ರಾಜ್‌ ಬಿ ಶೆಟ್ಟಿ ಕತೆ, ಚಿತ್ರಕಥೆ ರಚಿಸಿ ನಿರ್ದೇಶಿಸಿ, ನಟಿಸಿರುವ ‘ಸ್ವಾತಿ ಮುತ್ತಿನ ಮಳೆಹನಿಯೇ’ ಸಿನಿಮಾದ ರಿಲೀಸ್‌ ದಿನಾಂಕ ನ. 24 ಎಂದು ನಿಗಧಿಯಾಗಿದೆ. ಸಿರಿ ರವಿಕುಮಾರ್‌ ಚಿತ್ರದ ನಾಯಕಿಯಾಗಿ ಅಭಿನಯಿಸಿದ್ದಾರೆ. ನಟಿ ರಮ್ಯ ಅವರ Applebox Studios ಮತ್ತು Lighter Buddha Films ಬ್ಯಾನರ್‌ನಡಿ ಸಿನಿಮಾ ನಿರ್ಮಾಣವಾಗಿದೆ.

ರಾಜ್ ಬಿ ಶೆಟ್ಟಿ, ಸಿರಿ ರವಿಕುಮಾರ್‌ ಮುಖ್ಯಭೂಮಿಕೆಯಲ್ಲಿ ಅಭಿನಯಿಸಿರುವ ‘ಸ್ವಾತಿ ಮುತ್ತಿನ ಮಳೆ ಹನಿಯೇ’ ಸಿನಿಮಾ ನವೆಂಬರ್‌ 24ರಂದು ತೆರೆಕಾಣಲಿದೆ. ರಾಜ್ ಬಿ ಶೆಟ್ಟಿ ಅವರು ಕತೆ ಬರೆದು ನಿರ್ದೇಶಿಸಿ, ನಾಯಕನಟನಾಗಿ ಅಭಿನಯಿಸಿರುವ ಚಿತ್ರವಿದು. ‘ಒಂದು ಮೊಟ್ಟೆಯ ಕತೆ’, ‘ಗರುಡ ಗಮನ ವೃಷಭ ವಾಹನ’ ಚಿತ್ರಗಳ ನಂತರ ಅವರು ನಿರ್ದೇಶಿಸುತ್ತಿರುವ ಚಿತ್ರವಿದು. ಇತ್ತೀಚೆಗೆ ತೆರೆಕಂಡ ಅವರ ನಟನೆಯ ‘ಟೋಬಿ’ ಸಿನಿಮಾಗೆ ಪ್ರೇಕ್ಷಕರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ರಾಜ್‌ ಅವರೇ ಈ ಚಿತ್ರದ ಚಿತ್ರಕಥೆ ಮತ್ತು ಸಂಭಾಷಣೆ ರಚಿಸಿದ್ದರು. ಥ್ರಿಲ್ಲರ್‌ ಸಿನಿಮಾಗಳ ನಂತರ ಇದೀಗ ಅವರು ಪ್ರೇಮಕಥೆಯೊಂದಿಗೆ (ಸ್ವಾತಿ ಮುತ್ತಿನ ಮಳೆ ಹನಿಯೇ) ತೆರೆಗೆ ಬರುತ್ತಿದ್ದಾರೆ. ನಟಿ ರಮ್ಯ ಅವರ Applebox Studios ಮತ್ತು Lighter Buddha Films ಸಹಯೋಗದಲ್ಲಿ ಚಿತ್ರ ನಿರ್ಮಾಣವಾಗುತ್ತಿದೆ. ನವೆಂಬರ್ 24, 2023ರಂದು ಸಿನಿಮಾ ತೆರೆಕಾಣಲಿದೆ.

LEAVE A REPLY

Connect with

Please enter your comment!
Please enter your name here