ಅಮೇಜಾನ್‌ ಪ್ರೈಮ್‌ ತನ್ನ ‘ದಿ ಲಾರ್ಡ್‌ ಆಫ್‌ ದಿ ರಿಂಗ್ಸ್‌’ ಮಲ್ಟಿ – ಸೀಸನ್‌ ಸರಣಿಯ ಟೈಟಲ್‌ ಟೀಸರ್‌ ವೀಡಿಯೊ ಬಿಡುಗಡೆ ಮಾಡಿದೆ. ಸೆಪ್ಟೆಂಬರ್‌ 2ರಿಂದ ವಾರಕ್ಕೊಂದು ಸಂಚಿಕೆ OTT ಪ್ಲಾಟ್‌ಫಾರ್ಮ್‌ನಲ್ಲಿ ಸ್ಟ್ರೀಮ್‌ ಆಗಲಿದೆ.

ಅಮೇಜಾನ್‌ ಪ್ರೈಮ್‌ನ ‘ದಿ ಲಾರ್ಡ್‌ ಆಫ್‌ ದಿ ರಿಂಗ್ಸ್‌’ ಮಲ್ಟಿ – ಸೀಸನ್‌ ಸರಣಿಯ ಟೈಟಲ್‌ ‘ದಿ ರಿಂಗ್ಸ್‌ ಆಫ್‌ ಪವರ್‌’ ಟೈಟಲ್‌ ಟೀಸರ್‌ ಬಿಡುಗಡೆಯಾಗಿದೆ. ಈ ಸರಣಿಯಲ್ಲಿ ದಿ ಮೇಕಿಂಗ್‌ ಆಫ್‌ ದಿ ರಿಂಗ್ಸ್‌, ರೈಸ್‌ ಆಪ್‌ ದಿ ಡಾರ್ಕ್‌ ಲಾರ್ಡ್‌ ಸೌರಾನ್‌, ದಿ ಟೇಲ್‌ ಆಫ್‌ ನ್ಯೂಮೆನಾರ್‌, ದಿ ಲಾಸ್ಟ್‌ ಅಲಯಾನ್ಸ್‌ ಆಫ್‌ ಎಲ್ವಿಸ್‌ ಅಂಡ್‌ ಮೆನ್‌ ಸಂಚಿಕೆಗಳು ತಯಾರಾಗಿ ಸ್ಟ್ರೀಮ್‌ ಆಗಲಿವೆ. ದುಬಾರಿ ಬಜೆಟ್‌ನ ಈ ಫ್ಯಾಂಟಸಿ ಸರಣಿಗಳು ಜಗತ್ತಿನಾದ್ಯಂತ ದೊಡ್ಡ ವೀಕ್ಷಕ ಬಳಗ ತಲುಪಲಿವೆ. ಇಲ್ಲಿಯವರೆಗಿನ ಅಮೇಜಾನ್‌ ಪ್ರೈಮ್‌ನ ಶೋಗಳ ಪೈಕಿ ಈ ಸರಣಿಯದ್ದೇ ದುಬಾರಿ ಬಜೆಟ್‌ ಎನ್ನಲಾಗಿದೆ. ಭಾರತದಲ್ಲಿ ಕನ್ನಡ, ಹಿಂದಿ, ತಮಿಳು, ತೆಲುಗು, ಮಲಯಾಳಂ ಮತ್ತು ಇಂಗ್ಲಿಷ್‌ ಭಾಷೆಗಳಲ್ಲಿ ಸ್ಟ್ರೀಮ್‌ ಆಗಲಿವೆ. 2022ರ ಸೆಪ್ಟೆಂಬರ್‌ 2ರಂದು ಜಗತ್ತಿನಾದ್ಯಂತ ಮೊದಲ ಎಪಿಸೋಡ್‌ ಸ್ಟ್ರೀಮ್‌ ಆಗಲಿದೆ.

LEAVE A REPLY

Connect with

Please enter your comment!
Please enter your name here