ಕನ್ನಡ ಮೂಲದ ಸ್ಟಾರ್‌ ಸಿಂಗರ್‌ ಸಂಜಿತ್‌ ಹೆಗ್ಡೆ ‘ನಂಗೆ ಅಲ್ಲವಾ’ ಹೊಸ ವೀಡಿಯೋ ಆಲ್ಬಂ ಸಾಂಗ್‌ ಮಾಡಿದ್ದಾರೆ. ನಾಗಾರ್ಜುನ್ ಶರ್ಮಾ ರಚನೆಯ ಗೀತೆಗೆ ಸಂಗೀತ ಸಂಯೋಜಿಸಿ ಹಾಡಿದ್ದಾರೆ ಸಂಜಿತ್‌. ನಟಿ ಸಂಜನಾ ದಾಸ್‌ ಮತ್ತು ಸಂಜಿತ್‌ ಅವರ ಮೇಲೆ ಪಿಕ್ಚರೈಸ್‌ ಆಗಿರುವ ಹಾಡಿಗೆ ಬಿಜೋಯ್‌ ಶೆಟ್ಟಿ ನಿರ್ದೇಶನವಿದೆ.

ಸಿಂಗಿಂಗ್‌ ರಿಯಾಲಿಟಿ ಶೋ ಮೂಲಕ ಬೆಳಕಿಗೆ ಬಂದ ಸಂಜಿತ್‌ ಹೆಗ್ಡೆ ಅತಿ ಕಡಿಮೆ ಅವಧಿಯಲ್ಲೇ ದೊಡ್ಡ ಜನಪ್ರಿಯತೆ ಪಡೆದ ಗಾಯಕ. ಕನ್ನಡ ಮಾತ್ರವಲ್ಲದೆ ತಮಿಳು, ತೆಲುಗು ಮತ್ತು ಹಿಂದಿ ಸಂಗೀತ ಪ್ರಿಯರಿಗೂ ಅವರು ಇಷ್ಟವಾಗಿದ್ದಾರೆ. ಸಿನಿಮಾಗಳಿಗೆ ಹಾಡುತ್ತಲೇ ಅವರು ಇಂಡಿಪೆಂಡೆಂಟ್‌ ವೀಡಿಯೋ ಆಲ್ಬಂಗಳನ್ನೂ ಮಾಡುತ್ತಿದ್ದಾರೆ. ಇದೀಗ ಅವರು ‘ನಂಗೆ ಅಲ್ಲವಾ’ ವೀಡಿಯೋ ಆಲ್ಬಂ ಸಾಂಗ್‌ನೊಂದಿಗೆ ಬಂದಿದ್ದಾರೆ. ಹಾಡಿನಲ್ಲಿ ಯುವನಟಿ ಸಂಜನಾ ದಾಸ್‌ ಅವರೊಡನೆ ಕಾಣಿಸಿಕೊಂಡಿದ್ದಾರೆ ಸಂಜಿತ್‌. ನಾಗಾರ್ಜುನ್ ಶರ್ಮಾ ರಚನೆಯ ಹಾಡಿಗೆ ಸಂಗೀತ ನೀಡಿ ದನಿಯಾಗಿದ್ದಾರೆ ಸಂಜಿತ್‌. ಹಾಡಿಗೆ ಬಿಜೋಯ್‌ ಶೆಟ್ಟಿ ನಿರ್ದೇಶನವಿದೆ.

ಯುವ ಪ್ರೇಮಿಗಳ ಆಂಥೆಮ್‌ನಂತಿರುವ ಹಾಡನ್ನು ಪ್ರಸೆಂಟ್‌ ಮಾಡಿರುವ ಬಗೆ ಚೆನ್ನಾಗಿದೆ. ಹಾಡಿನ ಬಗ್ಗೆ ಸಂಜಿತ್‌, ‘ಈ ಹಾಡು ನನ್ನ ಜೀವನವನ್ನು ಬದಲಾಯಿಸಿತು. ನನ್ನ ಪ್ರೀತಿಯ ಜೀವನದ ಪ್ರಯಣವನ್ನು ವ್ಯಕ್ತಪಡಿಸಲು ನನಗೆ ಸಹಾಯ ಮಾಡಿತು. ಈ ಪ್ರಯಾಣದಲ್ಲಿ ಭಾಗವಾಗಿರುವ ಪ್ರತಿಯೊಬ್ಬರಿಗೂ ನಾನು ತುಂಬಾ ಕೃತಜ್ಞನಾಗಿದ್ದೇನೆ. ಈ ಹಾಡು ಬಿಡುಗಡೆಯೊಂದಿಗೆ ಹೃದಯ ತುಂಬಾ ಹಗುರವೆನಿಸುತ್ತಿದೆ’ ಎಂದಿದ್ದಾರೆ. ಸಂಜಿತ್ ಹಿಂದಿಯಲ್ಲಿ ‘ಬಾದಲ್’ ಮತ್ತು ‘ಗುಲಾಬೋ’ ಹಾಡುಗಳನ್ನು ಮಾಡಿದ್ದಾರೆ. ಈ ಪಟ್ಟಿಗೆ ‘ನಂಗೆ ಅಲ್ಲವಾ’ ಸೇರ್ಪಡೆಗೊಂಡಿದೆ.

LEAVE A REPLY

Connect with

Please enter your comment!
Please enter your name here