ಶಿವನ್‌ ನಿರ್ದೇಶನದ ನೂತನ ಹಾರರ್‌ – ಕಾಮಿಡಿ ಹಿಂದಿ ಚಿತ್ರಕ್ಕೆ ‘ಕಪ್ಕಪೀ’ ಎಂದು ನಾಮಕರಣವಾಗಿದೆ. ಶ್ರೇಯಸ್‌ ತಲ್ಪಾಡೆ ಮತ್ತು ತುಷಾರ್‌ ಕಪೂರ್‌ ಚಿತ್ರದ ಮುಖ್ಯಪಾತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ.

ಶ್ರೇಯಸ್ ತಲ್ಪಾಡೆ ಮತ್ತು ತುಷಾರ್ ಕಪೂರ್ ಮುಖ್ಯಭೂಮಿಕೆಯಲ್ಲಿ ನಟಿಸುತ್ತಿರುವ ನೂತನ ಹಾರರ್‌ – ಕಾಮಿಡಿ ಚಿತ್ರಕ್ಕೆ ‘ಕಪ್ಕಪೀ’ (Kapkapiii) ಶೀರ್ಷಿಕೆ ನಿಗಧಿಯಾಗಿದೆ. ಸಿನಿಮಾದ ಮೋಷನ್‌ ಪೋಸ್ಟರ್ ಸಹ ಬಿಡುಗಡೆಯಾಗಿದೆ. ಈ ಚಿತ್ರವನ್ನು ಸಂಗೀತ್ ಶಿವನ್ ನಿರ್ದೇಶಿಸುತ್ತಿದ್ದಾರೆ. ಶ್ರೇಯಸ್‌ ಈ ಕುರಿತು ಮಾತನಾಡಿ, ‘ಇತ್ತೀಚಿಗೆ ತೆರೆಕಾಣುತ್ತಿರುವ ಅನೇಕ ಚಲನಚಿತ್ರಗಳು ದೇಶಭಕ್ತಿಯಿಂದ ಕೂಡಿರುವ ಹಾಗೂ ಆಕ್ಷನ್ ಥ್ರಿಲ್ಲರ್ ಮತ್ತು ಕ್ರೌರ್ಯ.. ಹೀಗೆ ಹಿಂಸಾತ್ಮಕವಾಗಿಯೇ ಮೂಡಿಬರುತ್ತಿವೆ. ಪ್ರೇಕ್ಷಕರು ನಮ್ಮ ಸಿನಿಮಾದಿಂದ ಸಂಪೂರ್ಣ ಮನೋರಂಜನೆ ಪಡೆಯಬಹುದು’ ಎಂದಿದ್ದಾರೆ.

ಚಿತ್ರದ ಮತ್ತೊಬ್ಬ ನಟ ತುಷಾರ್‌, ‘ನಾನು ಈ ಸಿನಿಮಾದ ಸ್ಕ್ರಿಪ್ಟ್ ಅನ್ನು ನಿಜವಾಗಿಯೂ ಆನಂದಿಸಿದ್ದೇನೆ. ತಂಡವು ತುಂಬಾ ಒಳ್ಳೆಯ ಕಥೆಯನ್ನು ಹೇಳಲಿದೆ. ವಿಶೇಷವಾಗಿ ಸಂಗೀತ್ ಸರ್ ಅವರೊಂದಿಗೆ ನಾನು ಮೊದಲು ‘ಕ್ಯಾ ಕೂಲ್ ಹೈ ಹಮ್‌’ ಚಿತ್ರದಲ್ಲಿ ಕೆಲಸ ಮಾಡಿದ್ದೇನೆ. ಈ ಚಿತ್ರದಲ್ಲಿನ ನನ್ನ ಪಾತ್ರವು ಹಾಸ್ಯ ಮತ್ತು ಭಯಾನಕವಾಗಿದೆ. ಆದರೆ ಈ ಸಿನಿಮಾ ನನ್ನ ಎಲ್ಲಾ ಹಿಂದಿನ ಪಾತ್ರಗಳಿಗಿಂತ ಭಿನ್ನವಾಗಿದೆ’ ಎಂದಿದ್ದಾರೆ. ಶ್ರೇಯಸ್ ತಲ್ಪಾಡೆ ಮತ್ತು ತುಷಾರ್ ಕಪೂರ್ ಈ ಹಿಂದೆ ‘ಗೋಲ್ಮಾಲ್’ ಚಿತ್ರಗಳಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದರು. ನಿರ್ದೇಶಕ ಶಿವನ್ ಅವರು ‘ಕ್ಯಾ ಕೂಲ್ ಹೇ ಹಮ್’ ಮತ್ತು ‘ಅಪ್ನಾ ಸಪ್ನಾ ಮನಿ ಮನಿ’ ಮುಂತಾದ ಹಾಸ್ಯ ಚಿತ್ರಗಳನ್ನು ನಿರ್ದೇಶಿಸಿದ್ದಾರೆ.

LEAVE A REPLY

Connect with

Please enter your comment!
Please enter your name here