ನಟ ವಿಜಯ್‌ ಸೇತುಪತಿ ಅವರು ‘ತಿರು ಮಾಣಿಕ್ಕಂ’ ತಮಿಳು ಸಿನಿಮಾದ ಫಸ್ಟ್‌ಲುಕ್‌ ಪೋಸ್ಟರ್‌ ಬಿಡುಗಡೆಗೊಳಿಸಿದ್ದಾರೆ. ‘ಆನಂದಂ ವಿಲಾಯದುಂ ವೀಡು’ ಸಿನಿಮಾ ಖ್ಯಾತಿಯ ನಂದಾ ಪೆರಿಯಸಾಮಿ ನಿರ್ದೇಶನದ ಈ ಸಿನಿಮಾದ ಹೀರೋ ಸಮುದ್ರಖನಿ.

ನಟ, ನಿರ್ದೇಶಕ ಸಮುದ್ರಖನಿ ಅಭಿನಯದ ನೂತನ ತಮಿಳು ಸಿನಿಮಾ ‘ತಿರು ಮಾಣಿಕ್ಕಂ’ ಫಸ್ಟ್‌ಲುಕ್‌ ಪೋಸ್ಟರ್‌ ಬಿಡುಗಡೆಯಾಗಿದೆ. ನಟ ವಿಜಯ್‌ ಸೇತುಪತಿ ಪೋಸ್ಟರ್‌ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ. ‘ಆನಂದಂ ವಿಲಾಯದುಂ ವೀಡು’ ಸಿನಿಮಾ ಖ್ಯಾತಿಯ ನಂದಾ ಪೆರಿಯಸಾಮಿ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಜಿ ಪಿ ರವಿಕುಮಾರ್, ಚಿಂತಾ ಗೋಪಾಲ ಕೃಷ್ಣಾ ರೆಡ್ಡಿ ಮತ್ತು ರಾಜಾ ಸೆಂಥಿಲ್ ನಿರ್ಮಾಣದ ಚಿತ್ರಕ್ಕೆ ವಿಶಾಲ್ ಚಂದ್ರಶೇಖರ್ ಸಂಗೀತ ಸಂಯೋಜಿಸುತ್ತಿದ್ದಾರೆ. ಎಂ ಸುಕುಮಾರ್ ಛಾಯಾಗ್ರಹಣ, ಎಸ್ ಪಿ ರಾಜಾ ಸೇತುಪತಿ ಸಂಕಲನ ಚಿತ್ರಕ್ಕಿದೆ. ಸದ್ಯ ಚಿತ್ರದ ಶೂಟಿಂಗ್ ಪ್ರಗತಿಯಲ್ಲಿದ್ದು, ಶೀಘ್ರದಲ್ಲೇ ಚಿತ್ರದ ಇತರೆ ತಾರಾಬಳಗದ ಬಗ್ಗೆ ಮಾಹಿತಿ ನೀಡುವುದಾಗಿ ನಿರ್ದೇಶಕರು ಹೇಳುತ್ತಾರೆ. ಕಳೆದ ವಾರ ತೆರೆಕಂಡ ‘Are You Ok Baby’ ತಮಿಳು ಚಿತ್ರದಲ್ಲಿ ಸಮುದ್ರಖನಿ ಕಾಣಿಸಿಕೊಂಡಿದ್ದಾರೆ. ‘ಇಂಡಿಯನ್ 2’, ‘ಗೇಮ್ ಚೇಂಜರ್‌’ ಸಮುದ್ರಖನಿ ಅವರು ಪ್ರಸ್ತುತ ನಟಿಸುತ್ತಿರುವ ಇತರೆ ಸಿನಿಮಾಗಳು.

LEAVE A REPLY

Connect with

Please enter your comment!
Please enter your name here