ಮಿಚೆಲ್‌ ಬ್ಯೂಟೋ ರಚಿಸಿ, ನಟಿಸಿರುವ ‘Survival of the Thickest’ ಕಾಮಿಡಿ ಸರಣಿ Netflixನಲ್ಲಿ ಇಂದಿನಿಂದ (ಜುಲೈ 13) ಸ್ಟ್ರೀಮ್‌ ಆಗುತ್ತಿದೆ. ಎಂಟು ಎಪಿಸೋಡ್‌ಗಳ ಸರಣಿಯ ಪ್ರಮುಖ ಪಾತ್ರಗಳಲ್ಲಿ ಟೋನ್ ಬೆಲ್ ಮತ್ತು ತಾಶಾ ಸ್ಮಿತ್ ಅಭಿನಯಿಸಿದ್ದಾರೆ.

ಅಮೇರಿಕಾದ ಸ್ಟಾಂಡಪ್ ಕಮಿಡಿಯನ್‌, ನಟಿ ಮಿಚೆಲ್ ಬ್ಯೂಟೊ ರಚಿಸಿ – ನಟಿಸಿರುವ ಅವರದೇ ಆತ್ಮಚರಿತ್ರೆ ‘Survival of the Thickest’ ಕಾಮಿಡಿ ಡ್ರಾಮಾ ಸರಣಿ ಇಂದಿನಿಂದ (ಜುಲೈ 13) Netflixನಲ್ಲಿ ಸ್ಟ್ರೀಮ್‌ ಆಗುತ್ತಿದೆ. ಒಟ್ಟು ಎಂಟು ಎಪಿಸೋಡ್‌ಗಳ ಸರಣಿಯಿದು. ಸರಣಿಯಲ್ಲಿ ಟೋನ್ ಬೆಲ್ ಮತ್ತು ತಾಶಾ ಸ್ಮಿತ್ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಡೇನಿಯಲ್ ಸ್ಯಾಂಚೆಜ್ ವಿಟ್ಜೆಲ್ ಚಿತ್ರಕಥೆ ವಿಭಾಗದಲ್ಲಿ ಕೆಲಸ ಮಾಡಿದ್ದು ನಿರ್ಮಾಣದಲ್ಲೂ ಅವರ ಸಹಯೋಗವಿದೆ. ಇವರು ಈ ಹಿಂದೆ ‘ದಿ ಕಾರ್ಮೈಕಲ್’, ‘ನ್ಯೂ ಗರ್ಲ್’ ಸರಣಿಗಳನ್ನು ನಿರ್ಮಿಸಿದ್ದರು. ಆಫ್ರಿಕನ್ ಕಪ್ಪು ಮಹಿಳೆಯೊಬ್ಬಳು ಪ್ರೀತಿಸಿದ ಹುಡುಗನಿಂದ ಬ್ರೇಕ್‌ ಅಪ್‌ ಅದ ನಂತರ ತನ್ನ ಜೀವನವನ್ನು ಹೊಸದಾಗಿ ಕಟ್ಟಿಕೊಳ್ಳುವುದು, ಈ ಹಾದಿಯಲ್ಲಿ ಅವರು ಎದುರಿಸುವ ತೊಂದರೆಗಳು, ತನ್ನ ಸ್ಥೂಲ ದೇಹವನ್ನು ಮೊದಲಿನ ಸಪೂರ ಆಕಾರಕ್ಕೆ ತರಲು ನಡೆಸುವ ಕಸರ್ತು, ಇದರ ಮಧ್ಯೆ ಸ್ನೇಹಿತರು ಮತ್ತು ಸಂಬಂಧಿಗಳು ಆಕೆಯನ್ನು ನಡೆಸಿಕೊಳ್ಳುವ ರೀತಿಯ ಸುತ್ತ ಸರಣಿ ಸುತ್ತುತ್ತದೆ.

Previous article‘ವಾಲಟ್ಟಿ’ ಟ್ರೈಲರ್‌ | ದೇವನ್‌ ನಿರ್ದೇಶನದ ಮಲಯಾಳಂ ಸಿನಿಮಾ ನಾಳೆ ತೆರೆಗೆ
Next articleKFCC ಪದಾಧಿಕಾರಿಗಳಿಂದ ಮುಖ್ಯಮಂತ್ರಿ ಭೇಟಿ | ಚಿತ್ರರಂಗದ ಸಮಸ್ಯೆ ಪರಿಹಾರಕ್ಕೆ ಮನವಿ

LEAVE A REPLY

Connect with

Please enter your comment!
Please enter your name here