ವಸಂತ್‌ ಸಾಯಿ ನಿರ್ದೇಶನದಲ್ಲಿ ತಯಾರಾಗಿರುವ ʼಶಿವರಂಜಿನಿಯಂ ಇನ್ನುಂ ಸಿಲ ಪೆಂಗಲಂʼ ತಮಿಳು ಸಿನಿಮಾದಲ್ಲಿ ಹೆಣ್ಣಿನ ಮೇಲೆ ನಡೆಯುವ ಶೋಷಣೆಯೇ ಕಥಾವಸ್ತು. ಮೂರು ಕಾಲಘಟ್ಟದಲ್ಲಿ ನಡೆಯುವ ಕತೆಗಳಿವು. ಪ್ರಸ್ತುತ ಸೋನಿ LIVನಲ್ಲಿ ಸಿನಿಮಾ ಸ್ಟ್ರೀಮ್‌ ಆಗುತ್ತಿದೆ.

ಇದೊಂದು ಆಂಥಾಲಜಿ ಸಿನೆಮಾ . ಇದರಲ್ಲಿ ಒಟ್ಟು ಮೂರು ಕಥೆಗಳಿವೆ. ಇವು ಬೇರೆ ಬೇರೆ ಕಾಲಘಟ್ಟಗಳಲ್ಲಿ ನಡೆಯುವ ಕಥೆಗಳು. ಒಂದು ಕಥೆಗೂ ಇನ್ನೊಂದು ಕಥೆಗೂ ಯಾವುದೇ ಸಂಬಂಧ ಇರುವುದಿಲ್ಲ. ಆದರೆ ಮೂರು ಕಥೆಗಳಲ್ಲಿ ಇರುವ ಕಂಟೆಂಟ್ ಒಂದೇ. ಅದು ಹೆಣ್ಣಿನ ಮೇಲೆ ನಡೆಯುವ ಶೋಷಣೆ.

ಕಥೆ 1 : ಇದು 1980ರಲ್ಲಿ ನಡೆಯುವ ಕಥೆ. ಆಕೆಯ ಹೆಸರು ಸರಸ್ವತಿ. ತಮಿಳುನಾಡಿನ ಒಂದು ಪಟ್ಟಣದಲ್ಲಿ ಗಂಡ ಹಾಗೂ ತನ್ನ ಮಗುವಿನ ಜೊತೆ ವಾಸವಿರುವ ಬಡ ಕುಟುಂಬ. ಗಂಡನಿಗೆ ಆಕೆಯ ಮೇಲೆ ಸ್ವಲ್ಪವೂ ಪ್ರೀತಿ ಇರುವುದಿಲ್ಲ. ಆಕೆಯನ್ನು ಕಂಡರೆ ಸಾಕು ಉರಿದು ಬೀಳುತ್ತಾ ಇರುತ್ತಾನೆ. ಹೀಗೆ ಚಿತ್ರದಲ್ಲಿ ಸಾಕಷ್ಟು ದೃಶ್ಯಗಳಿವೆ. ಉದಹರಣೆಗೆ ಚಿತ್ರದ ಮೊದಲ ದೃಶ್ಯದಲ್ಲಿ ಉರಿವ ಬಿಸಿಲಿನಲ್ಲಿ ಬಸ್ ಸ್ಟಾಪ್‌ʼಗೆ ಇಬ್ಬರು ನಡೆದುಕೊಂಡು ಬರುತ್ತಿರುತ್ತಾರೆ. ಗಂಡ ಬೇಗ ಬೇಗ ಹೆಜ್ಜೆ ಇಟ್ಟು ನಡೆದುಕೊಂಡು ಹೋಗುತ್ತಿರುತ್ತಾನೆ. ಆದರೆ ಹೆಂಡತಿ ತನ್ನ ಸೊಂಟದಲ್ಲಿ ಮಗು ಹಾಗೂ ಕೈಯಲ್ಲಿ ಭಾರವಾದ ಒಂದು ಬ್ಯಾಗು ಹಿಡಿದುಕೊಂಡು ಅವನ ಹೆಜ್ಜೆಗೆ ಸಮವಾಗಿ ಹೆಜ್ಜೆ ಹಾಕಲು ಮುಂದಾಗುತ್ತಾಳೆ, ಆದರೆ ಆಗುವುದಿಲ್ಲ. ಕೊನೆಗೆ ಬಸ್ ಮಿಸ್ ಆಗುತ್ತದೆ. ಆತ ಅಲ್ಲೇ ಬಾಯಿಗೆ ಬಂದ ಹಾಗೆ ಬಯ್ಯುತಾನೆ. ಆದರೆ ಆಕೆಗೆ ಮಾತ್ರ ಆತನ ಮೇಲೆ ಪ್ರೀತಿ ಅನ್ನುವುದಕ್ಕಿಂತ ಭಯ. ಹೀಗಿರುವಾಗ ಒಮ್ಮೆ ಇಬ್ಬರ ನಡುವೆ ವೈಮನಸ್ಸು ಉಂಟಾಗಿ ಆತ ಇದ್ದಕಿದ್ದ ಹಾಗೆ ಅವಳನ್ನು ಬಿಟ್ಟು ಹೋಗಿಬಿಡುತ್ತಾನೆ. ಇವಳು ಅವನನ್ನು ಹುಡುಕಲು ಬಹಳ ಪ್ರಯತ್ನ ಪಡುತ್ತಾಳೆ. ಮುಂದೆ ಅವನು ಸಿಗುತ್ತಾನಾ? ಮುಂದೆ ಇವಳ ಜೀವನದಲ್ಲಿ ಆಗುವ ಬದಲಾವಣೆ ಯನ್ನು ನೀವು ಚಿತ್ರದಲ್ಲೇ ನೋಡಬೇಕು. ಇದರಲ್ಲಿ ಅಭಿನಯ ಮಾಡಿರುವ ಕಾಳಿಸ್ವರಿ ಹಾಗೂ ಕರುಣಾಕರ್ ಅವರ ಅಭಿನಯ ತುಂಬಾ ಸಹಜವಾಗಿದೆ ಹಾಗೆ ಇಳಯರಾಜ ಅವರ ಹಿನ್ನೆಲೆ ಸಂಗೀತ ಕಥೆಗೆ ಪೂರಕವಾಗಿದೆ.

