ಸಿಂಪಲ್ ಸುನಿ ಸಿಂಪಲ್ ಆಗಿಯೇ ಜನರ ನಾಡಿಮಿಡಿತವನ್ನು ಅರ್ಥ ಮಾಡಿಕೊಂಡು ಸಿನಿಮಾ ಮಾಡುವ ನಿರ್ದೇಶಕ. ಅವರ ಚಿತ್ರಗಳಲ್ಲಿ ನವಿರಾದ ಪ್ರೇಮ, ಹಾಸ್ಯ ಮತ್ತು ಸಂಗೀತ ಎಲ್ಲವೂ ಇರುತ್ತದೆ. ಅದಕ್ಕೆ ಉತ್ತಮ ಉದಾಹರಣೆ ‘ಸಿಂಪಲ್ಲಾಗೊಂದ್ ಲವ್ ಸ್ಟೋರಿ’. ಈಗ ಸದ್ಯಕ್ಕೆ ಅವರು ಮಾಡ್ತಾ ಇರೋ ‘ಸಖತ್’ ಸಿನಿಮಾ ಮುಕ್ತಾಯ ಹಂತಕ್ಕೆ ಬಂದು ನಿಂತಿದೆ.

ಹೌದು, ಸಿಂಪಲ್ ಸುನಿ ನಿರ್ದೇಶನ ಮತ್ತು ಗಣೇಶ್ ಅಭಿನಯದ ‘ಸಖತ್’ ಚಿತ್ರ ಪ್ರಚಾರ ಕಾರ್ಯ ಆರಂಭಿಸಿದೆ. ಈ ಹಿಂದೆ ಇದೇ ಸುನಿ, ಗಣೇಶ್ ಜೋಡಿ ಗಾಂಧಿನಗರಕ್ಕೆ ‘ಚಮಕ್’ ಕೊಟ್ಟಿತ್ತು. ಅದನ್ನು ಕನ್ನಡ ಪ್ರೇಕ್ಷಕ ಸಖತ್ ಅಂದಿದ್ದಕ್ಕೋ ಏನೋ ಈಗ ಈ ಕಾಂಬಿನೇಶನ್ ನಲ್ಲಿ ಇನ್ನೊಂದು ಸಿನಿಮಾ ತಯಾರಾಗಿದೆ. ‘ಸಖತ್’ ಚಿತ್ರದ ಟೀಸರ್ ಇದೇ ಅಕ್ಟೋಬರ್ 24ರಂದು ಬಿಡುಗಡೆ ಆಗಲಿದೆ ಎಂದು ಚಿತ್ರತಂಡ ಹೇಳಿದೆ. ಇದರಲ್ಲಿ ಇದೇ 24ಕ್ಕೆ ‘ಸಖತ್ ಬಾಲು’ ಟೀಸರ್ ಎಂದು ಹೇಳಲಾಗಿದೆ.

ಹಾಗಾಗಿ ಇಲ್ಲಿ ಬಾಲು ಅಂದ್ರೆ ಅದು ಗಣೇಶ್ ಅವರ ಪಾತ್ರದ ಹೆಸರಿರಬಹುದು ಎಂದು ಊಹಿಸಬಹುದು. ಸದ್ಯಕ್ಕೆ ಹಲವಾರು ಪ್ರಾಜೆಕ್ಟ್‌ಗಳಲ್ಲಿ ಬ್ಯುಸಿಯಾಗಿರೋ ನಿರ್ದೇಶಕ ಸುನಿ ಈಗ ‘ಸಖತ್’ ಚಿತ್ರಕ್ಕೆ ಫಿನಿಶಿಂಗ್ ಟಚ್‌ ಕೊಡುತ್ತಿದ್ದಾರೆ. ಈ ಟೀಸರ್ ಮೂಲಕ ಅಧಿಕೃತವಾಗಿ ‘ಸಖತ್’ ಚಿತ್ರದ ಪ್ರಚಾರ ಆರಂಭಿಸುವ ಇರಾದೆ ಚಿತ್ರತಂಡದ್ದು. ಸುನಿ ಮತ್ತು ಗಣೇಶ್ ಅವರ ಕಾಂಬಿನೇಶನ್ ತೆರೆಯ ಮೇಲೆ ಮತ್ತೊಮ್ಮೆ ಮ್ಯಾಜಿಕ್ ಮಾಡುತ್ತಾ ಅನ್ನೋ ಕುತೂಹಲಕ್ಕೆ ಈ ಟೀಸರ್ ನಾಂದಿ ಹಾಡಲಿದೆ ಎನ್ನಬಹುದು.

LEAVE A REPLY

Connect with

Please enter your comment!
Please enter your name here