ವಿಕಾಸ್‌ ಬೆಹ್ಲ್‌ ನಿರ್ದೇಶನದ ‘ಗಣಪತ್‌’ ಆಕ್ಷನ್‌ – ಥ್ರಿಲ್ಲರ್‌ ಹಿಂದಿ ಸಿನಿಮಾದ ಟ್ರೇಲರ್‌ ಬಿಡುಗಡೆಯಾಗಿದೆ. ಟೈಗರ್‌ ಶ್ರಾಫ್‌ ಮತ್ತು ಕೃತಿ ಸನೂನ್‌ ಮುಖ್ಯಭೂಮಿಕೆಯಲ್ಲಿ ನಟಿಸಿರುವ ಚಿತ್ರದ ವಿಶೇಷ ಪಾತ್ರದಲ್ಲಿ ಅಮಿತಾಭ್‌ ಬಚ್ಚನ್‌ ಇದ್ದಾರೆ. ಸಿನಿಮಾ ಅಕ್ಟೋಬರ್‌ 20ರಂದು ತೆರೆಕಾಣಲಿದೆ.

ಟೈಗರ್ ಶ್ರಾಫ್ ಮತ್ತು ಕೃತಿ ಸನೂನ್ ಮುಖ್ಯಭೂಮಿಕೆಯಲ್ಲಿ ನಟಿಸಿರುವ ‘ಗಣಪತ್‌’ ಚಿತ್ರದ ಟ್ರೇಲರ್‌ ಬಿಡುಗಡೆಯಾಗಿದೆ. ವಿಕಾಸ್ ಬೆಹ್ಲ್ ನಿರ್ದೇಶನದ ಈ ಆಕ್ಷನ್‌ – ಥ್ರಿಲ್ಲರ್‌ನ ಪ್ರಮುಖ ಪಾತ್ರದಲ್ಲಿ ಅಮಿತಾಭ್‌ ಬಚ್ಚನ್‌ ನಟಿಸಿದ್ದಾರೆ. ಕ್ರಿ.ಶ. 2070ರ ದಶಕದ ಕಾಲಘಟ್ಟವನ್ನು ನೆನಪಿಸುವ ಚಿತ್ರದ ಟ್ರೇಲರ್‌ನಲ್ಲಿ ಟೈಗರ್‌ ಶ್ರಾಫ್‌ನನ್ನು ‘ಗುಡ್ಡು’ ಪಾತ್ರಧಾರಿಯನ್ನಾಗಿ ಪರಿಚಯಿಸಲಾಗಿದೆ. ಅವನು ಗಣಪತಿಯಂತೆ ಶೂರ ಯೋಧನಾಗಬೇಕು. ಅಸಹಾಯಕರಿಗೆ ಸಹಾಯ ಮಾಡಬೇಕು. ಸಂಕಷ್ಟದಲ್ಲಿರುವವರಿಗೆ ಕರುಣೆ ತೋರಬೇಕು. ಅಮಾಯಕರನ್ನು ದುಷ್ಟರಿಂದ ರಕ್ಷಿಸಬೇಕು ಎಂಬುದು ಅವನ ಬೆಂಬಲಿಗರ ಆಸೆಯಾಗಿರುತ್ತದೆ. ಆ ಸಂದರ್ಭದಲ್ಲಿ ಗುಡ್ಡುಗೆ ಕೃತಿ ಸನೂನ್‌ ಜೊತೆಯಾಗುತ್ತಾಳೆ. ಅಮಿತಾಬ್‌ ಬಚ್ಚನ್‌ ದೇವರನ್ನು ಗಾಢವಾಗಿ ಪೂಜಿಸುವ ದೈವಭಕ್ತನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

Pooja Entertainment ಮತ್ತು Good Co. Production ಬ್ಯಾನರ್‌ ಅಡಿಯಲ್ಲಿ ವಶು ಭಗ್ನಾನಿ, ವಿಕಾಸ್ ಬೆಹ್ಲ್, ದೀಪ್ಶಿಖಾ ದೇಶಮುಖ್, ಜಾಕಿ ಭಗ್ನಾನಿ ಚಿತ್ರ ನಿರ್ಮಿಸಿದ್ದಾರೆ. ವಿಶಾಲ್ ಮಿಶ್ರಾ ಮತ್ತು ಅಮಿತ್ ತ್ರಿವೇದಿ ಸಂಗೀತ ಸಂಯೋಜಿಸಿದ್ದು, ಸುಧಾಕರ ರೆಡ್ಡಿ ಯಕ್ಕಂಟಿ ಛಾಯಾಗ್ರಹಣ ನಿರ್ವಹಿಸಿದ್ದಾರೆ. 2014ರಲ್ಲಿ ತೆರೆಕಂಡಿದ್ದ ‘ಹಿರೋಪಂತಿ’ ಚಿತ್ರದ ನಂತರ ಈ ಜೋಡಿ ಮತ್ತೆ ಒಂದಾಗಿದ್ದು, ಟೈಗರ್ ‘ಗಣಪತ್’ ಆಗಿ ಕಾಣಿಸಿಕೊಂಡರೆ, ಕೃತಿ ‘ಜಸ್ಸಿ’ ಪಾತ್ರ ನಿರ್ವಹಿಸಿದ್ದಾರೆ. ಜಮೀಲ್ ಖಾನ್, ಗಿರೀಶ್ ಕುಲಕರ್ಣಿ ಸಿನಿಮಾದ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರವು ಮೂಲ ಹಿಂದಿ ಸೇರಿದಂತೆ, ತೆಲುಗು, ತಮಿಳು, ಮಲಯಾಳಂ ಮತ್ತು ಕನ್ನಡ ಭಾಷೆಗಳಲ್ಲಿ ಅಕ್ಟೋಬರ್ 20, 2023ರಂದು ದಸರಾ ಸಮಯದಲ್ಲಿ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.

LEAVE A REPLY

Connect with

Please enter your comment!
Please enter your name here