ಕಥೆ 2 : ಇದು 1995ರಲ್ಲಿ ನಡೆಯುವ ಕಥೆ. ಆಕೆಯ ಹೆಸರು ದೇವಕಿ. ಮದುವೆ ಆಗಿ ಗಂಡ, ಅತ್ತೆ ಮಾವ, ಭಾವ ಹಾಗೂ ಅಕ್ಕ ಹಾಗೂ ಅವರಿಗೆ ಎಂಟು ವರ್ಷದ ಮಗ ಇರುವ ಕುಟುಂಬ ಅವಳದ್ದು. ಆಕೆಗೆ ಸರ್ಕಾರಿ ಕೆಲಸ ಇರುತ್ತದೆ. ಹೀಗಾಗಿ ಮನೆಯಲ್ಲಿ ಈಕೆಯ ಮೇಲೆ ಎಲ್ಲರಿಗೂ ಒಂದು ಗೌರವ ಇರುತ್ತದೆ. ಹಿರಿಸೊಸೆ ಒಬ್ಬಳನ್ನು ಬಿಟ್ಟು. ಯಾಕೆಂದರೆ ಹಿರಿಸೊಸೆ ಯಾವಾಗಲೂ ಮನೆ ಕೆಲಸ, ಅಡುಗೆ ಮನೆ ಇಷ್ಟೇ ಅವಳ ಜೀವನ. ದೇವಕಿಗೆ ಕೊಡುವ ಗೌರವ ಈಕೆಗೆ ಅಸೂಯೆ ತರಿಸುತ್ತದೆ. ಹೀಗಿರುವಾಗ ಒಮ್ಮೆ ದೇವಕಿ ತನ್ನ ಮನೆಯ ಕೊಠಡಿಯಲ್ಲಿ ಬಾಗಿಲುಗಳನ್ನು ಮುಚ್ಚಿ ಯಾರಿಗೂ ಗೊತ್ತಿಲ್ಲದೆ ಡೈರಿ ಒಂದನ್ನು ಬರೆಯುತ್ತಿರುತ್ತಾಳೆ. ಇದನ್ನು ಹಿರಿ ಸೊಸೆಯ ಮಗ ನೋಡಿ ಅಮ್ಮನ ಬಳಿ ಬಂದು ಹೇಳಿ ಬಿಡುತ್ತಾನೆ. ಆಕೆ ಮನೆಯಲ್ಲಿ ಎಲ್ಲರಿಗೂ ವಿಷಯವನ್ನು ತಿಳಿಸಿ ಆಕೆ ಎಲ್ಲರ ಮುಂದೆ ಆ ಡೈರಿಯಲ್ಲಿ ಬರೆದಿರುವ ವಿಷಯವನ್ನು ಓದಬೇಕು ಎಂದು ಹೇಳಲು, ಮನೆಯವರು ಸಹ ಅದಕ್ಕೆ ಒಪ್ಪಿ ಅದನ್ನು ಓದಲು ಹೇಳುತ್ತಾರೆ. ಆದರೆ ಆಕೆ ಒಪ್ಪುವುದಿಲ್ಲ. ಮನೆಯವರೆಲ್ಲರೂ ಇದರಿಂದ ಕೋಪಗೊಳ್ಳುತ್ತಾರೆ. ಮುಂದೆ ಇದರಿಂದ ಇವಳ ಜೀವನದಲ್ಲಿ ಆಗುವ ಪರಿಣಾಮಗಳು ಏನು ಎಂಬುದನ್ನು ನೀವು ಚಿತ್ರದಲ್ಲಿ ನೋಡಬೇಕು. ದೇವಕಿಯಾಗಿ ನಟಿಸಿರುವ ಪಾರ್ವತಿ ಹಾಗೂ ಸಹ ಕಲಾವಿದರ ಅಭಿನಯ ಸಹಜವಾಗಿದೆ.

