ಸೋನಲ್‌ ಜೋಷಿ ನಿರ್ದೇಶನದ ಹಿಂದಿ ಸಿನಿಮಾ ‘ಸುಖೀ’ ಟ್ರೈಲರ್‌ ಬಿಡುಗಡೆಯಾಗಿದೆ. ನಟಿ ಶಿಲ್ಪಾ ಶೆಟ್ಟಿ ಪಂಜಾಬಿ ಗೃಹಿಣಿಯ ಪಾತ್ರದಲ್ಲಿ ಬೆಳ್ಳಿತೆರೆಗೆ ಮರಳುತ್ತಿರುವ ಚಿತ್ರವಿದು. ಸೆಪ್ಟೆಂಬರ್‌ 22ರಂದು ಸಿನಿಮಾ ತೆರೆಕಾಣಲಿದೆ.

ಶಿಲ್ಪಾ ಶೆಟ್ಟಿ ಮುಖ್ಯಭೂಮಿಕೆಯಲ್ಲಿ ನಟಿಸಿರುವ ‘ಸುಖೀ’ ಹಿಂದಿ ಸಿನಿಮಾದ ಟ್ರೈಲರ್‌ ಬಿಡುಗಡೆಯಾಗಿದೆ. ಪೌಲೋಮಿ ದತ್ತಾ ಚಿತ್ರಕಥೆ ರಚಿಸಿರುವ ಚಿತ್ರವನ್ನು ಸೋನಲ್‌ ಜೋಷಿ ನಿರ್ದೇಶಿಸಿದ್ದಾರೆ. 38ರ ಹರೆಯದ ಪಂಜಾಬಿ ಗೃಹಿಣಿ ಸುಖ್‌ ಪ್ರೀತ್‌ / ಸುಖೀ (ಶಿಲ್ಪಾ ಶೆಟ್ಟಿ) ಬದುಕಿನ ಸುತ್ತ ಹೆಣೆದ ಚಿತ್ರಕಥೆಯಿದು. ಸಿನಿ ಜಗತ್ತಿನಿಂದ ಒಂದು ವರ್ಷದ ವಿರಾಮ ಪಡೆದ ನಂತರ ಶಿಲ್ಪಾ ಶೆಟ್ಟಿ ಈ ಚಿತ್ರದೊಂದಿಗೆ ಮತ್ತೆ ನಟನೆಗೆ ಮರಳಿದ್ದಾರೆ. ಗೃಹಿಣಿಯೊಬ್ಬಳು ತನ್ನ ಪತಿ, ಮಗಳು ಮತ್ತು ಮಾವನನ್ನು ನೋಡಿಕೊಳ್ಳುತ್ತಾ ಮನೆಯ ಜವಾಬ್ಧಾರಿ ನಿಭಾಯಿಸುವ ಗೃಹಿಣಿಯ ಕಥೆಯನ್ನು ಟ್ರೈಲರ್‌ ಬಿಂಬಿಸಿದೆ. ಶಾಲೆಯಲ್ಲಿನ ಸ್ನೇಹಿತರ ಪುನರ್ಮಿಲನ ಕಾರ್ಯಕ್ರಮವೊಂದಕ್ಕೆ ತೆರಳಲು ಪತಿಯ ಅಪ್ಪಣೆ ಕೇಳಬೇಕಾದ ಪರಿಸ್ಥಿತಿ ಸುಖೀಗೆ ಎದುರಾಗುತ್ತದೆ.

ಪತಿಯೊಂದಿಗೆ ವಾಗ್ವಾದಕ್ಕೆ ಇಳಿದು ತನ್ನ ಸ್ನೇಹಿತರ ಸಹಾಯದೊಂದಿಗೆ ದೆಹಲಿಯ ಕಾರ್ಯಕ್ರಮದಲ್ಲಿ ಆಕೆ ಭಾಗವಹಿಸುತ್ತಾಳೆ. ಅ ಸಂದರ್ಭದಿಂದ ಆಕೆಯ ಜೀವನ ಹೇಗೆ ಬದಲಾಗುತ್ತದೆ ಎನ್ನುವುದನ್ನು ತೋರಿಸಲಾಗಿದೆ. Abundantia Entertainment Productions ಬ್ಯಾನರ್‌ ಅಡಿ ಭೂಷಣ್ ಕುಮಾರ್, ಕ್ರಿಶನ್ ಕುಮಾರ್, ವಿಕ್ರಮ್ ಮಲ್ಹೋತ್ರಾ ಮತ್ತು ಶಿಖಾ ಶರ್ಮಾ ಈ ಚಿತ್ರ ನಿರ್ಮಿಸಿದ್ದಾರೆ. ಬಾದ್‌ ಶಾ ಮತ್ತು ಹಿಟೆನ್, ಅರ್ಕೊ ಚಿತ್ರಕ್ಕೆ ಸಂಗೀತ ಸಂಯೋಜಿಸಿದ್ದಾರೆ. ನಟಿ ಶಿಲ್ಪಾ ಟ್ರೈಲರ್‌ ಹಂಚಿಕೊಂಡು, ‘ಇಸ್ ಸುಖೀ ಸೆ. ಹರ್ ಸುಖೀ ಕೆ ಲಿಯೇ! ಪ್ರತಿ ಮಹಿಳೆಯ ಒಂದು ಕಥೆ’ ಎಂದು ಕ್ಯಾಪ್ಶನ್‌ ನೀಡಿದ್ದಾರೆ. ಅಮಿತ್ ಸಾಧ್, ಚೈತನ್ಯ ಚೌಧರಿ, ಕಿರಣ್ ಕುಮಾರ್ ಮತ್ತು ಕುಶಾ ಕಪಿಲ ಚಿತ್ರದ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಸೆಪ್ಟೆಂಬರ್ 22ರಂದು ಸಿನಿಮಾ ತೆರೆಕಾಣಲಿದೆ.

LEAVE A REPLY

Connect with

Please enter your comment!
Please enter your name here