ಧೋನಿ ಎಂಟರ್‌ಟೇನ್‌ಮೆಂಟ್‌ ನಿರ್ಮಾಣದ ಚೊಚ್ಚಲ ತಮಿಳು ಮತ್ತು ತೆಲುಗು ದ್ವಿಭಾಷಾ ಸಿನಿಮಾ ‘LGM’ ತೆರೆಗೆ ಸಿದ್ಧವಾಗಿದೆ. ರಮೇಶ್‌ ತಮಿಳ್‌ಮಣಿ ನಿರ್ದೇಶನದ ಫ್ಯಾಮಿಲಿ ಎಂಟರ್‌ಟೇನರ್‌ ಚಿತ್ರ. ಕರ್ನಾಟಕದಲ್ಲೂ ಚಿತ್ರವನ್ನು ದೊಡ್ಡ ಪ್ರಮಾಣದಲ್ಲಿ ಬಿಡುಗಡೆ ಮಾಡುವುದು ನಿರ್ಮಾಪಕರ ಯೋಜನೆ.

ಖ್ಯಾತ ಕ್ರಿಕೆಟರ್‌ ಎಂ ಎಸ್‌ ಧೋನಿ ನಿರ್ಮಾಣದ ‘LGM’ (Lets Get Married) ತಮಿಳು ಮತ್ತ ತೆಲುಗು ದ್ವಿಭಾಷಾ ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ. ಧೋನಿ ಅವರ ಪತ್ನಿ ಸಾಕ್ಷಿ ಚಿತ್ರನಿರ್ಮಾಣ ಸಂಸ್ಥೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ ಎನ್ನಲಾಗಿದೆ. ‘LGM’ ಚಿತ್ರವನ್ನು ಕರ್ನಾಟಕದಲ್ಲೂ ದೊಡ್ಡ ಪ್ರಮಾಣದಲ್ಲಿ ಬಿಡುಗಡೆ ಮಾಡಲು ಧೋನಿ ಎಂಟರ್‌ಟೇನ್‌ಮೆಂಟ್‌ ಯೋಜನೆ ಹಾಕಿಕೊಂಡಿದೆ. ಈ ಹಿನ್ನೆಲೆಯಲ್ಲಿ ರಾಜ್ಯದಲ್ಲೂ ಪ್ರಮೋಷನ್‌ ಶುರುವಾಗಲಿದೆ. ಕೆಲವು ದಿನಗಳ ಹಿಂದೆ ಚಿತ್ರದ ಟೀಸರ್‌ ಬಿಡುಗಡೆಯಾಗಿತ್ತು. ಫ್ಯಾಮಿಲಿ ಎಂಟರ್‌ಟೇನ್‌ಮೆಂಟ್‌ ಕಥಾಹಂದರದ ಚಿತ್ರವನ್ನು ರಮೇಶ್‌ ತಮಿಳ್‌ಮಣಿ ನಿರ್ದೇಶಿಸಿದ್ದಾರೆ. ಹರೀಶ್‌ ಕಲ್ಯಾಣ್‌ ಮತ್ತು ಇವಾನಾ ಚಿತ್ರದ ಮುಖ್ಯಭೂಮಿಕೆ ಕಲಾವಿದರು. ಹಿರಿಯ ನಟಿ ನದಿಯಾ, ಯೋಗಿ ಬಾಬು ಮತ್ತು ಆರ್‌ಜೆ ವಿಜಯ್ ಇತರೆ ಪ್ರಮುಖ ಕಲಾವಿದರು. ರಮೇಶ್ ತಮಿಳ್ಮಣಿ ಸಿನಿಮಾಗೆ ಆಕ್ಷನ್ ಕಟ್ ಹೇಳುವುದರ ಜೊತೆಗೆ ಸಂಗೀತ ನಿರ್ದೇಶನದ ಜವಾಬ್ದಾರಿಯನ್ನೂ ನಿಭಾಯಿಸಿದ್ದಾರೆ. ಸದ್ಯದಲ್ಲೇ ಚಿತ್ರದ ಟ್ರೈಲರ್‌ ಮತ್ತು ಆಡಿಯೋ ಬಿಡುಗಡೆಯಾಗಲಿದೆ.

Previous articleAAA ಸಿನಿಮಾಸ್‌ | ನಟ ಅಲ್ಲು ಅರ್ಜುನ್‌ ಒಡೆತನದ ಮಲ್ಟಿಪ್ಲೆಕ್ಸ್‌ಗೆ ಚಾಲನೆ
Next article‘ಮಾಮಣ್ಣನ್‌’ ಟ್ರೈಲರ್‌ | ಮಾರಿ ಸೆಲ್ವರಾಜ್‌ ಹೈ ವೋಲ್ಟೇಜ್‌ ಪೊಲಿಟಿಕಲ್‌ – ಡ್ರಾಮಾ

LEAVE A REPLY

Connect with

Please enter your comment!
Please enter your name here