ಜನಪ್ರಿಯ ಕನ್ನಡ ರಿಯಾಲಿಟಿ ಶೋ ‘ವೀಕೆಂಡ್ ವಿಥ್ ರಮೇಶ್‌’ OTT ಯಲ್ಲಿ ಸ್ಟ್ರೀಮ್ ಆಗಲಿದೆ ಎನ್ನುವ ಸುದ್ದಿಯಿದೆ. ಟೀವಿ ಚಾನೆಲ್‌ನಲ್ಲಿನ ಜನಪ್ರಿಯತೆ ಇಲ್ಲಿ ಸಾಧ್ಯವೇ ಎನ್ನುವುದರ ಜೊತೆಗೆ ಅಲ್ಲಿನ ಸಾಧಕ – ಬಾಧಕಗಳ ಕುರಿತೂ ಚರ್ಚೆ ನಡೆದಿದೆ.

ಚಿತ್ರರಂಗ ಸೇರಿದಂತೆ ಕರ್ನಾಟಕದ ವಿವಿಧ ಕ್ಷೇತ್ರಗಳ ಸಾಧಕರನ್ನು, ಅವರ ಜೀವನ ಪಯಣವನ್ನು, ಸುಖ – ದುಃಖಗಳನ್ನು, ಸಾಧನೆಯ ಹಾದಿಯನ್ನು ವೀಕ್ಷಕರಿಗೆ ಪರಿಚಯಿಸುತ್ತಾ ಬಂದಿರುವ ಕಾರ್ಯಕ್ರಮ ‘ವೀಕೆಂಡ್ ವಿಥ್ ರಮೇಶ್’. ಈ ಕಾರ್ಯಕ್ರಮದಲ್ಲಿ ಚಿತ್ರರಂಗ, ರಾಜಕೀಯ, ಸಾಹಿತ್ಯ ಸೇರಿದಂತೆ ಅನೇಕ ರಂಗಗಳ ದಿಗ್ಗಜರು ಈಗಾಗಲೇ ಬಂದು ಸಾಧಕರ ಸೀಟಿನಲ್ಲಿ ಕೂತಿದ್ದಾರೆ. ಇದು ಕಿರುತೆರೆಯ ಅತಿ ಜನಪ್ರಿಯ ಕಾರ್ಯಕ್ರಮಗಳಲ್ಲಿ ಒಂದಾಗಿದೆ. ‘ಕನ್ನಡದ ಕೋಟ್ಯಾಧಿಪತಿ’, ‘ಬಿಗ್ ಬಾಸ್’ ರಿಯಾಲಿಟಿ ಶೋಗಳಂತೆ ಈ ಶೋ ಅನ್ನೂ ಕೂಡ ಜನ ಅತೀ ಆಸಕ್ತಿಯಿಂದ ನೋಡುತ್ತಿದ್ದಾರೆ. ಹಾಗಾಗಿ ‘ವೀಕೆಂಡ್ ವಿಥ್ ರಮೇಶ್’ ನ ಈ ಸೀಸನ್ ಯಾವಾಗ ಶುರು ಆಗುತ್ತದೆ ಎಂಬ ಕುತೂಹಲ ಎಲ್ಲರಿಗೂ ಇದ್ದಿದ್ದೇ. ಆದರೆ ಈ ಬಾರಿ ಈ ಕಾರ್ಯಕ್ರಮ ಟೀವಿನಲ್ಲಿ ಪ್ರಸಾರವಾಗದೆ OTTಯೊಂದರಲ್ಲಿ ಬರಲಿದೆ ಎಂಬ ಸುದ್ದಿ ಈಗ ಹರಿದಾಡುತ್ತಿದೆ.

ಆದರೆ ಇದು ಹೇಳಿಕೇಳಿ ಮನೆ ಮಂದಿಯೆಲ್ಲಾ ಒಟ್ಟಿಗೇ ಕುಳಿತು ನೋಡುವಂಥ ಕಾರ್ಯಕ್ರಮ. ಅಲ್ಲದೆ ಇದು ಕೇವಲ ಅರ್ಧ ಗಂಟೆಯ ಸೀರಿಯಲ್ ಅಲ್ಲ. ಹಾಗಾಗಿ ಇದನ್ನು ಟಿವಿಯಲ್ಲಿ ನೋಡುತ್ತಿದ್ದ ಫ್ಯಾಮಿಲಿ ಆಡಿಯೆನ್ಸ್ ಈಗ ಇದನ್ನು ಓಟಿಟಿಯಲ್ಲಿ ನೋಡಲು ಒಗ್ಗಿಕೊಳ್ಳುತ್ತಾರೆಯೇ, ಓಟಿಟಿಯಲ್ಲಿ ಬಂದರೆ ‘ವೀಕೆಂಡ್ ವಿಥ್ ರಮೇಶ್’ ಕಾರ್ಯಕ್ರಮದ ಜನಪ್ರಿಯತೆ ಕುಸಿಯಲಿದೆಯೇ ಎಂಬ ಅನುಮಾನಗಳು ಈಗ ಕಾಡುತ್ತಿವೆ. ಆದರೆ ಇನ್ನೊಂದು ಲೆಕ್ಕದಲ್ಲಿ ಟವಿಯಲ್ಲಿ ಕಾರ್ಯಕ್ರಮ ಪ್ರಸಾರವಾಗುವ ಸಮಯಕ್ಕೆ ಸರಿಯಾಗಿ ಟೀವಿ ಮುಂದೆ ಕುಳಿತು ನೋಡಬೇಕಾಗುತ್ತದೆ. OTTಯಲ್ಲಾದರೆ ಯಾವಾಗ ಬೇಕಾದರೂ ತಮಗೆ ಬಿಡುವಾದಾಗ ನೋಡಬಹುದು ಅನ್ನೋ ಕಾರಣಕ್ಕೆ ಈ ಕಾರ್ಯಕ್ರಮ ಇನ್ನಷ್ಟು ಹೆಚ್ಚು ಜನರನ್ನು ತಲುಪಬಹುದು ಎಂಬ ಅಂದಾಜೂ ಇದೆ.  ಸಿನಿಮಾಗಳಂತೆ ರಿಯಲಿಟಿ ಶೋಗಳೂ ಕೂಡ OTTಗೆ ಕಾಲಿಟ್ಟಿರುವುದಿಂದ ಒಟ್ಟಿನಲ್ಲಿ ಇದು OTTಗಳ ಯುಗ ಎನ್ನಬಹುದು. ಈಗಾಗಲೇ ಹಿಂದಿಯಲ್ಲಿ OTTಗಳಲ್ಲಿ ರಿಯಾಲಿಟಿ ಶೋಗಳನ್ನು ಪ್ರಸಾರ ಮಾಡುವ ಪರಂಪರೆ ಆರಂಭವಾಗಿದೆ. ಇದು ಕನ್ನಡದಲ್ಲೂ ಕ್ಲಿಕ್ ಆಗುತ್ತಾ ಅನ್ನೋದು ಈಗ ಎಲ್ಲರ ಮುಂದಿರುವ ಪ್ರಶ್ನೆ.

LEAVE A REPLY

Connect with

Please enter your comment!
Please enter your name here