ಜನಪ್ರಿಯ ತಮಿಳು ನಟ, ಸಂಗೀತ ಸಂಯೋಜಕ ವಿಜಯ್‌ ಆಂಥೋನಿ ಪುತ್ರಿ ಮೀರಾ ಇಂದು (ಸೆಪ್ಟೆಂಬರ್‌ 19) ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅತ್ಮಹತ್ಯೆಗೆ ಕಾರಣ ತಿಳಿದುಬಂದಿಲ್ಲ. ಕಾಲಿವುಡ್‌ನ ಹಲವರು ನಟ ವಿಜಯ್‌ ಅವರಿಗೆ ಸಾಂತ್ವನ ಹೇಳಿದ್ದಾರೆ.

ಕಾಲಿವುಡ್‌ ನಟ, ಸಂಗೀತ ಸಂಯೋಜಕ ವಿಜಯ್‌ ಆಂಥೋನಿ ಪುತ್ರಿ ಮೀರಾ (16 ವರ್ಷ) ಇಂದು ಆತ್ಮಹತ್ಯೆಗೆ ಶರಣಾಗಿದ್ದಾರೆ. ತೇನಂಪೇಟ್‌ನಲ್ಲಿನ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಮನೆಯಲ್ಲೇ ಮೀರಾ ಜೀವ ಹೋಗಿದೆ ಎಂದು ವೈದ್ಯರು ದೃಢಪಡಿಸಿದ್ದಾರೆ. ಪಿಯೂಸಿ ವ್ಯಾಸಂಗ ಮಾಡುತ್ತಿದ್ದ ಮೀರಾ ಆತ್ಮಹತ್ಯೆಗೆ ಕಾರಣ ತಿಳಿದುಬಂದಿಲ್ಲ. ತನಿಖೆ ಜಾರಿಯಲ್ಲಿದೆ. ನಟ ವಿಜಯ್‌ ಆಂಥೋನಿ 7 ವರ್ಷದ ಬಾಲಕನಾಗಿದ್ದಾಗ ಅವರ ತಂದೆ ಆತ್ಮಹತ್ಯೆಯಿಂದ ಇಹಲೋಕ ತ್ಯಜಿಸಿದ್ದರು.

ಕಾಲಿವುಡ್‌ನ ವಿಜಯ್‌ ಆಂಥೋನಿ ಅವರ ಹಲವು ಆತ್ಮೀಯರು ಸಂತಾಪ ಸೂಚಿಸಿದ್ದಾರೆ. ನಟ ಜಯಂ ರವಿ, ನಟಿ ಖುಷ್ಬೂ, ನಟ ಶರತ್‌ಕುಮಾರ್‌, ನಿರ್ದೇಶಕ ಲೋಕೇಶ್‌ ಕನಗರಾಜ್‌ ಸೇರಿದಂತೆ ಹಲವರು ಟ್ವೀಟ್‌ ಮೂಲಕ ವಿಜಯ್‌ ಆಂಥೋನಿ ಅವರಿಗೆ ಧೈರ್ಯ ಹೇಳಿದ್ದಾರೆ. ನಟ ಜಯಂ ರವಿ, ‘ಬದುಕಿನ ತುಂಬಾ ಏಳುಬೀಳುಗಳು ಇರುತ್ತವೆ. ಈ ಸಂದರ್ಭವನ್ನು ನೀವು ಧೈರ್ಯದಿಂದ ಎದುರಿಸಿ. ನಾವೆಲ್ಲರೂ ಸದಾ ನಿಮ್ಮೊಂದಿಗಿದ್ದೇವೆ’ ಎನ್ನುವ ಅರ್ಥದ ಟ್ವೀಟ್‌ ಮೂಲಕ ಆತ್ಮೀಯ ಸ್ನೇಹಿತನಿಗೆ ಸಾಂತ್ವನ ಹೇಳಿದ್ದಾರೆ.

LEAVE A REPLY

Connect with

Please enter your comment!
Please enter your name here