#NetflixIndiaPlayback2021 ಹ್ಯಾಶ್‌ ಟ್ಯಾಗ್‌ನೊಂದಿಗೆ ನೆಟ್‌ಫ್ಲಿಕ್ಸ್‌ ತನ್ನ ಜನಪ್ರಿಯ ಸರಣಿಗಳ ಕ್ರಾಸ್‌ ಓವರ್‌ ವಿನ್ಯಾಸ ಮಾಡಿದೆ. ‘ಲೂಸಿಫರ್‌’ ಸೀರೀಸ್‌ನ ಟಾಮ್‌ ಎಲ್ಲಿಸ್‌ ಜೊತೆಗಿನ ತಮ್ಮ ಪೋಸ್ಟರನ್ನು ನಟಿ ಶೆಹ್ನಾಝ್‌ ಗಿಲ್‌ ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ.

‘ಬಿಗ್‌ಬಾಸ್‌’ ಖ್ಯಾತಿಯ ನಟಿ ಶೆಹ್ನಾಝ್‌ ಗಿಲ್‌ ತಮ್ಮ ಟ್ವಿಟರ್‌ ಅಕೌಂಟ್‌ನಲ್ಲಿ ನೆಟ್‌ಫ್ಲಿಕ್ಸ್‌ನ ಜನಪ್ರಿಯ ‘ಲೂಸಿಫರ್‌’ ಸರಣಿಯ ಪೋಸ್ಟರ್‌ ಹಂಚಿಕೊಂಡಿದ್ದಾರೆ. ಸರಣಿಯ ಹೀರೋ ಟಾಮ್‌ ಎಲ್ಲಿಸ್‌ ಜೊತೆ ಶೆಹ್ನಾಝ್‌ ಇರುವ ದೇಸಿ ಪೋಸ್ಟರ್‌ಗೆ ಆಕೆಯ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. “ಅಸ್ಲೀ ಬಿಗ್‌ಬಾಸ್‌ ತೋ ಯಹಾ ಹೈ” ಎನ್ನುವ ಒಕ್ಕಣಿಯೊಂದಿಗೆ ಶೆಹ್ನಾಝ್‌ ಪೋಸ್ಟರ್‌ ಶೇರ್‌ ಮಾಡಿದ್ದು, ಅವರ ಟ್ವೀಟ್‌ಗೆ ನೂರಾರು ಸಂಖ್ಯೆಯಲ್ಲಿ ಕಮೆಂಟ್‌ಗಳು ಬಂದಿವೆ. ಇದು ‘ಲೂಸಿಫರ್‌’ ದೇಸಿ ವರ್ಷನ್‌ ಅಲ್ಲ, ನೆಟ್‌ಫ್ಲಿಕ್ಸ್‌ ಪ್ರೊಮೋಷನ್‌ಗೆ ರೂಪಿಸಿರುವ ಕ್ರಾಸ್‌ಓವರ್‌ ಪೋಸ್ಟರ್‌ ಎನ್ನುವುದ ಗೊತ್ತಾಗುತ್ತಿದ್ದಂತೆ ಅಭಿಮಾನಿಗಳಿಗೆ ನಿರಾಸೆಯಾಗಿದೆ. ನಟಿ ಶೆಹ್ನಾಝ್‌ ಅವರು ತಮ್ಮ ಬಿಗ್‌ಬಾಸ್‌ ಗೆಳೆಯ ಸಿದ್ದಾರ್ಥ್‌ ಶುಕ್ಲಾ ಅಗಲಿಕೆಯ ನಂತರ ಟ್ವಿಟರ್‌ನಿಂದ ದೂರ ಉಳಿದಿದ್ದರು. ಈಗ ಮತ್ತೆ ಟ್ವಿಟರ್‌ಗೆ ವಾಪಸಾಗಿರುವ ಅವರನ್ನುಅಭಿಮಾನಿಗಳು ಪ್ರೀತಿಯಿಂದ ಸ್ವಾಗತಿಸಿದ್ದಾರೆ.

ಇನ್ನು ನೆಟ್‌ಫ್ಲಿಕ್ಸ್‌ನ ಮತ್ತೊಂದು ಎಡಿಟ್‌ ಮಾಡಿರುವ ಪೋಸ್ಟರ್‌ನಲ್ಲಿ ‘ಸೇಕ್ರೆಡ್‌ ಗೇಮ್ಸ್‌’ ನಟ ನವಾಜುದ್ದೀನ್‌ ಸಿದ್ದಿಕಿ ‘ಸ್ಕ್ವಿಡ್‌ ಗೇಮ್‌’ನಲ್ಲಿದ್ದಾರೆ. ‘ಸ್ಟ್ರೇಂಜರ್‌ ಥಿಂಗ್ಸ್‌’ ಪೋಸ್ಟರ್‌ನಲ್ಲಿ ವಿನೋನಾ ರೈಡರ್‌ ಜೊತೆ ಬಾಲಿವುಡ್‌ ನಟ ಸೊನು ಸೂದ್‌ ಇದ್ದಾರೆ! ‘ಸೆಕ್ಸ್‌ ಎಜ್ಯುಕೇಷನ್‌’ ಪೋಸ್ಟರ್‌ನಲ್ಲಿ ಸೀಮಾ ತಪಾರಿಯಾ, ‘ಜಗಮೇ ಥಂದಿರಮ್‌’ನಲ್ಲಿ ತನ್ಮಯ್‌ ಭಟ್‌, ಕಾರ್ತೀಕ್‌ ಆರ್ಯ ನಟನೆಯ ‘ಧಮಾಕಾ’ ಪೋಸ್ಟರ್‌ನಲ್ಲಿ ಬಿಸ್ವಪತಿ ಸರ್ಕಾರ್‌ ಇದ್ದಾರೆ. ನೆಟ್‌ಫ್ಲಿಕ್ಸ್‌ ಈ ಅತಿಥಿ ಕಲಾವಿದರನ್ನು ತನ್ನ ಜನಪ್ರಿಯ ಸರಣಿಗಳಲ್ಲಿ ತಂದಿರುವ ವೀಡಿಯೋವನ್ನೂ ಬಿಡುಗಡೆ ಮಾಡಿದೆ.

Previous articleನೈಜ ಕತೆ ಆಧರಿಸಿದ ಮೋಸವಿಲ್ಲದ ಮನರಂಜನೆ ‘ಕುರುಪ್’
Next articleಡಿಸೆಂಬರ್‌ 31ರ ಕರ್ನಾಟಕ ಬಂದ್‌ಗೆ ಚಿತ್ರರಂಗ ಬೆಂಬಲ; ಸಿನಿಮಾ ಶೂಟಿಂಗ್‌ ಸ್ಥಗಿತ

LEAVE A REPLY

Connect with

Please enter your comment!
Please enter your name here