ಫೀಲ್ಡ್‌ ಮಾರ್ಷಲ್‌ ಸ್ಯಾಮ್‌ ಮನೇಕ್‌ಷಾ ಅವರ ಕುರಿತ ಬಯೋಪಿಕ್‌ ಹಿಂದಿ ಸಿನಿಮಾ ‘ಸ್ಯಾಮ್‌ ಬಹದ್ದೂರ್‌’ ತಂಡಕ್ಕೆ ನಟಿಯರಾದ ಸಾನ್ಯಾ ಮಲ್ಹೋತ್ರಾ ಮತ್ತು ಫಾತಿಮಾ ಸನಾ ಶೇಕ್‌ ಸೇರ್ಪಡೆಗೊಂಡಿದ್ದಾರೆ. ಮೇಘನಾ ಗುಲ್ಜಾರ್‌ ನಿರ್ದೇಶನದ ಈ ಚಿತ್ರದ ಶೀರ್ಷಿಕೆ ಪಾತ್ರದಲ್ಲಿ ವಿಕ್ಕಿ ಕೌಶಲ್‌ ನಟಿಸುತ್ತಿದ್ದಾರೆ.

1971ರ ಇಂಡೋ-ಪಾಕ್‌ ಯುದ್ಧದ ಸಂದರ್ಭದಲ್ಲಿ ಫೀಲ್ಡ್‌ ಮಾರ್ಷಲ್‌ ಸ್ಯಾಮ್‌ ಮನೇಕ್‌ಷಾ ಅವರು ಆರ್ಮಿ ಮುಖ್ಯಸ್ಥರಾಗಿದ್ದರು. ಅವರ ಕುರಿತು ಮೇಘನಾ ಗುಲ್ಜಾರ್‌ ನಿರ್ದೇಶಿಸುತ್ತಿರುವ ಹಿಂದಿ ಬಯೋಪಿಕ್‌ ಸಿನಿಮಾ ‘ಸ್ಯಾಮ್‌ ಬಹದ್ದೂರ್‌’. ಶೀರ್ಷಿಕೆ ಪಾತ್ರದಲ್ಲಿ ವಿಕ್ಕಿ ಕೌಶಲ್‌ ನಟಿಸಲಿದ್ದು, ಚಿತ್ರದ ಇತರೆ ಪ್ರಮುಖ ಪಾತ್ರಗಳಿಗೆ ಸಾನ್ಯಾ ಮಲ್ಹೋತ್ರಾ ಮತ್ತು ಫಾತಿಮಾ ಸನಾ ಶೇಕ್‌ ಆಯ್ಕೆಯಾಗಿದ್ದಾರೆ. ‘ದಂಗಲ್‌’ ಸಿನಿಮಾ ಖ್ಯಾತಿಯ ಸಾನ್ಯಾ ಅವರು ಸಿಲೂ ಮನೇಕ್‌ಷಾ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದು, ಫಾತಿಮಾ ಅವರು ಮಾಜಿ ಪ್ರಧಾನಿ ಇಂದಿರಾಗಾಂಧಿ ಪಾತ್ರದಲ್ಲಿ ನಟಿಸಲಿದ್ದಾರೆ. ಈ ಇಬ್ಬರು ಕಲಾವಿದರ ಸೇರ್ಪಡೆಯ ಸುದ್ದಿ ಹಂಚಿಕೊಳ್ಳುವುದರೊಂದಿಗೆ ನಿರ್ದೇಶಕ ಮೇಘನಾ ಗುಲ್ಜಾರ್‌ ಇಂದು ಬರ್ತ್‌ಡೇ ಆಚರಿಸಿಕೊಳ್ಳುತ್ತದ್ದಾರೆ.

“ಸಾನ್ಯಾ ಮತ್ತು ಫಾತಿಮಾ ಇಬ್ಬರೂ ಪ್ರಭಾವಶಾಲಿ ಪಾತ್ರಗಳನ್ನು ನಿರ್ವಹಿಸುತ್ತಿದ್ದಾರೆ. ನಮ್ಮ ಜನರೇಷನ್‌ನ ಪ್ರತಿಭಾವಂತ ಕಲಾವಿದರಾದ ಇವರನ್ನು ಮನೇಕ್‌ಷಾ ಫ್ಯಾಮಿಲಿಗೆ ಸ್ವಾಗತಿಸಲು ಹೆಮ್ಮೆ ಎನಿಸುತ್ತಿದೆ” ಎಂದಿದ್ದಾರೆ ನಟ ವಿಕ್ಕಿ ಕೌಶಲ್‌. ನಿರ್ದೇಶಕ ಮೇಘನಾ ಗುಲ್ಜಾರ್‌, “ಈ ಸಿನಿಮಾವನ್ನು ಸೆಲೆಬ್ರೇಟ್‌ ಮಾಡಲು ಹಲವು ಕಾರಣಗಳಿವೆ. ಈ ಐತಿಹಾಸಿಕ ವಿಜಯಕ್ಕೆ ಇಂದಿಗೆ ಐವತ್ತು ವರ್ಷಗಳು! ಈ ನಟಿಯರು ನಿರ್ವಹಿಸಲಿರುವ ಪಾತ್ರಗಳು ತುಂಬಾ ಸೆನ್ಸಿಬಲ್‌ ಆಗಿದ್ದು, ಅವರು ಪಾತ್ರಗಳಿಗೆ ನ್ಯಾಯ ಒದಗಿಸುವ ವಿಶ್ವಾಸವಿದೆ” ಎಂದಿದ್ದಾರೆ. ಚಿತ್ರತಂಡಕ್ಕೆ ಸೇರ್ಪಡೆಗೊಂಡಿರುವ ಖುಷಿಯಲ್ಲಿರುವ ಫಾತಿಮಾ ಸನಾ ಶೇಖ್‌, “ಭಾರತದ ಇತಿಹಾಸ ಕಂಡ ದಿಟ್ಟ ರಾಜಕೀಯ ನಾಯಕಿಯ ಪಾತ್ರ ನಿರ್ವಹಿಸುತ್ತಿರುವುದು ದೊಡ್ಡ ಸವಾಲು” ಎಂದಿದ್ದು ಪಾತ್ರ ನೀಡಿದ ನಿರ್ದೇಶಕಿ ಮೇಘನಾರಿಗೆ ಧನ್ಯವಾದ ಅರ್ಪಿಸಿದ್ದಾರೆ.

Previous article‘ಗೌಳಿ’ ದುಬಾರಿ ಸಾಹಸ ಸನ್ನಿವೇಶ; ನಿರ್ಮಾಪಕರಿಂದ ಕಲಾವಿದರಿಗೆ ಇನ್ಶೂರೆನ್ಸ್‌
Next articleಮಲಯಾಳಿ ಸಿನಿಮಾಗಳಂತೆ ಕನ್ನಡ ಚಿತ್ರಗಳು ಯಾಕಿಲ್ಲ?

LEAVE A REPLY

Connect with

Please enter your comment!
Please enter your name here