ನಿನ್ನೆಯ ಕ್ರಿಕೆಟ್‌ ವಿಶ್ವಕಪ್‌ ಫೈನಲ್‌ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಭಾರತ ಸೋಲುಂಡಿತು. ಶಾರುಖ್‌ ಖಾನ್‌ ಸೇರಿದಂತೆ ಬಾಲಿವುಡ್‌ನ ಹಲವು ತಾರೆಯರು ಸ್ಟೇಡಿಯಂನಲ್ಲಿ ಹಾಜರಿದ್ದು ಪಂದ್ಯ ವೀಕ್ಷಿಸಿದ್ದರು. ನಟ ಶಾರುಖ್‌, ಭಾರತೀಯ ಕ್ರಿಕೆಟ್‌ ತಂಡದ ಆಟಗಾರರು ಟೂರ್ನಿಯುದ್ದಕ್ಕೂ ತೋರಿದ ಆಟವನ್ನು ಶ್ಲಾಘಿಸಿ ಟ್ವೀಟ್‌ ಮಾಡಿದ್ದಾರೆ.

ಈ ಬಾರಿಯ ಕ್ರಿಕೆಟ್‌ ವಿಶ್ವಕಪ್‌ ಟೂರ್ನಿಯಲ್ಲಿ ಸತತ ಹತ್ತು ಗೆಲುವು ದಾಖಲಿಸಿದ್ದ ಭಾರತ ತಂಡ ಫೈನಲ್‌ನಲ್ಲಿ ಮುಗ್ಗರಿಸಿತು. ನಿನ್ನೆಯ ಫೈನಲ್‌ ಪಂದ್ಯದಲ್ಲಿ ಭಾರತ ಆರು ವಿಕೆಟ್‌ಗಳಿಂದ ಸೋಲುಂಡಿತು. ಫೈನಲ್‌ ಪಂದ್ಯಕ್ಕೆ ವಿವಿಧ ಕ್ಷೇತ್ರಗಳ ಹಲವು ಖ್ಯಾತನಾಮರು ಸಾಕ್ಷಿಯಾಗಿದ್ದರು. ಆಶಾ ಭೋಸ್ಲೆ, ಶಾರುಖ್‌ ಖಾನ್‌, ದೀಪಿಕಾ ಪಡುಕೋಣೆ, ರಣವೀರ್‌ ಸಿಂಗ್‌, ಅನುಷ್ಕಾ ಶರ್ಮಾ, ಅಥಿಯಾ ಶೆಟ್ಟಿ ಆಯುಷ್ಮಾನ್‌ ಖುರಾನಾ ಸೇರಿದಂತೆ ಹಲವರು ಮೈದಾನದಲ್ಲಿ ಉಪಸ್ಥಿತರಿದ್ದರು. ಪಂದ್ಯಕ್ಕೆ ಸಾಕ್ಷಿಯಾಗಿದ್ದ ತಾರೆಯರು ಭಾರತ ತಂಡದ ಆಟಗಾರರಿಗೆ ಟ್ವೀಟ್‌ಗಳ ಮೂಲಕ ಸಮಾಧಾನ ಹೇಳಿದ್ದಾರೆ.

ನಟ ಶಾರುಖ್‌ ಖಾನ್‌, ‘ಟೂರ್ನಿಯುದ್ದಕ್ಕೂ ನಾವೆಲ್ಲರೂ ಹೆಮ್ಮೆ ಪಡುವಂಥ ಆಟ ಆಡಿದ್ದೀರಿ. ನಿಮ್ಮ ಕ್ರೀಡಾ ಸ್ಪೂರ್ತಿ ಶ್ಲಾಘನೀಯ. ಕ್ರೀಡಾ ಸ್ಪರ್ಧೆಯಲ್ಲಿ ಕೆಟ್ಟ ದಿನಗಳು ಸಹಜ. ಆದರೆ ನಿಮ್ಮನ್ನು ನಾವೆಲ್ಲರೂ ಅಭಿನಂದಿಸುತ್ತೇವೆ. ನಿಮ್ಮ ಕ್ರೀಡಾ ಸ್ಫೂರ್ತಿ ಕೋಟ್ಯಂತರ ಭಾರತೀಯರಿಗೆ ಪ್ರೇರಣೆಯಾಗಿದೆ. ನಿಮ್ಮ ಬಗ್ಗೆ ಎಂದಿಗೂ ನಮಗೆ ಪ್ರೀತಿ, ಹೆಮ್ಮೆ ಇದೆ’ ಎಂದು ಟ್ವೀಟ್‌ ಮಾಡಿದ್ದಾರೆ.

ನಟ ರಣವೀರ್‌ ಸಿಂಗ್‌, ‘Some high, some low, some good days, some bad days, some wins, some losses. That’s sports, That’s life. We are all gutted but let’s applaud our boys for giving it their all’ ಎಂದು ಟ್ವೀಟ್‌ ಮಾಡಿದ್ದರೆ ಅವರ ತಾರಾಪತ್ನಿ ದೀಪಿಕಾ ಪಡುಕೋಣೆ, ‘ರಾಷ್ಟ್ರಧ್ವಜವನ್ನು ತಮ್ಮ Instagramನಲ್ಲಿ ಹಂಚಿಕೊಂಡಿದ್ದಾರೆ. ನಟ ಆಯುಷ್ಮಾನ್‌ ಖುರಾನಾ, ‘Just a bad day at the office @indiancricketteam You guys will always be remembered as the toughest side of #WorldCup2023 Thank you for the adrenaline! Well played!’ ಎಂದಿದ್ದಾರೆ.

LEAVE A REPLY

Connect with

Please enter your comment!
Please enter your name here