ಕಥೆ 3 : ಇದು 2007ರಲ್ಲಿ ನಡೆಯುವ ಕಥೆ. ಆಕೆಯ ಹೆಸರು ಶಿವರಂಜನಿ. ಚಿತ್ರದ ಮೊದಲ ದೃಶ್ಯದಲ್ಲಿ ಆಕೆ ಒಬ್ಬ ಓಟಗಾರ್ತಿ. ಶಾಲೆಯಲ್ಲಿ ನಡೆಯುವ ಪಂದ್ಯದಲ್ಲಿ ಗೆದ್ದು ಮೊದಲ ಬಹುಮಾನ ಪಡೆಯುತ್ತಾಳೆ. ನಂತರ ಚಿತ್ರ 2014ರ ಕಾಲಘಟ್ಟಕ್ಕೆ ಹೋಗುತ್ತದೆ. ಅಲ್ಲಿ ಇದೇ ಹುಡುಗಿ ಗಂಡ ಮಗಳು ಅತ್ತೆ ಜೊತೆ ತನ್ನ ಕುಟುಂಬದ ದಿನನಿತ್ಯ ಕೆಲಸ ಮಾಡಿಕೊಂಡು ಒಬ್ಬ ಸಾಮಾನ್ಯ ಗೃಹಿಣಿ ಯಾಗಿ ತನ್ನ ಜೀವನ ನಡೆಸುತ್ತಾ ಇರುತ್ತಾಳೆ. ಆಕೆಯ ಎಲ್ಲ ಕನಸುಗಳನ್ನು ಅಡವಿಟ್ಟು ಬೇರೊಬ್ಬರ ಕನಸಿಗಾಗಿ ಬಾಳುತ್ತಿರುತ್ತಾಳೆ. ಆಕೆಯ ಜೀವನದಲ್ಲಿ ನಿಜವಾಗಿ ನಡೆದದ್ದು ಏನು? ಇವಳ ಜೀವನ ಹೀಗೆ ಸಾಗಿತೆ? ಎಂಬುದನ್ನು ನೀವು ಚಿತ್ರದಲ್ಲೇ ನೋಡಬೇಕು. ಇಲ್ಲಿ ಶಿವರಂಜನಿಯಾಗಿ ನಟಿಸಿರುವ ಲಕ್ಷ್ಮಿ ಅದ್ಭುತವಾಗಿ ನಟಿಸಿದ್ದಾರೆ ಹಾಗೂ ಸಹ ಕಲಾವಿದರು ಕೂಡ.
ಇಲ್ಲಿ ಕಾಲ ಎಷ್ಟೇ ಬದಲಾದರೂ ಹೆಣ್ಣಿನ ಮೇಲೆ ನಡೆಯುವ ಶೋಷಣೆ ಮಾತ್ರ ಎಂದಿಗೂ ಬದಲಾಗಿಲ್ಲ ಎಂಬುದನ್ನು ನಿರ್ದೇಶಕರು ಬಹಳ ಚೆನ್ನಾಗಿ ತೋರಿಸಿದ್ದಾರೆ. Physically ಹಾಗೂ sexually ಒಂದು ಹೆಣ್ಣಿಗೆ harrassment ಮಾಡುವುದು ಮಾತ್ರ ಅಪರಾಧವಲ್ಲ. emotionally ಹಾಗೂ mentally harrass ಮಾಡುವುದು ಇದಕ್ಕಿಂತ ದೊಡ್ಡ ಅಪರಾಧ ಎನ್ನುವುದನ್ನು ತುಂಬಾ ಸ್ಟ್ರಾಂಗ್ ಆಗಿ ಹೇಳಿದ್ದಾರೆ ನಿರ್ದೇಶಕ ವಸಂತ್.

ನಿರ್ದೇಶನ ಮತ್ತು ನಿರ್ಮಾಣ : ವಸಂತ್‌ ಸಾಯಿ | ಸಂಗೀತ : ಇಳಯರಾಜ | ತಾರಾಬಳಗ : ಲಕ್ಷ್ಮೀಪ್ರಿಯ, ಚಂದ್ರಮೌಳಿ, ಪಾರ್ವತಿ ತಿರುವೋತಿ, ಕರುಣಾಕರನ್‌

LEAVE A REPLY

Connect with

Please enter your comment!
Please enter your name here