ಮುದ್ದು ಮುದ್ದಾಗಿ ನಗುತ್ತಲೇ ಪ್ರೇಕ್ಷಕರನ್ನು ಚಿತ್ರಮಂದಿರಗಳತ್ತ ಮುಖ ಮಾಡುವಂತೆ ಮಾಡುವ ನಟಿ ಸಮಂತಾ. ನೋಡೋಕೆ ಎಷ್ಟು ಮುದ್ದೋ ಸಾಹಸ ಪ್ರಧಾನ ಚಿತ್ರಗಳ ವಿಷಯಕ್ಕೆ ಬಂದರೆ ಅಷ್ಟೇ ರಗಡ್‌ ಆಗ್ತಾರೆ ಈ ನಟಿ. ಈಗ ಮತ್ತೊಂದು ಆಕ್ಷನ್‌ ಡ್ರಾಮಾ ಜೊತೆ ಮರಳಿರುವ ಸಮಾಂತಾರ ಹೊಸ ಸಿನಿಮಾದ ಲುಕ್‌ ಸಿಕ್ಕಾಪಟ್ಟೆ RAW ಆಗಿದೆ.

‘ಫ್ಯಾಮಿಲಿ ಮ್ಯಾನ್‌’ ವೆಬ್‌ ಸರಣಿ ಹಾಗೂ ‘ಯಶೋಧಾ’ ಸಿನಿಮಾದಲ್ಲಿ ಸಮಂತಾ ಗನ್‌ ಹಿಡಿದು ನೋಡುಗರ ಗುಂಡಿಗೆಯಲ್ಲಿ ನಡುಕ ಹುಟ್ಟಿಸಿದ್ದರು. ಸಾಫ್ಟ್‌ ಪಾತ್ರಗಳ ಜೊತೆಗೆ ಆಕ್ಷನ್‌ ಸೀಕ್ವೆನ್ಸ್‌ಗೂ ಕಮ್ಮಿ ಇಲ್ಲ ಎನ್ನುವಂತೆ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಈ ಹಿಂದೆ ಸಮಂತಾ ನಟಿಸಿರುವ ‘ಯಶೋಧಾ’ ಚಿತ್ರದಲ್ಲಿನ ಪಾತ್ರದ ಬಗ್ಗೆ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗಿತ್ತು. ಅದರ ಗುಂಗಲ್ಲೇ ಇರುವ ಸಮಂತಾ ಈಗ ಮತ್ತೊಂದು ಆಕ್ಷನ್‌ ಡ್ರಾಮ ಜೊತೆ ಮರಳಿದ್ದಾರೆ. ಆದರೆ ಈ ಸಲ ಅವರ ಲುಕ್‌ ನೋಡಿದ್ರೆ ಗಾಬರಿ ಜೊತೆಗೆ ಕುತೂಹಲ ಹೆಚ್ಚೋದು ಖಂಡಿತ. ಹೌದು, ಸಮಂತಾ ಈಗಷ್ಟೇ 37ನೇ ವಸಂತಕ್ಕೆ ಕಾಲಿಟ್ಟಿದ್ದು, ಹುಟ್ಟುಹಬ್ಬದ ದಿನದಂದೇ ತಮ್ಮ ಹೊಸ ಸಿನಿಮಾ ಪ್ರಕಸಿದ್ದಾರೆ. ಜೊತೆಗೆ ಚಿತ್ರದ ಟೈಟಲ್‌ ಹಾಗೂ ಫಸ್ಟ್‌ಲುಕ್‌ ಪೋಸ್ಟರ್‌ ರಿಲೀಸ್‌ ಮಾಡಿದ್ದಾರೆ.

‘ಮಾ ಇಂಟಿ ಬಂಗಾರಂ’ ಸಿನಿಮಾದ ಮೂಲಕ ಸಮಂತಾ ನಿರ್ಮಾಪಕಿಯಾಗಿ ಪರಿಚಯವಾಗಿದ್ದಾರೆ. ರಿಲೀಸ್‌ ಆಗಿರುವ ಪೋಸ್ಟರ್‌ನಲ್ಲಿ ಸಮಂತಾ ಕೈಯಲ್ಲಿ ಡಬಲ್‌ ಬ್ಯಾರಲ್‌ ರೈಫಲ್‌ ಹಿಡಿದು ಆಕ್ಷನ್‌ ಕ್ವೀನ್‌ ಆಗಿ ಎಂಟ್ರಿ ಕೊಟ್ಟಿದ್ದಾರೆ. ಆಂಗ್ರಿ ಯಂಗ್‌ ವುಮನ್‌ ಆಗಿ RAW ಲುಕ್‌ನಲ್ಲಿ ಪೋಸ್‌ ಕೊಟ್ಟಿದ್ದಾರೆ. ಕೆಂಪು ಸೀರೆಯುಟ್ಟ ಸಮಂತಾ ಕುತ್ತಿಗೆಯಲ್ಲಿ ತಾಳಿ ಇದ್ದು, ಮೈಕೈಯೆಲ್ಲ ರಕ್ತವಾಗಿದೆ. ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿರುವ ನಟಿ, ಚಿನ್ನವಾಗಲು ಎಲ್ಲವೂ ಹೊಳೆಯಬೇಕಾಗಿಲ್ಲ. ‘ಬಂಗಾರಂ’ ಶೀಘ್ರದಲ್ಲೇ ಸೆಟ್ಟೇರಲಿದೆ ಎಂದು ಬರೆದುಕೊಂಡಿದ್ದಾರೆ. ಈ ಚಿತ್ರ ಮುಂದಿನ ವರ್ಷ ಪ್ರೇಕ್ಷಕನ ಮುಂದೆ ಬರುವ ನಿರೀಕ್ಷೆ ಇದೆ. ಅನಾರೋಗ್ಯದಿಂದಾಗಿ ಸ್ವಲ್ಪ ಸಮಯ ಸಿನಿಮಾಗಳಿಂದ ಬ್ರೇಕ್‌ ಪಡೆದಿದ್ದ ಸಮಂತಾ ಈಗ ಮತ್ತೆ ಸಕ್ರಿಯವಾಗಿದ್ದಾರೆ. ಸಮಂತಾ ನಟಿಸಿರುವ ‘ಸಿಟಾಡೆಲ್ ಇಂಡಿಯಾ: ಹನಿ ಬನಿ’ ವೆಬ್ ಸರಣಿ ಬಿಡುಗಡೆಗೆ ಸಿದ್ಧವಾಗಿದೆ. ರಾಜ್ – ಡಿಕೆ ಮತ್ತು ಸೀತಾ ಆರ್ ಮೆನನ್ ನಿರ್ದೇಶನದ ಈ ಸರಣಿಯಲ್ಲಿ ಸಮಂತಾ ಜತೆ ಬಾಲಿವುಡ್‌ ನಟ ವರುಣ್ ಧವನ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.

LEAVE A REPLY

Connect with

Please enter your comment!
Please enter your name here