ಬಹುನಿರೀಕ್ಷಿತ ಚಿತ್ರಗಳಲ್ಲೊಂದಾದ ‘ಸ್ವಾತಿ ಮುತ್ತಿನ ಮಳೆ ಹನಿಯೇ’ ಬಿಡುಗಡೆ ಸಮೀಪವಿದೆ. ರಾಜ್‌ ಬಿ ಶೆಟ್ಟಿ ಮತ್ತು ಸಿರಿ ರವಿಕುಮಾರ್‌ ಮುಖ್ಯಭೂಮಿಕೆಯಲ್ಲಿ ನಟಿಸಿರುವ ಚಿತ್ರವಿದು. ಟ್ರೇಲರ್‌ ಬಿಡುಗಡೆಯಾಗಿದ್ದು, ಇದೇ ನವೆಂಬರ್‌ 24ರಂದು ಸಿನಿಮಾ ತೆರೆಕಾಣಲಿದೆ.

ರಾಜ್‌ ಬಿ ಶೆಟ್ಟಿ ನಟಿಸಿ, ನಿರ್ದೇಶಿಸಿರುವ ‘ಸ್ವಾತಿ ಮುತ್ತಿನ ಮಳೆ ಹನಿಯೇ’ ಚಿತ್ರದ ಟ್ರೇಲರ್‌ ಬಿಡುಗಡೆಯಾಗಿದೆ. ಈ ಹಿಂದೆ ಆಕ್ಷನ್‌ – ಥ್ರಿಲ್ಲರ್‌ ಜಾನರ್‌ ಚಿತ್ರಗಳಲ್ಲಿ ನಟಿಸಿದ್ದ ರಾಜ್‌ ಬಿ ಶೆಟ್ಟಿ ಈಗ ಒಂದು ಸುಮಧುರ ಪ್ರೇಮಕಥೆಯ ಮೂಲಕ ತೆರೆಮೇಲೆ ಕಾಣಿಸಿಕೊಳ್ಳಲಿದ್ದಾರೆ. ಸಾವನ್ನು ಎದುರು ನೋಡುತ್ತಾ, ಬೇಗನೇ ಸಾವು ಬರಲಿ ಎಂದು ಬಯಸುವ ಎರಡು ಮನಸ್ಸುಗಳ ಪ್ರೇಮಕಥಾ ಹಂದರ ಈ ಸಿನಿಮಾ. ಪ್ರೇರಣಾ (ಸಿರಿ ರವಿಕುಮಾರ್) ಮತ್ತು ಅನಿಕೇತ್‌ (ರಾಜ್‌ ಬಿ ಶೆಟ್ಟಿ) ಇಬ್ಬರೂ ಒಂದೇ ಮನಸ್ಥಿಯಲ್ಲಿಯೇ ಒಂದಾಗುತ್ತಾರೆ. ಹೀಗೆ ಮನ್ನಡೆಯುವ ಈ ಜೋಡಿಯ ನಡುವೆ ಆತ್ಮೀಯತೆ ಬೆಳೆದು ಇಬ್ಬರ ನಡುವೆ ಮೂಡುವ ಪ್ರೀತಿಯನ್ನು ಟ್ರೇಲರ್‌ನಲ್ಲಿ ತೋರಿಸಲಾಗಿದೆ.

ಚಿತ್ರದ ಟ್ರೇಲರ್‌ ಅನ್ನು ತಮ್ಮ X ಖಾತೆಯಲ್ಲಿ ಹಂಚಿಕೊಂಡಿರುವ ರಮ್ಯಾ, ‘ಸ್ವಾತಿ ಮುತ್ತಿನ ಮಳೆ ಹನಿಯೇ’ ಚಿತ್ರದ ಟ್ರೇಲರ್‌ ಇದೀಗ ಆನಂದ್ ಆಡಿಯೋ ಚಾನೆಲ್‌ನಲ್ಲಿ’ ಎಂದು ಕ್ಯಾಪ್ಶನ್‌ ನೀಡಿದ್ದಾರೆ. ಚಿತ್ರದಲ್ಲಿ ರೇಖಾ ಕೂಡ್ಲಿಗಿ, ಬಾಲಾಜಿ ಮನೋಹರ್, ಸೂರ್ಯ ವಸಿಷ್ಠ, ಪ್ರಕಾಶ್‌ ತುಮ್ಮಿನಾಡು, ಸ್ನೇಹಾ ಶರ್ಮ, ಗೋಪಾಲಕೃಷ್ಣ ದೇಶಪಾಂಡೆ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಸಿನಿಮಾಗೆ ಮಿಥುನ್‌ ಮುಕುಂದನ್‌ ಸಂಗೀತ ಸಂಯೋಜನೆ ಮಾಡಿದ್ದಾರೆ. Lighter Buddha Films ಸಹಯೋಗದೊಂದಿಗೆ AppleBox Studios ಬ್ಯಾನರ್‌ ಅಡಿಯಲ್ಲಿ ನಟಿ ರಮ್ಯಾ ಚಿತ್ರ ನಿರ್ಮಿಸಿದ್ದಾರೆ. ಪ್ರವೀಣ್ ಶ್ರೀಯಾನ್ ಛಾಯಾಗ್ರಹಣ ಚಿತ್ರಕ್ಕಿದೆ. ಇದೇ ನವೆಂಬರ್ 24, 2023ರಂದು ಸಿನಿಮಾ ತೆರೆಕಾಣಲಿದೆ.

LEAVE A REPLY

Connect with

Please enter your comment!
Please enter your name here