2018ರ ಅಕ್ಟೋಬರ್‌ನಲ್ಲಿ ತೆರೆಕಂಡಿದ್ದ ‘ತುಂಬದ್’ ಹಾರರ್ – ಫ್ಯಾಂಟಸಿ ಹಿಂದಿ ಸಿನಿಮಾ ವಿಶ್ಲೇಷಕರ ಅಪಾರ ಮೆಚ್ಚುಗೆಗೆ ಪಾತ್ರವಾಗಿತ್ತು. ಮುಂದೆ ಓಟಿಟಿಯಲ್ಲೂ ಚಿತ್ರವನ್ನು ಜನರು ಮುಗಿಬಿದ್ದು ನೋಡಿದ್ದರು. ಕಳೆದ ವಾರ ಸೆಪ್ಟೆಂಬರ್ 13ರಂದು ರೀರಿಲೀಸ್ ಆಗಿದ್ದ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಉತ್ತಮ ಗಳಿಕೆ ಮಾಡುತ್ತಿದೆ.
ರಾಹಿ ಅನಿಲ್ ಬಾರ್ವೆ ನಿರ್ದೇಶನದ ‘ತುಂಬದ್’ ಹಾರರ್ – ಫ್ಯಾಂಟಸಿ ಹಿಂದಿ ಸಿನಿಮಾ ಕಳೆದ ವಾರ ಸೆಪ್ಟೆಂಬರ್ 13ರಂದು ರೀರಿಲೀಸ್ ಆಗಿತ್ತು. ಪ್ರೇಕ್ಷಕರಿಂದ ಉತ್ತಮ ಬೆಂಬಲ ವ್ಯಕ್ತವಾದ ಹಿನ್ನೆಲೆಯಲ್ಲಿ ಈ ವಾರಕ್ಕೂ ಸಿನಿಮಾ ಮುಂದುವರೆದಿದೆ. ಕಳೆದ ವಾರಕ್ಕೆ ಹೋಲಿಸಿದಲ್ಲಿ ಈ ವಾರ ಚಿತ್ರಕ್ಕೆ ಇನ್ನಷ್ಟು ಹೆಚ್ಚಿನ ಬೆಂಬಲ ವ್ಯಕ್ತವಾಗುತ್ತಿದೆ. ರೀರಿಲೀಸ್ ಕಂಡ ಮೊದಲ ವಾರದಲ್ಲಿ ಸಿನಿಮಾ 13.15 ಕೋಟಿ ರೂಪಾಯಿ ಗಳಿಸಿದೆ. ತೆರೆಕಂಡ ಎಂಟನೇ ದಿನ ಸುಮಾರು 3 ಕೋಟಿಯಷ್ಟು ದುಡ್ಡು ಮಾಡಿದೆ. 2018ರಲ್ಲಿ ತೆರೆಕಂಡ ಸಿನಿಮಾದ ಒಟ್ಟು ಗಳಿಕೆ 13.50 ಎನ್ನಲಾಗಿತ್ತು. ರೀರಿಲೀಸ್‌ನಲ್ಲಿ ಸಿನಿಮಾ ಈಗಾಗಲೇ 16 ಕೋಟಿ ರೂಪಾಯಿ ದಾಟಿದೆ. ಮೊದಲ ಬಾರಿ ರಿಲೀಸ್ ಆದಾಗ ‘cult horror – fantasy’ ಸಿನಿಮಾ ಎಂದು ವಿಶ್ಲೇಷಕರು ಮೆಚ್ಚಿದ್ದರು. ಮುಂದೆ ಓಟಿಟಿಯಲ್ಲಿ ಜನರು ಚಿತ್ರವನ್ನು ಮುಗಿಬಿದ್ದು ನೋಡಿದ್ದರು.
ನಾರಾಯಣ್ ಧರಪ್ ರಚನೆಯ ಕತೆಯಿದು. ರಾಹಿ ಅನಿಲ್ ಬಾರ್ವೆ ಚಿತ್ರಕಥೆ ಮಾಡಿ ನಿರ್ದೇಶಿಸಿದ್ದಾರೆ. ಹಾಗೆ ನೋಡಿದರೆ 2012ರಲ್ಲೇ ಅನಿಲ್ ಬಾರ್ವೆ ಚಿತ್ರೀಕರಣ ಪೂರ್ಣಗೊಳಿಸಿದ್ದರು. ಸಂಕಲನದ ನಂತರ ಅವರಿಗೆ ಸಿನಿಮಾ ತೃಪ್ತಿ ಕೊಟ್ಟಿಲ್ಲ. ಚಿತ್ರಕಥೆ ತಿದ್ದಿ ಮತ್ತೊಮ್ಮೆ ಶೂಟ್ ಮಾಡಿದರು. 2015ರಲ್ಲೇ ಪೂರ್ಣಗೊಂಡಿದ್ದ ಸಿನಿಮಾ ತೆರೆಕಂಡಿದ್ದು 2018ರಲ್ಲಿ. ಹೀರೊ ಸೋಹಮ್ ಷಾ, ಆನಂದ್ ಎಲ್ ರಾಯ್ ಸೇರಿದಂತೆ ಐವರು ನಿರ್ಮಾಣ ಮಾಡಿದ್ದ ಸಿನಿಮಾ ಸಾಕಷ್ಟು ಅಡಚಣೆಗಳೊಂದಿಗೆ ಥಿಯೇಟರ್‌ಗೆ ಬಂದಿತ್ತು. ಅಂತಿಮವಾಗಿ ಪ್ರೇಕ್ಷಕರು ಚಿತ್ರವನ್ನು ಕೈಹಿಡಿದರು. ವಿಶಿಷ್ಟ ಕತೆ ಮತ್ತು ಹಾರರ್ – ಫ್ಯಾಂಟಸಿ ಜಾನರ್‌ನ ವಿಶಿಷ್ಟ ನಿರೂಪಣೆ ಹಿಂದಿ ಚಿತ್ರರಂಗದಲ್ಲಿ ಹೊತದೊಂದು ಹಾದಿ ಸೃಷ್ಟಿಸಿತು. ಇದೀಗ ರೀರಿಲೀಸ್‌ನಲ್ಲೂ ಸಿನಿಮಾ ದೊಡ್ಡ ಯಶಸ್ಸು ಕಂಡಿದೆ.