ಸುರೇಂದರ್ ರೆಡ್ಡಿ ನಿರ್ದೇಶನದ ‘ಏಜೆಂಟ್’ ತೆಲುಗು ಸಿನಿಮಾದಲ್ಲಿನ ತಮ್ಮ ಹೊಸ ಲೂಕ್ ಶೇರ್ ಮಾಡಿದ್ದಾರೆ ನಟ ಅಖಿಲ್ ಅಕ್ಕಿನೇನಿ. ಈ ಸ್ಪೈ ಥ್ರಿಲ್ಲರ್‌ನಲ್ಲಿ ಮಲಯಾಳಂ ತಾರೆ ಮುಮ್ಮೂಟಿ ನೆಗೆಟಿವ್ ಶೇಡ್‌ನಲ್ಲಿ ನಟಿಸುತ್ತಿದ್ದಾರೆ.
ನಟ ಅಖಿಲ್ ಅಕ್ಕಿನೇನಿ ಇಂದು ಇನ್‌ಸ್ಟಾಗ್ರಾಮ್‌ನಲ್ಲಿ ತಮ್ಮ ‘ಏಜೆಂಟ್’ ಸಿನಿಮಾದ ಹೊಸ ಲುಕ್ ಶೇರ್ ಮಾಡಿದ್ದು, ‘ಚಂಡಮಾರುತವೊಂದು 2022ರಲ್ಲಿ ತೆರೆಗೆ ಅಪ್ಪಳಿಸಲಿದೆ’ ಎಂದು ಬರೆದುಕೊಂಡಿದ್ದಾರೆ. ಚಿತ್ರದಲ್ಲಿನ ತಮ್ಮ ಪಾತ್ರಕ್ಕಾಗಿ ಅವರು ಮೈ ಹುರಿಗೊಳಿಸಿಕೊಂಡಿದ್ದು ಫೋಟೊದಲ್ಲಿ ಬೈಸೆಪ್ಸ್ ಪ್ರದರ್ಶಿಸಿದ್ದಾರೆ. ‘ಸೇ ರಾ ನರಸಿಂಹರೆಡ್ಡಿ’ ಸಿನಿಮಾ ಖ್ಯಾತಿಯ ನಿರ್ದೇಶಕ ಸುರೇಂದರ್ ರೆಡ್ಡಿ ನಿರ್ದೇಶನದ ಈ ಚಿತ್ರದಲ್ಲಿನ ಅಖಿಲ್ ಮೇಕ್‌ಓವರ್‌ಗೆ ಅವರ ಅಭಿಮಾನಿಗಳಿಂದ ಭರ್ಜರಿ ಮೆಚ್ಚುಗೆ ಸಿಗುತ್ತಿದೆ. ಅಮೇರಿಕನ್ – ಜರ್ಮನ್ ಫಿಲ್ಮ್ ಸರಣಿ ‘ಬೋರ್ನ್’ನ ‘ಜೇಸನ್ ಬೋರ್ನ್’ ಪಾತ್ರವನ್ನು ಆಧರಿಸಿ ಅಖಿಲ್ ಪಾತ್ರವನ್ನು ವಿನ್ಯಾಸಗೊಳಿಸಲಾಗಿದೆ ಎನ್ನುವ ಸುದ್ದಿಯಿದೆ. ಚಿತ್ರದಲ್ಲಿ ಮಿಲಿಟರಿ ಅಧಿಕಾರಿಯಾಗಿ ಮಲಯಾಳಂ ಸ್ಟಾರ್ ಹೀರೋ ಮುಮ್ಮೂಟಿ ನೆಗೆಟಿವ್ ಶೇಡ್‌ನಲ್ಲಿ ಕಾಣಿಸಿಕೊಳ್ಳುತ್ತಿರುವುದು ವಿಶೇಷ. ಸಾಕ್ಷಿ ವೈದ್ಯ ಚಿತ್ರದ ಹಿರೋಯಿನ್. 2020ರ ಸೆಪ್ಟೆಂಬರ್‌ನಲ್ಲಿ ಸಿನಿಮಾ ಶುರುವಾಗಿದ್ದು ಬಹುಪಾಲು ಚಿತ್ರೀಕರಣ ಪೂರ್ಣಗೊಂಡಿದೆ.