ಇದೇ ತಿಂಗಳ ಮೊದಲ 5ನೇ ತಾರೀಖಿನಂದು ನಟಿ ಶುಭಾ ಪೂಂಜಾ ಬಹುಕಾಲದ ಗೆಳೆಯ ಸುಮಂತ್‌ ಮಹಾಬಲ ಅವರನ್ನು ವಿವಾಹವಾಗಿದ್ದರು. ಕುಟುಂಬದವರು ಹಾಗೂ ಆತ್ಮೀಯರ ಸಮ್ಮುಖದಲ್ಲಿ ಸರಳವಾಗಿ ದಾಂಪತ್ಯ ಬದುಕಿಗೆ ಕಾಲಿಟ್ಟರು. ಇಂದು ಅವರು ಇನ್‌ಸ್ಟಾಗ್ರಾಮ್‌ನಲ್ಲಿ ತಮ್ಮ ಮದುವೆ ವೀಡಿಯೋ ತುಣುಕುಗಳನ್ನು ಹಂಚಿಕೊಂಡಿದ್ದಾರೆ.

‘ಜಾಕ್‌ಪಾಟ್‌’ (2006) ಚಿತ್ರದೊಂದಿಗೆ ಕನ್ನಡ ಸಿನಿಮಾರಂಗಕ್ಕೆ ಪದಾರ್ಪಣೆ ಮಾಡಿದ ಶುಭಾ ಪೂಂಜಾ ಅವರ ವೃತ್ತಿ ಬದುಕಿಗೀಗ ಹದಿನಾರರ ಹರೆಯ. ಇತ್ತೀಚೆಗೆ ಅವರು ಬಿಗ್‌ಬಾಸ್‌ ಸ್ಪರ್ಧಿಯಾಗಿಯೂ ಪಾಲ್ಗೊಂಡು ಸುದ್ದಿಯಾಗಿದ್ದರು. ನಾಯಕನಟಿಯಾಗಿ ಅವರಿಗೆ ದೊಡ್ಡ ಯಶಸ್ಸು ಸಿಗಲಿಲ್ಲವಾದರೂ ಇಂದಿಗೂ ಅವರು ಬೇಡಿಕೆ ಕಳೆದುಕೊಂಡಿಲ್ಲ. ಸದ್ಯ ಅವರ ಎರಡು ಸಿನಿಮಾಗಳು ಚಿತ್ರೀಕರಣದಲ್ಲಿವೆ. ಇದೇ ತಿಂಗಳು 5ನೇ ತಾರೀಖಿನಂದು ಅವರು ತಮ್ಮ ಬಹುಕಾಲದ ಗೆಳೆಯ ಸುಮಂತ್‌ ಮಹಾಬಲ ಅವರನ್ನು ವರಿಸಿದರು. ಕುಟುಂಬದವರು ಹಾಗೂ ಆತ್ಮೀಯರ ಮಧ್ಯೆ ಶುಭಾ – ಸುಮಂತ್‌ ಸತಿಪತಿಯಾದರು. ಬಿಗ್‌ಬಾಸ್‌ ಶೋನ ಗೆಳೆಯರ ಬಳಗ, ಚಿತ್ರನಿರ್ದೇಶಕಿ ಸುಮನಾ ಕಿತ್ತೂರು ಸೇರಿದಂತೆ ಸಿನಿಮಾರಂಗದ ಕೆಲವರು ಮದುವೆಯಲ್ಲಿ ಹಾಜರಿದ್ದು ದಂಪತಿಗೆ ಶುಭ ಹಾರೈಸಿದ್ದರು. ಅಂದು ನಟಿ ಸುಮಂತ್‌ ಅವರೊಂದಿಗಿನ ಫೋಟೊವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡು, “ಇಂದು ನಾನು ಮತ್ತು ಸುಮಂತ್‌ ಮಹಾಬಲ ಗುರು – ಹಿರಿಯರು, ಕುಟುಂಬ ಮತ್ತು ಆತ್ಮೀಯ ಸ್ನೇಹಿತರ ಸಮ್ಮುಖದಲ್ಲಿ ನಮ್ಮ ಊರು ಮಜಲಬೆಟ್ಟುಬೀಡುವಿನಲ್ಲಿ ಸರಳ ವಿವಾಹವಾದೆವು. ನಿಮ್ಮೆಲ್ಲರ ಪ್ರೀತಿ ಮತ್ತು ಹಾರೈಕೆಗಳು ನಮ್ಮ ಮೇಲಿರಲಿ” ಎನ್ನುವ ಸಂದೇಶ ಹಾಕಿದ್ದರು. ಇಂದು ಇನ್‌ಸ್ಟಾಗ್ರಾಮ್‌ನಲ್ಲಿ ಅವರು ಮದುವೆಯ ಸುಂದರ ವೀಡಿಯೋ ತುಣುಕುಗಳನ್ನು ಹಂಚಿಕೊಂಡಿದ್ದಾರೆ.

Previous articleಆಸ್ಕರ್‌ ಸ್ಪರ್ಧೆಯಲ್ಲಿ ಭಾರತದ ‘ಜೈ ಭೀಮ್‌’, ‘ಮರಕ್ಕಾರ್‌’; ಫೆ.8ಕ್ಕೆ ಫೈನಲ್‌ ಲಿಸ್ಟ್‌
Next articleಕೈಗೂಡಿದ ಶ್ರೀನಾಥ್‌ರ ಕನಸು ART’N’U; ನಟನೆ, ಚಿತ್ರಕಥೆ ಇತರೆ ವಿಭಾಗಗಳಲ್ಲಿ ತರಬೇತಿ

LEAVE A REPLY

Connect with

Please enter your comment!
Please enter your name here