‘ದಿ ಆರ್ಚೀಸ್‌’ ಚಿತ್ರದ ಮೂಲಕ ನಟನೆ ಮತ್ತು ಗಾಯನದೊಂದಿಗೆ ಸಿನಿಮಾ ರಂಗಕ್ಕೆ ಪ್ರವೇಶ ಮಾಡಿದ್ದಾರೆ. ಇದೇ ಚಿತ್ರದ ‘ಜಬ್ ತುಮ್ ನಾ ಥೀನ್’ ಗೀತೆ ಬಿಡುಗಡೆಯಾಗಿದ್ದು, ಈ ಗೀತೆಯನ್ನು ಸುಹಾನಾ ಖಾನ್‌ ಹಾಡಿದ್ದಾರೆ. ಚಿತ್ರವು ಡಿಸೆಂಬರ್‌ 7, 2023 ರಿಂದ Netflixನಲ್ಲಿ ಸ್ಟ್ರೀಮ್‌ ಆಗಲಿದೆ.

ಶಾರುಖ್‌ ಪುತ್ರಿ ಸುಹಾನಾ ಖಾನ್ ಅವರು ಜೋಯಾ ಅಖ್ತರ್ ನಿರ್ದೇಶನದ ‘ದಿ ಆರ್ಚೀಸ್‌’ ಚಿತ್ರದ ಮೂಲಕ ನಟನೆ ಮತ್ತು ಗಾಯನದೊಂದಿಗೆ ಸಿನಿಮಾ ರಂಗಕ್ಕೆ ಪ್ರವೇಶ ಮಾಡಿದ್ದಾರೆ. ಇದೇ ಚಿತ್ರದ ‘ಜಬ್ ತುಮ್ ನಾ ಥೀನ್’ ಗೀತೆ ಬಿಡುಗಡೆಯಾಗಿದ್ದು, ಈ ಗೀತೆಯನ್ನು ಸುಹಾನಾ ಖಾನ್‌ ಹಾಡಿದ್ದಾರೆ. ಬಾಲಿವುಡ್‌ನ ಉದಯೋನ್ಮುಖ ನಟಿ ಸುಹಾನಾ ಖಾನ್ ನಟನೆಯ ಜೊತೆಗೆ ಗಾಯನ ಪ್ರತಿಭೆಯನ್ನು ಅನಾವರಣಗೊಳಿಸಿದ್ದು, ಅವರ Instagram ಖಾತೆಯಲ್ಲಿ ‘ನಾನು ನನ್ನ ಮೊದಲ ಹಾಡನ್ನು ಹಾಡಿದ್ದೇನೆ. ನಿರ್ದೇಶಕ ಜೋಯಾ ಅಖ್ತರ್‌ ಮತ್ತು ಗಾಯಕ ಶಂಕರ್‌ ಮಹದೇವನ್‌ ಅವರಿಗೆ ಧನ್ಯವಾದಗಳು. ಹಾಡನ್ನು ಕೇಳಿ..’ ಎಂದು ಕ್ಯಾಪ್ಶನ್‌ ನೀಡಿದ್ದಾರೆ.

‘ದಿ ಆರ್ಚೀಸ್’ ವರ್ಷದ ಬಹುನಿರೀಕ್ಷಿತ ಚಿತ್ರಗಳಲ್ಲಿ ಒಂದಾಗಿದೆ. ಇದು ಜನಪ್ರಿಯ ಅಮೇರಿಕನ್ ಕಾಮಿಕ್ಸ್ ಆರ್ಚೀಯನ್ನು ಆಧರಿಸಿದ್ದು. ಈ ಚಲನಚಿತ್ರಕ್ಕಾಗಿ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಚಿತ್ರದಲ್ಲಿ ಶ್ರೀದೇವಿ ಮತ್ತು ಬೋನಿ ಕಪೂರ್ ಪುತ್ರಿ ಖುಷಿ ಕಪೂರ್, ಅಮಿತಾಬ್ ಬಚ್ಚನ್ ಅವರ ಮೊಮ್ಮಗ ಅಗಸ್ತ್ಯ ನಂದಾ, ಮಿಹಿರ್ ಅಹುಜಾ, ವೇದಾಂಗ್ ರೈನಾ ಮತ್ತು ಯುವರಾಜ್ ಮೆಂಡಾ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಚಿತ್ರವು ಹದಿಹರೆಯದ ಆಂಗ್ಲೋ ಇಂಡಿಯನ್‌ ಸ್ನೇಹಿತರ ಗುಂಪಿನಲ್ಲಿ ನಡೆಯುವ ಪ್ರೀತಿ, ಸ್ನೇಹ, ಮನಸ್ತಾಪ, ಜಗಳ, ಹೊಂದಾಣಿಕೆ, ಸಮಾಜದ ಮೇಲೆ ಅವರಿಗೆ ಇರುವ ಜವಾಬ್ದಾರಿ ಈ ಎಲ್ಲಾ ಅಂಶಗಳನ್ನು ಒಳಗೊಂಡಿದೆ. Tiger Baby Productions ಬ್ಯಾನರ್‌ ಅಡಿಯಲ್ಲಿ ಜಾನ್ ಗೋಲ್ಡ್ ವಾಟರ್, ಶರಣ್ ದೇವರಾಜನ್, ರೀಮಾ ಕಾಗ್ತಿ ಮತ್ತು ಜೋಯಾ ಅಖ್ತರ್ ಚಿತ್ರ ನಿರ್ಮಿಸಿದ್ದಾರೆ. ಚಿತ್ರವು ಡಿಸೆಂಬರ್‌ 7, 2023 ರಿಂದ Netflixನಲ್ಲಿ ಸ್ಟ್ರೀಮ್‌ ಆಗಲಿದೆ.

LEAVE A REPLY

Connect with

Please enter your comment!
Please enter your name here