ ಪಾತ್ರವಾಗಿತ್ತು. ಚಿತ್ರದಲ್ಲಿನ VFX, ನವಿರೇಳಿಸುವ ಆಕ್ಷನ್‌ ಸನ್ನಿವೇಶಗಳು ಮತ್ತು ಆಕರ್ಷಕ ನಿರೂಪಣೆಯ ಬಗ್ಗೆ ಇವರು ಮಾತನಾಡಿದ್ದರು. ರಾಮ್‌ ಚರಣ್‌ ಮತ್ತು ಜ್ಯೂನಿಯರ್‌ NTR ಮುಖ್ಯಪಾತ್ರಗಳ ಜೊತೆ ಅಲಿಯಾ ಭಟ್‌, ಅಜಯ್‌ ದೇವಗನ್‌, ಶ್ರಿಯಾ ಶರಣ್‌ ಸ್ಕ್ರೀನ್‌ ಪ್ರಸೆನ್ಸ್‌ ಪ್ರೇಕ್ಷಕರಿಗೆ ಇಷ್ಟವಾಗಿತ್ತು. ಇತರೆ ಪ್ರಮುಖ ಪಾತ್ರಗಳಲ್ಲಿ ಸಮುದ್ರಖನಿ, ರೇ ಸ್ಟೀವನ್‌ಸನ್‌, ಅಲಿಸಾನ್‌ ಡೂಡಿ, ಒಲಿವಿಯಾ ಮೊರಿಸ್‌ ಚಿತ್ರದ ಮೆರುಗು ಹೆಚ್ಚಿಸಿದ್ದರು. ಎಂ ಎಂ ಕೀರವಾಣಿ ತಮ್ಮ ಸಂಗೀತದ ಮೂಲಕ ಚಿತ್ರದ ಸನ್ನಿವೇಶಗಳನ್ನು elevate ಮಾಡಿದ್ದರು. 95ನೇ ಅಕಾಡೆಮಿ ಪ್ರಶಸ್ತಿ ಸಮಾರಂಭದಲ್ಲಿ Best Original Song ವಿಭಾಗದಲ್ಲಿ ಚಿತ್ರದ ‘ನಾಟು ನಾಟು’ ಹಾಡು ಪ್ರಶಸ್ತಿ ಗಳಿಸಿತು. 2022ರ ಮಾರ್ಚ್‌ 25ರಂದು ತೆರೆಕಂಡ ಸಿನಿಮಾ 1200 ಕೋಟಿ ರೂಪಾಯಿ ಜಾಗತಿಕ ವಹಿವಾಟು ನಡೆಸಿ ದಾಖಲೆ ಬರೆದಿತ್ತು. ಮೇಕಿಂಗ್‌ ಕುರಿತ ಸಾಕ್ಷ್ಯಚಿತ್ರ ಸಿನಿಮಾ ವಿದ್ಯಾರ್ಥಿಗಳಿಗೆ ಪಾಠವಾಗಲಿ ಎನ್ನುವುದು ಚಿತ್ರತಂಡದ ಆಶಯ. ನಾಳೆ (ಡಿಸೆಂಬರ್‌ 20) ಕೆಲವು ಆಯ್ದ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿರುವ ಸಿನಿಮಾ ಮುಂದಿನ ದಿನಗಳಲ್ಲಿ Netflixನಲ್ಲಿ ಸ್ಟ್ರೀಮ್‌ ಆಗಲಿದೆ.

LEAVE A REPLY

Connect with

Please enter your comment!
Please enter your name here