ಚಂದು ಮೊಂಡೇಟಿ ನಿರ್ದೇಶನದ ನೂತನ ತೆಲುಗು ಸಿನಿಮಾದಲ್ಲಿ ಸಾಯಿ ಪಲ್ಲವಿ ಮತ್ತು ನಾಗ ಚೈತನ್ಯ ನಟಿಸುತ್ತಿದ್ದಾರೆ. ಇವರಿಬ್ಬರು ಮೊದಲ ಬಾರಿ ಜೊತೆಯಾಗಿದ್ದ 2021ರ ‘ಲವ್‌ ಸ್ಟೋರಿ’ ತೆಲುಗು ಸಿನಿಮಾ ಬಾಕ್ಸ್‌ ಆಫೀಸ್‌ನಲ್ಲಿ ಯಶಸ್ವಿಯಾಗಿತ್ತು. ಈಗ ಮತ್ತೊಮ್ಮೆ ಜೊತೆಯಾಗಿದ್ದು, ಚಿತ್ರವನ್ನು ಗೀತಾ ಆರ್ಟ್ಸ್‌ ಪ್ರೊಡಕ್ಷನ್ಸ್‌ ನಿರ್ಮಿಸುತ್ತಿದೆ.

ಸಾಯಿ ಪಲ್ಲವಿ ಮತ್ತು ನಾಗ ಚೈತನ್ಯ ಮತ್ತೊಂದು ಹೊಸ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಚಂದು ಮೊಂಡೇಟಿ ಈ ಚಿತ್ರವನ್ನು ನಿರ್ದೇಶಿಸಲಿದ್ದಾರೆ. 2021ರ ‘ಲವ್ ಸ್ಟೋರಿ’ ತೆಲುಗು ಚಿತ್ರದಲ್ಲಿ ಇವರು ಜೊತೆಯಾಗಿ ನಟಿಸಿದ್ದರು. ಈ ಸಿನಿಮಾ ಅಲ್ಲು ಅರವಿಂದ್‌ ಅವರ Geetha Arts Productions ಬ್ಯಾನರ್‌ ಅಡಿ ನಿರ್ಮಾಣವಾಗುತ್ತಿದ್ದು, ಈಗಾಗಲೇ ಚಿತ್ರೀಕರಣ ಆರಂಭವಾಗಿದೆ. ಸಾಯಿ ಪಲ್ಲವಿ ಅವರು ಈ ಹಿಂದೆ 2022ರಲ್ಲಿ ಬಿಡುಗಡೆಯಾಗಿದ್ದ ‘ಗಾರ್ಗಿ’ ತಮಿಳು ಚಲನಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ಈ ಸಿನಿಮಾ ಯಶಸ್ವಿಯಾಗಿತ್ತು. ಇನ್ನು ನಾಗಚೈತನ್ಯ ಇತ್ತೀಚೆಗೆ ತೆರೆ ಮೇಲೆ ಕಾಣಿಸಿಕೊಂಡಿದ್ದು ‘ಕಸ್ಟಡಿ’ ತೆಲುಗು ಚಿತ್ರದಲ್ಲಿ. ವೆಂಕಟ್‌ ಪ್ರಭು ನಿರ್ದೇಶನದ ಈ ಚಿತ್ರದಲ್ಲಿ ನಾಗಚೈತನ್ಯ ಪೊಲೀಸ್‌ ಆಫೀಸರ್‌ ಪಾತ್ರದಲ್ಲಿ ನಟಿಸಿದ್ದರು. ಅಮೀರ್‌ ಖಾನ್‌ ನಟನೆಯ ‘ಲಾಲ್‌ಸಿಂಗ್‌ ಛಡ್ಡಾ’, ನಾಗಚೈತನ್ಯ ಅವರ ಇತ್ತೀಚಿನ ಮತ್ತೊಂದು ಸಿನಿಮಾ. ಟಾಮ್‌ ಹ್ಯಾಂಕ್ಸ್‌ ನಟನೆಯ ‘ಫಾರೆಸ್ಟ್‌ ಗಂಪ್‌’ ಇಂಗ್ಲಿಷ್‌ ಸಿನಿಮಾದ ಹಿಂದಿ ರೀಮೇಕಿದು. ಈ ಸಿನಿಮಾದ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು ನಾಗಚೈತನ್ಯ. ‘ಲವ್ ಸ್ಟೋರಿ’ ನಂತರ ಎರಡನೇ ಬಾರಿ ಜೊತೆಯಾಗುತ್ತಿರುವ ನಾಗಚೈತನ್ಯ – ಸಾಯಿ ಪಲ್ಲವಿ ಸಿನಿಮಾ ಬಗ್ಗೆ ಅಭಿಮಾನಿಗಳಲ್ಲಿ ನಿರೀಕ್ಷೆಯಿದೆ.

LEAVE A REPLY

Connect with

Please enter your comment!
Please enter your name here