ಸಿ ಎಸ್‌ ಕಾರ್ತಿಕೇಯನ್‌ ಚಿತ್ರಕಥೆ ರಚಿಸಿ ನಿರ್ದೇಶಿಸಿರುವ ‘ಸಭಾ ನಾಯಗನ್‌’ ತಮಿಳು ಚಿತ್ರದ ಟ್ರೇಲರ್‌ ಬಿಡುಗಡೆಯಾಗಿದೆ. ಅಶೋಕ್‌ ಸೆಲ್ವನ್‌, ಮೇಘಾ ಆಕಾಶ್‌, ಕಾರ್ತಿಕಾ ಮುರಳೀಧರನ್‌, ಚಾಂದಿನಿ ಚೌಧರಿ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ಸಿನಿಮಾ ಇದೇ ಡಿಸೆಂಬರ್‌ 15ರಂದು ತೆರೆಕಾಣಲಿದೆ.

ಅಶೋಕ್ ಸೆಲ್ವನ್ ಮುಖ್ಯಭೂಮಿಕೆಯಲ್ಲಿ ನಟಿಸಿರುವ ‘ಸಭಾ ನಾಯಗನ್’ ತಮಿಳು ಚಿತ್ರದ ಟ್ರೇಲರ್‌ ಬಿಡುಗಡೆಯಾಗಿದೆ. ಈ ಸಿನಿಮಾವನ್ನು ಸಿ ಎಸ್ ಕಾರ್ತಿಕೇಯನ್ ಬರೆದು ನಿರ್ದೇಶಿಸಿದ್ದಾರೆ. ಈ ಚಿತ್ರಕಥೆಯು ಅರವಿಂದ್ ಸುತ್ತ ಸುತ್ತುತ್ತದೆ. ಅವನ ಜೀವನದ ಮೂರು ವಿಭಿನ್ನ ಹಂತಗಳಲ್ಲಿ ಮೇಘಾ ಆಕಾಶ್, ಕಾರ್ತಿಕಾ ಮುರಳೀಧರನ್ ಮತ್ತು ಚಾಂದಿನಿ ಚೌಧರಿ – ಈ ಮೂರು ಜನ ಹುಡುಗಿಯರನ್ನು ಪ್ರೀತಿಸುತ್ತಾನೆ. ಪ್ರೌಢಶಾಲಾ ಹಂತದಲ್ಲಿ ಅವರ ಸ್ನೇಹಿತರಿಗೆ ಸುಳ್ಳು ಹೇಳಿ ಮೇಘಾ ಆಕಾಶ್‌ ಜೊತೆಯಲ್ಲಿ ಸುತ್ತಾಡಲು ಹೋಗುತ್ತಾನೆ. ಕಾಲೇಜು ಹಂತದಲ್ಲಿ ಅವನ ಸೀನಿಯರ್‌ಗಳಿಗೆ ಸುಳ್ಳು ಹೇಳಿ ಕಾರ್ತಿಕಾ ಮುರಳೀಧರನ್‌ ಜೊತೆಯಲ್ಲಿ ಡೇಟಿಂಗ್ ಹೋಗುತ್ತಾನೆ. ಹೀಗೆ ಮೋಜು ಮಸ್ತಿಯಲ್ಲಿ ಅರವಿಂದ್ ತನ್ನ ಜೀವನವನ್ನು ಕಳೆಯುವುದನ್ನು ಟ್ರೇಲರ್‌ನಲ್ಲಿ ತೋರಿಸಲಾಗಿದೆ.

ಚಿತ್ರದಲ್ಲಿ ಮೇಘಾ ಆಕಾಶ್, ಕಾರ್ತಿಕಾ ಮುರಳೀಧರನ್, ಮತ್ತು ಚಾಂದಿನಿ ಚೌಧರಿ ಮೂರು ಜನ ನಾಯಕಿಯರು ನಟಿಸಿದ್ದಾರೆ. ಮೈಲ್‌ ಸಾಮಿ, ಮೈಕೆಲ್ ತಂಗದುರೈ, ಉಡುಮಲೈ ರವಿ, ಅರುಣ್ ಕುಮಾರ್, ಜೈಶೀಲನ್ ಶಿವರಾಮ್, ಶ್ರೀರಾಮ್ ಕ್ರಿಶ್, ಶೆರ್ಲಿನ್ ಸೇಠ್, ವಿವಿಯಶಾಂತ್, ಅಕ್ಷಯ ಹರಿಹರನ್ ಮತ್ತು ತುಳಸಿ ಶಿವಮಣಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. Clear Water Films INC ಬ್ಯಾನರ್‌ ಅಡಿಯಲ್ಲಿ ಅರವಿಂದ್ ಜಯಬಾಲನ್, ಅಯ್ಯಪ್ಪನ್ ಜ್ಞಾನವೇಲ್ ಮತ್ತು ಕ್ಯಾಪ್ಟನ್ ಮೇಘವಾಣನ್ ಇಸೈವಾಣನ್ ಚಿತ್ರ ನಿರ್ಮಿಸಿದ್ದಾರೆ. ಲಿಯಾನ್ ಜೇಮ್ಸ್ ಸಂಗೀತ ಸಂಯೋಜಿಸಿದ್ದು, ಬಾಲಸುಬ್ರಮಣ್ಯಂ, ದಿನೇಶ್ ಪುರುಷೋತ್ತಮನ್, ಮತ್ತು ಪ್ರಭು ರಾಘವ್ ಅವರ ಛಾಯಾಗ್ರಹಣ ಮತ್ತು ಗಣೇಶ್ ಶಿವ ಅವರ ಸಂಕಲನವಿದೆ. ಡಿಸೆಂಬರ್ 15ರಂದು ಸಿನಿಮಾ ಬಿಡುಗಡೆಯಾಗಲಿದೆ.

LEAVE A REPLY

Connect with

Please enter your comment!
Please enter your name here