ಸುಧಾ ಕೊಂಗರ ನಿರ್ದೇಶನದಲ್ಲಿ ಸೂರ್ಯ ಅವರ ನೂತನ ತಮಿಳು ಸಿನಿಮಾ ಘೋಷಣೆಯಾಗಿದೆ. ‘ಸೂರರೈ ಪೋಟ್ರು’ ಯಶಸ್ವೀ ತಮಿಳು ಸಿನಿಮಾದ ಜೋಡಿ ಇದು. ನಟರಾದ ದುಲ್ಕರ್‌ ಸಲ್ಮಾನ್‌, ನಜ್ರಿಯಾ ಫಹದ್‌, ವಿಜಯ್‌ ವರ್ಮ ಈ ಚಿತ್ರದ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ಜಿ ವಿ ಪ್ರಕಾಶ್‌ ಸಂಗೀತ ಸಂಯೋಜನೆಯ ನೂತನೇ ಚಿತ್ರವಿದು ಎನ್ನುವುದು ವಿಶೇಷ.

ಕನ್ನಡಿಗ ಕ್ಯಾಪ್ಟನ್‌ ಗೋಪಿನಾಥ್‌ ಜೀವನ ಆಧರಿಸಿ ತಯಾರಾದ ‘ಸೂರರೈ ಪೋಟ್ರು’ ತಮಿಳು ಸಿನಿಮಾ ಬಾಕ್ಸ್‌ ಆಫೀಸ್‌ನಲ್ಲಿ ದೊಡ್ಡ ಯಶಸ್ಸು ಕಂಡಿತ್ತು. ಸುಧಾ ಕೊಂಗರ ನಿರ್ದೇಶನದ ಚಿತ್ರದ ಹೀರೋ ಆಗಿ ಸೂರ್ಯ ಅಭಿನಯಿಸಿದ್ದರು. ಜಿ ವಿ ಪ್ರಕಾಶ್‌ ಸಂಗೀತ ಈ ಚಿತ್ರಕ್ಕಿತ್ತು. ಇದೀಗ ನೂತನ ಸಿನಿಮಾದಲ್ಲಿ ಮತ್ತೊಮ್ಮೆ ಈ ಮೂವರೂ ಜೊತೆಯಾಗುತ್ತಿದ್ದಾರೆ. ಇದು ಸೂರ್ಯ ಅಭಿನಯದ 43ನೇ ಸಿನಿಮಾ. @Suriya43 ತಾತ್ಕಾಲಿಕ ಶೀರ್ಷಿಕೆಯೊಂದಿಗೆ ಸಿನಿಮಾ ಘೋಷಣೆಯಾಗಿದೆ. ನಟ ಸೂರ್ಯ ಅವರ 2D ಎಂಟರ್‌ಟೇನ್‌ಮೆಂಟ್‌ ಬ್ಯಾನರ್‌ನಡಿ ಜ್ಯೋತಿಕಾ, ಸೂರ್ಯ ಮತ್ತು ರಾಜಶೇಖರ್‌ ಕರ್ಪೂರ ಸುಂದರಪಾಂಡಿಯನ್‌ ಚಿತ್ರ ನಿರ್ಮಿಸುತ್ತಿದ್ದಾರೆ. ಸಂಗೀತ ಸಂಯೋಜನಕ ಜಿ ವಿ ಪ್ರಕಾಶ್‌ ಅವರಿಗೆ ಇದು ನೂರನೇ ಸಿನಿಮಾ ಎನ್ನುವುದು ವಿಶೇಷ.

‘ಸೂರರೈ ಪೋಟ್ರು’ ಸಿನಿಮಾ ಪ್ರೇಕ್ಷಕರು ಹಾಗೂ ವಿಮರ್ಶಕರಿಂದ ಭಾರೀ ಮೆಚ್ಚುಗೆ ಪಡೆದುಕೊಂಡಿತ್ತು. ಆಸ್ಕರ್ ರೇಸ್‌ನಲ್ಲೂ ಇದ್ದ ಈ ಸಿನಿಮಾ ಹಲವು ವಿಭಾಗದಲ್ಲಿ ರಾಷ್ಟ್ರಪ್ರಶಸ್ತಿ ಪಡೆದುಕೊಂಡಿದೆ. ಅತ್ಯುತ್ತಮ ನಟ, ಅತ್ಯುತ್ತಮ ನಟಿ, ಅತ್ಯುತ್ತಮ ಹಿನ್ನೆಲೆ ಸಂಗೀತ, ಅತ್ಯುತ್ತಮ ಚಿತ್ರ ಪ್ರಶಸ್ತಿಗಳನ್ನು ಗೆದ್ದುಕೊಂಡಿರುವ ತಂಡ ಹೊಸ ಪ್ರಾಜೆಕ್ಟ್ ಗೆ ಒಂದಾಗಿದೆ. ಮಾಲಿವುಡ್‌ನ ಜನಪ್ರಿಯ ಹೀರೋ ದುಲ್ಕರ್‌ ಸಲ್ಮಾನ್‌, ನಜ್ರಿಯಾ ಫಹದ್‌, ವಿಜಯ್‌ ವರ್ಮ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದು, ಚಿತ್ರದ ಬಗೆಗಿನ ನಿರೀಕ್ಷೆ ಹೆಚ್ಚಾಗಿದೆ.

LEAVE A REPLY

Connect with

Please enter your comment!
Please enter your name here