ಮಾಸ್‌ ಮಹಾರಾಜ ಎಂದೇ ಕರೆಸಿಕೊಳ್ಳುವ ರವಿತೇಜಾರ ಮೊದಲ ಪ್ಯಾನ್‌ ಇಂಡಿಯಾ ಸಿನಿಮಾ ‘ಟೈಗರ್‌ ನಾಗೇಶ್ವರರಾವ್‌’ ಯುಗಾದಿಗೆ ಸೆಟ್ಟೇರಲಿದೆ. ವಂಶಿ ನಿರ್ದೇಶನದ ಈ ಚಿತ್ರದ ನಾಯಕಿಯಾಗಿ ನೂಪುರ್‌ ಸನೂನ್‌ ನಟಿಸಲಿದ್ದಾರೆ.

ಟಾಲಿವುಡ್‌ನಲ್ಲಿ ಮತ್ತೊಂದು ಪ್ಯಾನ್ ಇಂಡಿಯಾ ಪ್ರಾಜೆಕ್ಟ್ ಅನೌನ್ಸ್ ಆಗಿದೆ. ತೆಲುಗಿನ ಮಾಸ್ ಮಹಾರಾಜ ರವಿತೇಜಾ ಅವರು ‘ಟೈಗರ್ ನಾಗೇಶ್ವರ್ ರಾವ್’ ಆಗಿ ಕಾಣಿಸಿಕೊಳ್ಳಲಿದ್ದಾರೆ. ಇದು ರವಿತೇಜರ ಮೊದಲ ಪ್ಯಾನ್ ಇಂಡಿಯಾ ಸಿನಿಮಾ. ವಂಶಿ ಈ ಸಿನಿಮಾ ನಿರ್ದೇಶಿಸಲಿದ್ದು, ಅಭಿಷೇಕ್ ಅಗರ್‌ವಾಲ್‌ ನಿರ್ಮಿಸುತ್ತಿದ್ದಾರೆ. ‘ದಿ ಕಾಶ್ಮೀರಿ ಫೈಲ್ಸ್’ ಸಿನಿಮಾ ಮೂಲಕ ಬಾಲಿವುಡ್‌ ಪ್ರವೇಶಿಸಿದ್ದ ನಿರ್ಮಾಪಕ ಅಭಿಷೇಕ್ ಅಗರ್‌ವಾಲ್‌ ಈ ಬಾರಿ ಪ್ಯಾನ್‌ ಇಂಡಿಯಾ ಸಿನಿಮಾ ತಯಾರಿಗೆ ಸಜ್ಜಾಗಿದ್ದಾರೆ. ಯುಗಾದಿ ಹಬ್ಬದಂದು ಚಿತ್ರಕ್ಕೆ ಮುಹೂರ್ತ ನಡೆಯಲಿದ್ದು, ಅಂದೇ ಪ್ರೀ-ಲುಕ್ ರಿಲೀಸ್ ಆಗಲಿದೆ. ಇದು ರವಿತೇಜ ಸಿನಿಮಾ ಕರಿಯರ್‌ನ ದೊಡ್ಡ ಬಜೆಟ್‌ನ ಚಿತ್ರವಾಗಲಿದೆ.

1970ರಲ್ಲಿ ಸ್ಟುವರ್ಟ್‌ಪುರಂ ಎಂಬಲ್ಲಿ ನಡೆದ ನೈಜ ಘಟನೆ ಆಧರಿಸಿದ ಕತೆ ‘ಟೈಗರ್‌ ನಾಗೇಶ್ವರರಾವ್‌’. ಕುಖ್ಯಾತ ಹಾಗೂ ಧೈರ್ಯಶಾಲಿ ಕಳ್ಳನ ಕಥಾನಕ ಒಳಗೊಂಡಿರುವ ಈ ಚಿತ್ರಕ್ಕಾಗಿ ರವಿತೇಜ ಸಂಪೂರ್ಣವಾಗಿ ತಮ್ಮ ಮೇಕ್ ಓವರ್ ಬದಲಿಸಿಕೊಂಡಿದ್ದಾರೆ. ಬಾಲಿವುಡ್ ಬ್ಯೂಟಿ ಕೃತಿ ಸನೂನ್ ಸಹೋದರಿ ನೂಪೂರ್ ಸನೂನ್ ಅವರು ರವಿತೇಜ್‌ಗೆ ನಾಯಕಿ. ತೆಲುಗು, ಕನ್ನಡ, ತಮಿಳು, ಹಿಂದಿ ಮತ್ತು ಮಲಯಾಳಂ ಭಾಷೆಯಲ್ಲಿ ಸಿನಿಮಾ ತೆರೆಕಾಣಲಿದ್ದು, 70ರ ದಶಕದ ಕಾಲಘಟ್ಟದ ಮರುಸೃಷ್ಟಿ ಇರಲಿದೆ. ಆರ್.ಮ್ಯಾಥಿ ಐ.ಎಸ್.ಸಿ ಕ್ಯಾಮೆರಾ ವರ್ಕ್, ಜೆವಿ ಪ್ರಕಾಶ್ ಕುಮಾರದ್ ಸಂಗೀತ, ಶ್ರೀಕಾಂತ್ ವಿಸ್ಸಾ ಸಂಭಾಷಣೆ ಚಿತ್ರಕ್ಕೆ ಇರಲಿದೆ.

LEAVE A REPLY

Connect with

Please enter your comment!
Please enter your name here