ಸಲ್ಮಾನ್‌ ಖಾನ್‌ ಅಭಿನಯದ ‘ಕಿಸೀ ಕಿ ಭಾಯ್‌ ಕಿಸೀ ಕಾ ಜಾನ್‌’ ಹಿಂದಿ ಚಿತ್ರದ ಟ್ರೈಲರ್‌ ಬಿಡುಗಡೆಯಾಗಿದೆ. ರೊಮ್ಯಾನ್ಸ್‌, ಕಾಮಿಡಿ, ಆಕ್ಷನ್‌ ಎಲ್ಲವೂ ಇಲ್ಲಿದೆ. ಫರ್ಹಾದ್‌ ಸಮ್ಜಿ ನಿರ್ದೇಶನದ ಚಿತ್ರದ ಪ್ರಮುಖ ಪಾತ್ರಗಳಲ್ಲಿ ತೆಲುಗು ತಾರೆಯರಾದ ವೆಂಕಟೇಶ್‌, ಜಗಪತಿ ಬಾಬು ಇದ್ದಾರೆ. ಪೂಜಾ ಹೆಗ್ಡೆ ಸಿನಿಮಾದ ಹಿರೋಯಿನ್‌.

ಬಹು ನಿರೀಕ್ಷೆಯಿಂದ ಎದುರು ನೋಡುತ್ತಿದ್ದ ಸಲ್ಮಾನ್‌ ಖಾನ್‌ ನಟನೆ, ನಿರ್ಮಾಣದ ‘ಕಿಸೀ ಕಿ ಭಾಯ್‌ ಕಿಸೀ ಕಾ ಜಾನ್‌’ ಹಿಂದಿ ಸಿನಿಮಾದ ಟ್ರೈಲರ್‌ ಬಿಡುಗಡೆಯಾಗಿದೆ. ವಿಶೇಷವೆಂದರೆ ಟ್ರೈಲರ್‌ನಲ್ಲಿ ಚಿತ್ರದ ನಾಯಕಿ ಪೂಜಾ ಹೆಗ್ಡೆ ಅವರಿಗೂ ಸಾಕಷ್ಟು ಸ್ಪೇಸ್‌ ಸಿಕ್ಕಿದೆ. ಹಿಂದೊಮ್ಮೆ ಸಲ್ಮಾನ್‌ಗಿದ್ದ ‘ಕಾಮಿಡಿ – ಹೀರೋ’ ಇಮೇಜು ಇಲ್ಲಿ ಪುನರಾವರ್ತನೆ ಆದಂತಿದೆ. ಆರಂಭದಲ್ಲಿ ತಮಾಷೆ ಆನಂತರ ಭರ್ಜರಿ ಆಕ್ಷನ್‌ ಸನ್ನಿವೇಶಗಳು ಟ್ರೈಲರ್‌ನಲ್ಲಿ ತುಂಬಿವೆ. ಸಲ್ಲು ತನ್ನನ್ನು ‘ಭಾಯ್ ಜಾನ್’ ಎಂದು ಪರಿಚಯಿಕೊಳ್ಳುತ್ತಾ ಗೂಂಡಾಗಳನ್ನು ಹೊಡೆದು ಹಾಕುತ್ತಾರೆ. PAN ಇಂಡಿಯಾ ಮಾದರಿಯನ್ನು ಪೋಷಿಸುವಂತೆ ತೆಲುಗು ತಾರೆಯರಾದ ವೆಂಕಟೇಶ್‌, ಜಗಪತಿ ಬಾಬು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

ನಟನೆಯ ಜೊತೆ ನಿರ್ಮಾಣದ ಹೊಣೆಯನ್ನೂ ಹೊತ್ತಿದ್ದಾರೆ ಸಲ್ಮಾನ್‌ ಖಾನ್‌. ಫರ್ಹಾದ್‌ ಸಮ್ಜಿ ನಿರ್ದೇಶನದ ಸಿನಿಮಾದ ಇತರೆ ಪ್ರಮುಖ ಪಾತ್ರಗಳಲ್ಲಿ ಭೂಮಿಕಾ ಚಾವ್ಲಾ, ವಿಜೇಂದರ್‌ ಸಿಂಗ್‌, ರಾಘವ್‌ ಜ್ಯೂಯಲ್‌, ಸಿದ್ಧಾರ್ಥ್‌ ನಿಗಮ್‌, ಜೆಸ್ಸಿ ಗಿಲ್‌, ಶೆಹನಾಝ್‌ ಗಿಲ್‌, ಪಾಲಕ್‌ ತಿವಾರಿ ಇದ್ದಾರೆ. ಏಪ್ರಿಲ್‌ 21ರಂದು ಈದ್‌ ಸಂದರ್ಭಕ್ಕೆ ಸರಿಯಾಗಿ ಸಿನಿಮಾ ತೆರೆಕಾಣಲಿದೆ. ಬಾಲಿವುಡ್‌ trade anayst ತರಣ್‌ ಆದರ್ಶ್‌ ಅವರ ಪ್ರಕಾರ, ಈದ್‌ ದಿನದಂದು ತೆರೆಕಂಡ ಸಲ್ಮಾನ್‌ ಸಿನಿಮಾಗಳಿಗೆ ಉತ್ತಮ ಓಪನಿಂಗ್‌ ಸಿಕ್ಕಿದೆ. ಅವರು ಈದ್‌ಗೆ ತೆರೆಕಂಡ ಸಲ್ಮಾನ್‌ರ ಈ ಹಿಂದಿನ ಸಿನಿಮಾಗಳ ಮೊದಲ ದಿನದ ವಹಿವಾಟನ್ನು ಹಂಚಿಕೊಂಡಿದ್ದಾರೆ.

Previous article‘ಆಡುಜೀವಿತಂ’ ಟ್ರೈಲರ್‌ | ಪೃಥ್ವಿರಾಜ್‌ ಅಭಿನಯದ ಬಹುನಿರೀಕ್ಷಿತ ಮಲಯಾಳಂ ಸಿನಿಮಾ
Next article‘ಟೂತ್‌ ಪರಿ’ ಟ್ರೈಲರ್‌ | ಇದು ಟ್ವಿಸ್ಟೆಡ್‌ ಲವ್‌ಸ್ಟೋರಿ!

LEAVE A REPLY

Connect with

Please enter your comment!
Please enter your name here