ಪುಷ್ಪೇಂದ್ರಸಿಂಗ್‌ ನಿರ್ದೇಶನದ ವಿವಾದಿತ ಹಿಂದಿ ಸಿನಿಮಾ ‘ಅಜ್ಮೀರ್‌ 92’ ಟೀಸರ್‌ ಬಿಡುಗಡೆಯಾಗಿದೆ. ನೈಜ ಘಟನೆಗಳನ್ನು ಆಧರಿಸಿದ ಚಿತ್ರದ ಬಿಡುಗಡೆಗೆ ಹಲವರು ತಡೆ ಕೋರಿ ನ್ಯಾಯಾಲಕ್ಕೆ ಅರ್ಜಿ ಸಲ್ಲಿಸಿದ್ದರು. ಕೋರ್ಟ್‌ ಈ ಮನವಿಗಳನ್ನು ರದ್ದುಗೊಳಿಸಿದ್ದು, ಜುಲೈ 21ರಂದು ಸಿನಿಮಾ ತೆರೆಕಾಣಲಿದೆ.

ಪುಷ್ಪೇಂದ್ರ ಸಿಂಗ್ ನಿರ್ದೇಶನದ ‘ಅಜ್ಮೀರ್ 92’ ಹಿಂದಿ ಚಿತ್ರದ ಟೀಸರ್‌ ಬಿಡುಗಡೆಯಾಗಿದೆ. ಈ ಚಲನಚಿತ್ರವು 1987ರಿಂದ 1992ರ ನಡುವೆ ರಾಜಸ್ಥಾನದ ಅಜ್ಮೀರ್‌ನಲ್ಲಿ ಸುಮಾರು 250ಕ್ಕೂ ಹೆಚ್ಚು ಯುವತಿಯರ ಅತ್ಯಾಚಾರ ಸಂತ್ರಸ್ತೆಯರ ನೈಜ ಘಟನೆಗಳನ್ನು ಆಧರಿಸಿದೆ. ಅತ್ಯಾಚಾರಕ್ಕೆ ಬಲಿಯಾದ ಶಾಲಾ – ಕಾಲೇಜು ಹುಡುಗಿಯರು ಹೇಗೆ ನಗರದ ಪ್ರಬಲ ವ್ಯಕ್ತಿಗಳಿಂದ ಬ್ಲ್ಯಾಕ್‌ಮೇಲ್ ಮಾಡಲ್ಪಡುತ್ತಾರೆ, ಯಾವ ರೀತಿ ಕಿರುಕುಳಕ್ಕೆ ಒಳಗಾಗುತ್ತಾರೆ ಮತ್ತು ಅವರಲ್ಲಿ ಅನೇಕರು ಯಾವ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡರು ಎಂಬುದನ್ನು ಟೀಸರ್‌ ತೋರಿಸಿದೆ. ಚಿತ್ರದಲ್ಲಿ ಮನೋಜ್ ಜೋಶಿ, ಕರಣ್ ವರ್ಮಾ, ರಾಜೇಶ್ ಶರ್ಮಾ, ಜರೀನಾ ವಹಾಬ್, ಬ್ರಿಜೇಂದ್ರ ಕಲಾ ಮತ್ತು ಶಾಲಿನಿ ಕಪೂರ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಸೂರಜ್ ಪಾಲ್ ರಜಾಕ್, ಪುಷ್ಪೇಂದ್ರ ಸಿಂಗ್ ಮತ್ತು ಜ್ಞಾನೇಂದ್ರ ಪ್ರತಾಪ್ ಸಿಂಗ್ ಚಿತ್ರಕಥೆ ಬರೆದಿದ್ದಾರೆ. ರಿಲಯನ್ಸ್ ಎಂಟರ್‌ಟೇನ್‌ಮೆಂಟ್‌ ಬ್ಯಾನರ್‌ನಡಿ ಚಿತ್ರ ತಯಾರಾಗಿದ್ದು, ಪಾರ್ಥಸಖ ದಸ್ಕಬಿ ಸಂಗೀತ ಸಂಯೋಜಿಸಿದ್ದಾರೆ. ಸಿನಿಮಾ ಕೆಲವು ವಿವಾದಗಳಲ್ಲಿ ಸಿಲುಕಿತ್ತು. ಚಿತ್ರಮಂದಿರಗಳು ಮತ್ತು OTT ಪ್ಲಾಟ್‌ಫಾರ್ಮ್‌ಗಳಲ್ಲಿ ಚಿತ್ರದ ಬಿಡುಗಡೆ ನಿಷೇಧಿಸುವಂತೆ ಕೋರಿ ಸಲ್ಲಿಸಲಾದ ಅರ್ಜಿಯನ್ನು ರಾಜಸ್ಥಾನ ಹೈಕೋರ್ಟ್ ರದ್ದುಗೊಳಿಸಿದೆ. ಜುಲೈ 14ರಂದು ಬಿಡುಗಡೆಯಾಗಬೇಕಿದ್ದ ಸಿನಿಮಾ ಜುಲೈ 21ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.

Previous article‘BAD’ ಮಾನ್ವಿತಾ ಫಸ್ಟ್‌ಲುಕ್‌ | ಪಿ ಸಿ ಶೇಖರ್‌ ಸಿನಿಮಾದ ಬೋಲ್ಡ್‌ ಪಾತ್ರದಲ್ಲಿ ನಟಿ
Next articleಬರುಣ್‌ ಸೋಬ್ತಿ ನಟನೆಯ ‘ಕೊಹ್ರಾ’ ಹಿಂದಿ ಸರಣಿ ಇಂದಿನಿಂದ (ಜುಲೈ 15) Netflixನಲ್ಲಿ

LEAVE A REPLY

Connect with

Please enter your comment!
Please enter your name here