ಕನ್ನಡಿಗ ಹರ್ಷ ನಿರ್ದೇಶನದಲ್ಲಿ ಗೋಪಿಚಂದ್‌ ಹೀರೋ ಆಗಿ ನಟಿಸಿರುವ ‘ಭೀಮ’ ತೆಲುಗು ಸಿನಿಮಾದ ಟೀಸರ್‌ ಬಿಡುಗಡೆಯಾಗಿದೆ. ಪ್ರಿಯಾ ಭವಾನಿ ಶಂಕರ್‌ ಮತ್ತು ಮಾಳವಿಕಾ ಶರ್ಮಾ ಚಿತ್ರದ ಇಬ್ಬರು ನಾಯಕಿಯರು. ಚಿತ್ರಕ್ಕೆ ರವಿ ಬಸ್ರೂರು ಸಂಗೀತ ಸಂಯೋಜಿಸಿದ್ದಾರೆ.

ಸ್ಯಾಂಡಲ್‌ವುಡ್‌ ನೃತ್ಯ ಸಂಯೋಜಕ, ಚಿತ್ರನಿರ್ದೇಶಕ ಹರ್ಷ ನಿರ್ದೇಶನದ ತೆಲುಗು ಸಿನಿಮಾ ‘ಭೀಮ’ ಟ್ರೇಲರ್‌ ಬಿಡುಗಡೆಯಾಗಿದೆ. ಗೋಪಿಚಂದ್‌ ಹೀರೋ ಆಗಿರುವ ಚಿತ್ರಕ್ಕೆ ಮತ್ತೊಬ್ಬ ಕನ್ನಡಿಗ ರವಿ ಬಸ್ರೂರು ಸಂಗೀತ ಸಂಯೋಜನೆ ಇದೆ. ಟ್ರೇಲರ್, ವಿಷ್ಣುವಿನ 6ನೇ ಅವತಾರವಾದ ಪರಶುರಾಮಮುನಿ ಕ್ಷೇತ್ರವನ್ನು ರಚಿಸಿದ ಪರಶುರಾಮನ ಕುರಿತು ಹೇಳಿದೆ. ಪೊಲೀಸ್‌ ಅಧಿಕಾರಿಯಾಗಿ ಕಾಣಿಸಿಕೊಂಡಿರುವ ಗೋಪಿಚಂದ್‌ ಅವರಿಗೆ ಭರ್ಜರಿ ಆಕ್ಷನ್‌ – ಥ್ರಿಲ್ಲರ್‌ ದೃಶ್ಯಗಳಿವೆ. ಚಿತ್ರದಲ್ಲಿ ಪ್ರಿಯಾ ಭವಾನಿ ಶಂಕರ್ ಮತ್ತು ಮಾಳವಿಕಾ ಶರ್ಮಾ ನಾಯಕಿಯರಾಗಿ ನಟಿಸಿದ್ದಾರೆ. ಮಾರ್ಚ್ 8ರಂದು ಸಿನಿಮಾ ತೆರೆಕಾಣಲಿದೆ.

ಮೂಲತಃ ನೃತ್ಯ ಸಂಯೋಜಕರಾದ ಹರ್ಷ ‘ಗೆಳೆಯ’ ಚಿತ್ರದೊಂದಿಗೆ ನಿರ್ದೇಶಕರಾದರು. ಈ ಚಿತ್ರದಲ್ಲಿ ಪ್ರಜ್ವಲ್ ದೇವರಾಜ್ ಮತ್ತು ತರುಣ್ ನಟಿಸಿದ್ದಾರೆ. 2009ರಲ್ಲಿ ‘ಬಿರುಗಾಳಿ’ ಚಿತ್ರ ನಿರ್ದೇಶಿಸಿದ ಅವರಿಗೆ ದರ್ಶನ್‌ರ ‘ಚಿಂಗಾರಿ’ ಹೆಸರು ತಂದುಕೊಟ್ಟಿತು. ನಂತರ ಶಿವರಾಜಕುಮಾರ್ ಅಭಿನಯದ ‘ಭಜರಂಗಿ’, ‘ವಜ್ರಕಾಯ’ ಚಿತ್ರಗಳು ಅವರಿಗೆ ನಿರ್ದೇಶಕನ ಸ್ಥಾನವನ್ನು ಗಟ್ಟಿ ಮಾಡಿದವು. ‘ಭೀಮ’ ತೆಲುಗು ಚಿತ್ರದಲ್ಲಿ ನಾಸರ್, ನರೇಶ್, ಪೂರ್ಣ, ವೆನ್ನೆಲ ಕಿಶೋರ್, ರಘು ಬಾಬು, ಮುಖೇಶ್ ತಿವಾರಿ, ಶ್ರೀನಿವಾಸ್ ರಾವ್, ಚಮಕ್ ಚಂದ್ರ, ವೆಂಕಟೇಶ್, ಚೆಲುವರಾಜ್ ಮತ್ತು ರೋಲರ್ ರಘು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. Sri Sathya Sai Arts ಬ್ಯಾನರ್‌ ಅಡಿಯಲ್ಲಿ ಕೆ ಕೆ ರಾಧಾಮೋಹನ್ ನಿರ್ಮಿಸಿರುವ ಚಿತ್ರಕ್ಕೆ ಸ್ವಾಮಿ ಜೆ ಗೌಡ ಛಾಯಾಗ್ರಹಣ, ತಮ್ಮಿರಾಜು ಸಂಕಲನವಿದೆ.

LEAVE A REPLY

Connect with

Please enter your comment!
Please enter your name here