ಜೋಯಾ ಅಖ್ತರ್‌ ನಿರ್ದೇಶನದ ‘ದಿ ಆರ್ಚೀಸ್‌’ ಹಿಂದಿ ಸಿನಿಮಾದ ಪ್ರೀಮಿಯರ್‌ ಶೋನಲ್ಲಿ ಬಾಲಿವುಡ್‌ನ ಹಲವು ತಾರೆಯರು ಪಾಲ್ಗೊಂಡಿದ್ದರು. ಇಂದಿನಿಂದ (ಡಿಸೆಂಬರ್‌ 7) ಸಿನಿಮಾ Netflixನಲ್ಲಿ ಸ್ಟ್ರೀಮ್‌ ಆಗುತ್ತಿದೆ. ನಟ ಶಾರುಖ್‌ ಪುತ್ರಿ ಸುಹಾನಾ, ಹಿರಿಯ ನಟ ಅಮಿತಾಭ್‌ ಬಚ್ಚನ್‌ ಮೊಮ್ಮಗ ಅಗಸ್ತ್ಯ ನಂದಾ, ನಟಿ ಶ್ರೀದೇವಿ ಪುತ್ರಿ ಖುಷಿ ಕಪೂರ್‌ ಈ ಚಿತ್ರದೊಂದಿಗೆ ಸಿನಿಮಾಗೆ ಪರಿಚಯವಾಗುತ್ತಿದ್ದಾರೆ.

ಮುಂಬೈನಲ್ಲಿ ಆಯೋಜನೆಗೊಂಡಿದ್ದ ‘ದಿ ಆರ್ಚೀಸ್’ ಗ್ರ್ಯಾಂಡ್ ಪ್ರೀಮಿಯರ್ ಶೋನಲ್ಲಿ ಬಾಲಿವುಡ್‌ನ ಹಲವು ತಾರೆಯರು ಭಾಗಿಯಾಗಿದ್ದಾರೆ. ಇಂದಿನಿಂದ (ಡಿಸೆಂಬರ್‌ 7) Netflixನಲ್ಲಿ ಈ ಸಿನಿಮಾ ಸ್ಟ್ರೀಮ್‌ ಆಗುತ್ತಿದೆ. ಶಾರುಖ್ ಖಾನ್‌ ಪುತ್ರಿ ಸುಹಾನಾ ಖಾನ್, ಅಮಿತಾಬ್ ಬಚ್ಚನ್ ಅವರ ಮೊಮ್ಮಗ ಅಗಸ್ತ್ಯ ನಂದಾ ಮತ್ತು ಶ್ರೀದೇವಿ ಮತ್ತು ಚಲನಚಿತ್ರ ನಿರ್ಮಾಪಕ ಬೋನಿ ಕಪೂರ್ ಅವರ ಮಗಳು ಖುಷಿ ಕಪೂರ್ ಈ ಚಿತ್ರದೊಂದಿಗೆ ಸಿನಿಮಾಗೆ ಪದಾರ್ಪಣೆ ಮಾಡುತ್ತಿದ್ದಾರೆ. ಪ್ರೀಮಿಯರ್‌ ಶೋನಲ್ಲಿ ಶಾರುಖ್‌ ಖಾನ್‌ ಪತ್ನಿ ಗೌರಿ ಖಾನ್‌, ಪುತ್ರ ಆರ್ಯನ್‌, ಸುಹಾನಾ ಖಾನ್, ಅಬ್ರಹಾಮ್‌ ಮತ್ತು ಅಮಿತಾಭ್‌ ಬಚ್ಚನ್ ಪತ್ನಿ ಜಯಾ ಬಚ್ಚನ್‌, ಐಶ್ವರ್ಯ ರೈ, ಅಭಿಷೇಕ್‌ ಬಚ್ಚನ್ ಪುತ್ರಿ ಆರಾಧ್ಯ ಬಚ್ಚನ್, ಶ್ವೇತಾ ನಂದಾ, ಪುತ್ರಿ ನವೇಲಿ ನಂದಾ, ನಟಿ ಕಾಜೋಲ್‌, ಆದಿತ್ಯಾ ಕಪೂರ್‌, ಅನನ್ಯಾ ಪಾಂಡೆ, ರಣ್‌ವೀರ್‌ ಸಿಂಗ್‌, ರಣ್‌ಬೀರ್‌ ಕಪೂರ್‌, ಹೃತಿಕ್‌ ರೋಷನ್‌, ಸಬಾ, ಸೇರಿದಂತೆ ಇನ್ನೂ ಹಲವು ತಾರೆಯರು ಪಾಲ್ಗೊಂಡಿದ್ದರು.

ಜೋಯಾ ಅಖ್ತರ್ ನಿರ್ದೇಶನದ ಆಕ್ಷನ್ ಮ್ಯೂಸಿಕಲ್ ಚಿತ್ರಕ್ಕೆ ಆಯೇಶಾ ದೇವಿತ್ರೆ ಧಿಲ್ಲೋನ್ ಮತ್ತು ರೀಮಾ ಕಾಗ್ತಿ ಚಿತ್ರಕಥೆ ರಚಿಸಿದ್ದಾರೆ. ಚಿತ್ರದ ಇತರೆ ಪ್ರಮುಖ ಪಾತ್ರಗಳಲ್ಲಿ ಮಿಹಿರ್ ಅಹುಜಾ, ವೇದಾಂಗ್ ರೈನಾ ಮತ್ತು ಯುವರಾಜ್ ಮೆಂಡಾ ನಟಿಸಿದ್ದಾರೆ. Tiger Baby Productions ಬ್ಯಾನರ್‌ ಅಡಿಯಲ್ಲಿ ಜಾನ್ ಗೋಲ್ಡ್ ವಾಟರ್, ಶರಣ್ ದೇವರಾಜನ್, ರೀಮಾ ಕಾಗ್ತಿ ಮತ್ತು ಜೋಯಾ ಅಖ್ತರ್ ಸಿನಿಮಾ ನಿರ್ಮಿಸಿದ್ದಾರೆ.

LEAVE A REPLY

Connect with

Please enter your comment!
Please enter your name here