ನಾನಿ ನೂತನ ತೆಲುಗು ಸಿನಿಮಾ ‘ಸರಿಪೋಧಾ ಸನಿವಾರಂ’ ಟೈಟಲ್‌ ಟೀಸರ್‌ ಬಿಡುಗಡೆಯಾಗಿದೆ. ವಿವೇಕ್‌ ಆತ್ರೇಯ ನಿರ್ದೇಶನದ ಚಿತ್ರದ ಪ್ರಮುಖ ಪಾತ್ರದಲ್ಲಿ ತಮಿಳು ನಟ ಎಸ್‌ ಜೆ ಸೂರ್ಯ ನಟಿಸಲಿದ್ದಾರೆ. ಪ್ರಿಯಾಂಕಾ ಅರುಳ್‌ ಮೋಹನ್‌ ಚಿತ್ರದ ಹಿರೋಯಿನ್‌.

ನಾನಿ ಮುಖ್ಯಭೂಮಿಕೆಯಲ್ಲಿ ಅಭಿನಯಿಸುತ್ತಿರುವ ನೂತನ ತೆಲುಗು ಸಿನಿಮಾ ‘ಸರಿಪೋಧಾ ಸನಿವಾರಂ’ ಟೈಟಲ್‌ ಟೀಸರ್‌ ಬಿಡುಗಡೆಯಾಗಿದೆ. ವಿವೇಕ್ ಆತ್ರೇಯ ನಿರ್ದೇಶನದ ಚಿತ್ರದ ಪ್ರಮುಖ ಪಾತ್ರದಲ್ಲಿ ತಮಿಳು ನಟ ಎಸ್‌ ಜೆ ಸೂರ್ಯ ಇರಲಿದ್ದಾರೆ. ‘ಅಂತೇ ಸುಂದರಾನಿಕಿ’ ಚಿತ್ರದ ನಂತರ ನಾನಿ ಮತ್ತೊಮ್ಮೆ ನಿರ್ದೇಶಕ ವಿವೇಕ್ ಆತ್ರೇಯ ಅವರೊಂದಿಗೆ ಹೊಸ ಯೋಜನೆಗಾಗಿ ಕೈಜೋಡಿಸಿದ್ದಾರೆ. ನಾನಿಯನ್ನು ಹಿಂದೆಂದೂ ನೋಡಿರದ ಅವತಾರದಲ್ಲಿ ಈ ಚಿತ್ರದಲ್ಲಿ ಕಾಣಬಹುದು ಎನ್ನುತ್ತಾರೆ ನಿರ್ದೇಶಕ ವಿವೇಕ್‌ ಆತ್ರೇಯ. ಸಾಯಿ ಕುಮಾರ್‌ ಅವರ ಧ್ವನಿಯಲ್ಲಿ ಈ ಟೀಸರ್‌ ಮೂಡಿಬಂದಿದೆ.

ಚಿತ್ರದಲ್ಲಿ ಪ್ರಿಯಾಂಕಾ ಅರುಳ್ ಮೋಹನ್ ನಾಯಕಿಯಾಗಿ ನಟಿಸುತ್ತಿದ್ದಾರೆ. DVV Entertainment ಬ್ಯಾನರ್‌ ಅಡಿಯಲ್ಲಿ ಡಿವಿವಿ ದಾನಯ್ಯ ಮತ್ತು ಕಲ್ಯಾಣ್ ದಾಸರಿ ಚಿತ್ರ ನಿರ್ಮಿಸುತ್ತಿದ್ದಾರೆ. ಜೇಕ್ಸ್ ಬಿಜಾಯ್ ಸಂಗೀತ ಸಂಯೋಜಿಸುತ್ತಿದ್ದು, ಮುರಳಿ ಜಿ ಛಾಯಾಗ್ರಹಣ, ಕಾರ್ತಿಕಾ ಶ್ರೀನಿವಾಸ್ ಸಂಕಲನ ನಿರ್ವಹಿಸುತ್ತಿದ್ದಾರೆ. ಈ ಹಿಂದೆ ‘ದಸರಾ’ ಚಿತ್ರದ ಮೂಲಕ ಜನಪ್ರಿಯತೆ ಗಳಿಸಿದ ನಾನಿ ಅವರ ಇನ್ನೊಂದು ಸಿನಿಮಾ ‘ಹಾಯ್ ನಾನ್ನ’ ಡಿಸೆಂಬರ್‌ 7, 2023ರಂದು ಚಿತ್ರಮಂದಿರಗಳಿಗೆ ಬರಲಿದೆ.

LEAVE A REPLY

Connect with

Please enter your comment!
Please enter your name here