ಶಕ್ತಿಪ್ರತಾಪ್‌ ಸಿಂಗ್‌ ಹಡಾ ನಿರ್ದೇಶನದ ‘ಆಪರೇಷನ್‌ ವ್ಯಾಲೆಂಟೇನ್‌’ ತೆಲುಗು ಸಿನಿಮಾದ ಟೀಸರ್‌ ಬಿಡುಗಡೆಯಾಗಿದೆ. ವರುಣ್‌ ತೇಜ್‌ ಹೀರೋ ಆಗಿ ನಟಿಸಿರುವ ಆಕ್ಷನ್‌ – ಥ್ರಿಲ್ಲರ್‌ ಚಿತ್ರದ ಮೂಲಕ miss world ಮಾನುಷಿ ಚಿಲ್ಲರ್‌ ಟಾಲಿವುಡ್‌ಗೆ ಪರಿಚಯವಾಗುತ್ತಿದ್ದಾರೆ.

ವರುಣ್ ತೇಜ್ ಮತ್ತು ಮಾನುಷಿ ಚಿಲ್ಲರ್‌ ಅಭಿನಯದ ‘ಆಪರೇಷನ್ ವ್ಯಾಲೆಂಟೇನ್’ ತೆಲುಗು ಚಿತ್ರದ ಟೀಸರ್‌ ಬಿಡುಗಡೆಯಾಗಿದೆ. ಶಕ್ತಿಪ್ರತಾಪ್ ಸಿಂಗ್ ಹಡಾ ನಿರ್ದೇಶನದ ಈ ಚಿತ್ರದ ಮೂಲಕ miss world ಮಾನುಷಿ ಛಿಲ್ಲರ್ ತೆಲುಗು ಚಿತ್ರರಂಗಕ್ಕೆ ಪದಾರ್ಪಣೆ ಮಾಡುತ್ತಿದ್ದಾರೆ. ವಾಯುಪಡೆಯ ತಂಡವನ್ನು ಮತ್ತೊಂದು ದೇಶಕ್ಕೆ ಕಳುಹಿಸಿದಾಗ ಅದು ಕದನ ಮುಕ್ತ ಎಂದು ಘೋಷಿಸುವ ಧ್ವನಿಯೊಂದಿಗೆ ಟೀಸರ್‌ ಪ್ರಾರಂಭವಾಗುತ್ತದೆ. ಮತ್ತೊಂದು ಸಂವಾದವು, ಪ್ರತೀಕಾರವು ರಾಷ್ಟ್ರಗಳ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದನ್ನು ಒತ್ತಿ ಹೇಳುತ್ತದೆ. ವರುಣ್ ತೇಜ್ ಅವರನ್ನು ಏರ್ ಫೋರ್ಸ್ ಪೈಲಟ್ ಅರ್ಜುನ್ ದೇವ್ ಎಂದು ಪರಿಚಯಿಸಲಾಗಿದೆ. ಮಾನುಷಿ ಚಿಲ್ಲರ್‌ ಏರ್‌ ಪೋರ್ಸ್‌ ಅಧಿಕಾರಿ ಹಾಗೂ ಅರ್ಜುನ್ ಪ್ರೇಯಸಿಯಾಗಿ ಕಾಣಿಸಿಕೊಂಡಿದ್ದಾರೆ.

ಈ ಚಲನಚಿತ್ರವನ್ನು Sony Pictures International ಬ್ಯಾನರ್‌ ಅಡಿಯಲ್ಲಿ ಸಂದೀಪ್ ಮುದ್ದ ನಿರ್ಮಿಸಿದ್ದಾರೆ. ಈ ವರ್ಷ ಆಕ್ಷನ್ ಥ್ರಿಲ್ಲರ್ ‘ಗಾಂಡೀವಧಾರಿ ಅರ್ಜುನ’ ಚಿತ್ರದಲ್ಲಿ ಕಾಣಿಸಿಕೊಂಡಿದ್ದ ವರುಣ್ ತೇಜ್ ಈ ದ್ವಿಭಾಷಾ ಚಿತ್ರದೊಂದಿಗೆ ಮರಳುತ್ತಿದ್ದಾರೆ. ಚಿತ್ರಕ್ಕೆ ಮಿಕ್ಕಿ ಜೆ ಮೇಯರ್ ಸಂಗೀತ ಸಂಯೋಜಿಸಿದ್ದು, ಹರಿ ಕೆ ವೇದಾಂತಂ ಛಾಯಾಗ್ರಹಣವಿದೆ. ಸಾಯಿ ಮಾಧವ್ ಬುರ್ರಾ ಸಂಭಾಷಣೆ ಬರೆದಿದ್ದು, ನವೀನ್ ನೂಲಿ ಸಂಕಲನ, ಅವಿನಾಶ್ ಕೊಲ್ಲ ನಿರ್ಮಾಣ ವಿನ್ಯಾಸಕರಾಗಿ ಕಾರ್ಯನಿರ್ವಹಿಸಿದ್ದಾರೆ. ಚಿತ್ರವು ಫೆಬ್ರುವರಿ 16, 2024ರಂದು ಮೂಲ ತೆಲುಗು ಮತ್ತು ಹಿಂದಿ ಭಾಷೆಗಳಲ್ಲಿ ಚಿತ್ರಮಂದಿರಗಳಲ್ಲಿ ತೆರೆಕಾಣಲಿದೆ.

LEAVE A REPLY

Connect with

Please enter your comment!
Please enter your name here