ಟಿನು ಸುರೇಶ್‌ ದೇಸಾಯಿ ನಿರ್ದೇಶನದ ‘ಮಿಷನ್‌ ರಾಣಿಗಂಜ್‌’ ಹಿಂದಿ ಸಿನಿಮಾದ ಟೀಸರ್‌ ಬಿಡುಗಡೆಯಾಗಿದೆ. ಅಕ್ಷಯ್‌ ಕುಮಾರ್‌ ಮುಖ್ಯಭೂಮಿಕೆಯಲ್ಲಿ ನಟಿಸಿರುವ ಇದು ನೈಜ ಘಟನೆ ಆಧರಿಸಿದ ಸಿನಿಮಾ. ಅಕ್ಟೋಬರ್‌ 6ರಂದು ಸಿನಿಮಾ ತೆರೆಕಾಣಲಿದೆ.

ಅಕ್ಷಯ್‌ ಕುಮಾರ್‌ ನಟನೆಯ ‘ಮಿಷನ್ ರಾಣಿಗಂಜ್’ ಹಿಂದಿ ಚಿತ್ರದ ಟೀಸರ್‌ ಬಿಡುಗಡೆಯಾಗಿದೆ. ಟಿನು ಸುರೇಶ್‌ ದೇಸಾಯಿ ನಿರ್ದೇಶನದ ಚಿತ್ರದಲ್ಲಿ ಅಕ್ಷಯ್‌, ಕೋಲ್ ಇಂಡಿಯಾ ಲಿಮಿಟೆಡ್‌ನ ಎಂಜಿನಿಯರ್ ಜಸ್ವಂತ್‌ಸಿಂಗ್ ಗಿಲ್ ಪಾತ್ರ ನಿರ್ವಹಿಸಿದ್ದಾರೆ. ಜಸ್ವಂತ್ ಸಿಂಗ್ ಗಿಲ್ (ಅಕ್ಷಯ್‌ ಕುಮಾರ್)‌ ರಾಣಿಗಂಜ್‌ನ ಕಲ್ಲಿದ್ದಲು ಗಣಿಯಲ್ಲಿ ಸಿಕ್ಕಿಬಿದ್ದ ಗಣಿ ಕಾರ್ಮಿಕರ ಜೀವನ ರಕ್ಷಣೆಯಲ್ಲಿ ಅವರು ವಹಿಸಿದ ಪ್ರಮುಖ ಪಾತ್ರವನ್ನು ಟೀಸರ್‌ನಲ್ಲಿ ತೋರಿಸಿದೆ. 1989ರಲ್ಲಿ ಸಂಭವಿಸಿದ ಈ ಘಟನೆಯನ್ನು ವಿಶ್ವದ ಅತಿದೊಡ್ಡ ಮತ್ತು ಅತ್ಯಂತ ಸವಾಲಿನ ಕಾರ್ಯಾಚರಣೆಗಳಲ್ಲಿ ಒಂದು ಎನ್ನಲಾಗಿದೆ. ‘The Great Bharat Rescue’ ಅಡಿಬರಹ ಹೊಂದಿರುವ ಈ ಚಿತ್ರವು 1989ರಲ್ಲಿ ಪಶ್ಚಿಮ ಬಂಗಾಳದ ರಾಣಿಗಂಜ್ ಕಲ್ಲಿದ್ದಲು ಗಣಿಗಾರಿಕೆಯಲ್ಲಿ 64 ಗಣಿಗಾರರ ರಕ್ಷಣೆಯನ್ನು ಆಧರಿಸಿದೆ.

ಪರಿಣೀತಿ ಚೋಪ್ರಾ, ದಿಬ್ಯೇಂದು ಭಟ್ಟಾಚಾರ್ಯ, ರವಿ ಕಿಶನ್, ಕುಮುದ್ ಮಿಶ್ರಾ, ರಾಜೇಶ್ ಶರ್ಮಾ, ವರುಣ್ ಬಡೋಲಾ, ಪವನ್ ಮಲ್ಹೋತ್ರಾ ಸಿನಿಮಾದ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರದ ನಾಯಕ ನಟ ಅಕ್ಷಯ್ ಕುಮಾರ್ ಅವರು ತಮ್ಮ ಸಾಮಾಜಿಕ ಮಾಧ್ಯಮಗಳಲ್ಲಿ ಚಿತ್ರದ ಟೀಸರ್ ಹಂಚಿಕೊಂಡು, ”1989ರಲ್ಲಿ ಒಬ್ಬ ವ್ಯಕ್ತಿ ಧೈರ್ಯ ಮತ್ತು ದೃಢ ನಿರ್ಧಾರದಿಂದ ಅನೇಕರ ಜೀವ ಉಳಿಸಿದ್ದ ‘ಮಿಷನ್‌ ರಾಣಿಗಂಜ್‌’ ಟೀಸರ್‌ ಬಿಡುಗಡೆಯಾಗಿದೆ. ಅಕ್ಟೋಬರ್ 6ರಂದು ಈ ಚಿತ್ರದ ಜೊತೆಗೆ ಭಾರತದ ಧೈರ್ಯಶಾಲಿ ನಾಯಕನೊಬ್ಬನ ಕಥೆಯನ್ನು ಚಿತ್ರಮಂದಿರಗಳಲ್ಲಿ ವೀಕ್ಷಿಸಿ” ಎಂದು ಕ್ಯಾಪ್ಶನ್‌ ನೀಡಿದ್ದಾರೆ. A Pooja Entertainment Production ಬ್ಯಾನರ್ ಅಡಿ ವಶು ಭಗ್ನಾನಿ ಚಿತ್ರ ನಿರ್ಮಿಸಿದ್ದಾರೆ. ವಿಪುಲ್‌ ಕೆ ರಾವಲ್‌ ಚಿತ್ರಕಥೆ, ಆರಿಫ್‌ ಶೇಖ್‌ ಸಂಕಲನ, ಅಸೀಮ್‌ ಮಿಶ್ರಾ ಛಾಯಾಗ್ರಹಣ ಸಿನಿಮಾಗಿದೆ. ಈ ಚಲನಚಿತ್ರವನ್ನು ಆರಂಭದಲ್ಲಿ ಕ್ಯಾಪ್ಸುಲ್ ಗಿಲ್ ಶೀರ್ಷಿಕೆಯಿಂದ ಕರೆಯಲಾಗಿತ್ತು.

https://www.instagram.com/reel/Cw5EYg8NAUH/?utm_source=ig_web_copy_link

LEAVE A REPLY

Connect with

Please enter your comment!
Please enter your name here