ರಾಗಿಣಿ ಅಭಿನಯದ ‘ಶೀಲಾ’ ಸಿನಿಮಾದ ಟ್ರೈಲರ್‌ ಬಿಡುಗಡೆಯಾಗಿದೆ. ಇದು ಕನ್ನಡ ಮತ್ತು ಮಲಯಾಳಂ ಭಾಷೆಗಳಲ್ಲಿ ತಯಾರಾಗಿರುವ ಸಿನಿಮಾ. ಈಗಾಗಲೇ ಮಲಯಾಳಂ ಭಾಷೆಯಲ್ಲಿ ಸಿನಿಮಾ ತೆರೆಕಂಡಿದ್ದು, ಆಗಸ್ಟ್‌ 4ರಂದು ಕನ್ನಡ ಅವತರಣಿಕೆ ಬಿಡುಗಡೆಯಾಗಲಿದೆ.

ರಾಗಿಣಿ ದ್ವಿವೇದಿ ಮುಖ್ಯಭೂಮಿಕೆಯಲ್ಲಿ ನಟಿಸಿರುವ ಕನ್ನಡ ಮತ್ತು ಮಲಯಾಳಂ ದ್ವಿಭಾಷಾ ಸಿನಿಮಾದ ಕನ್ನಡ ಅವತರಣಿಕೆಯ ಟ್ರೈಲರ್‌ ಬಿಡುಗಡೆಯಾಗಿದೆ. ನಟಿ ಪ್ರಿಯಾಂಕಾ ಉಪೇಂದ್ರ ಟ್ರೈಲರ್‌ ಬಿಡುಗಡೆ ಮಾಡಿ ಶುಭ ಹಾರೈಸಿದ್ದಾರೆ. ತಮ್ಮ ಸಿನಿಮಾ ಕುರಿತು ಮಾತನಾಡದ ರಾಗಿಣಿ ದ್ವಿವೇದಿ, ‘ಇದು ಮಹಿಳಾ ಪ್ರಧಾನ ಚಿತ್ರ. ಪ್ರಸ್ತುತ ಹೆಣ್ಣುಮಕ್ಕಳು ದಿನನಿತ್ಯ ಸಮಾಜದಲ್ಲಿ ಎದುರಿಸುತ್ತಿರುವ ಹಲವು ಸಮಸ್ಯೆಗಳ ಸುತ್ತ ಚಿತ್ರದ ಕಥೆ ಹೆಣೆಯಲಾಗಿದೆ. ಇತ್ತೀಚೆಗೆ ಮಲಯಾಳಂನಲ್ಲಿ ಚಿತ್ರ ಬಿಡುಗಡೆಯಾಗಿ ಎಲ್ಲರ ಮೆಚ್ಚುಗೆ ಪಡೆದುಕೊಳ್ಳುತ್ತಿದೆ. ಆಗಸ್ಟ್ 4ರಂದು ಚಿತ್ರ ಕರ್ನಾಟಕದಾದ್ಯಂತ 100ಕ್ಕೂ ಹೆಚ್ಚು ಥಿಯೇಟರ್‌ಗಳಲ್ಲಿ ಬಿಡುಗಡೆಯಾಗುತ್ತಿದೆ’ ಎನ್ನುತ್ತಾರೆ. ಡಿ ಎಂ ಪಿಳ್ಳೈ ನಿರ್ಮಾಣದ ಚಿತ್ರವನ್ನು ಬಾಲು ನಾರಾಯಣನ್‌ ನಿರ್ದೇಶಿಸಿದ್ದಾರೆ. ಅವಿನಾಶ, ಶೋಭರಾಜ್‌, ಚಿತ್ರಾ ಶೆಣೈ, ಮಹೇಶ್ ನಾಯರ್, ಶ್ರೀಪತಿ, ರಿಯಾಜ್ ಖಾನ್, ಅಬೆ ಡೇವಿಡ್, ಆರತಿ ಗೋಪಾಲ್ ಚಿತ್ರದ ಇತರೆ ಪ್ರಮುಖ ಪಾತ್ರಗಳಲ್ಲಿದ್ದಾರೆ. ಆಗಸ್ಟ್‌ 4ರಂದು ಸಿನಿಮಾ ತೆರೆಕಾಣಲಿದೆ.

LEAVE A REPLY

Connect with

Please enter your comment!
Please enter your name here