ಅಕ್ಷಯ್‌ ಕುಮಾರ್‌ ಹಾಗೂ ಟೈಗರ್‌ ಶ್ರಾಫ್‌ ಅಭಿನಯದ ಬಹುನಿರೀಕ್ಷಿತ ಸಿನಿಮಾ ‘ಬಡೆ ಮಿಯಾ ಚೋಟೆ ಮಿಯಾ’ ಏ 10ಕ್ಕೆ ತೆರೆ ಕಾಣಲಿದೆ. ರಂಜಾನ್‌ ಹಬ್ಬದ ಲಾಭ ಪಡೆಯಲು ಚಿತ್ರತಂಡ ಸಜ್ಜಾಗಿದ್ದು, ಸೆನ್ಸಾರ್‌ ಪ್ರಕ್ರಿಯೆ ಸಹ ಮುಗಿದಿದೆ.

ಬಾಲಿವುಡ್‌ನ ಬಹುನಿರೀಕ್ಷಿತ ಸಿನಿಮಾ ‘ಬಡೆ ಮಿಯಾ ಚೋಟೆ ಮಿಯಾ’ ಒಂದು ಆಕ್ಷನ್‌ ಕಾಮಿಡಿ ಥ್ರಿಲ್ಲರ್‌ ಆಗಿದೆ. ಅಕ್ಷಯ್‌ ಕುಮಾರ್‌ ಹಾಗೂ ಟೈಗರ್‌ ಶ್ರಾಫ್‌ ಪ್ರಮುಖ ಪಾತ್ರದಲ್ಲಿ ನಟಿಸಿರುವ ಈ ಚಿತ್ರ ಈಗ ಸೆನ್ಸಾರ್‌ ಪ್ರಕ್ರಿಯೆ ಮುಗಿಸಿದೆ. ಸದ್ಯ ಈ ಸಿನಿಮಾಗೆ ಸೆನ್ಸಾರ್‌ ಮಂಡಳಿ ಯು/ಎ ಪ್ರಮಾಣಪತ್ರ ನೀಡಿದೆ. ಅಕ್ಷಯ್‌ ಹಾಗೂ ಟೈಗರ್‌ ಜೊತೆಗೆ ‘ಆಡು ಜೀವತಂ’ ಖ್ಯಾತಿಯ ಪೃಥ್ವಿರಾಜ್‌ ಸುಕುಮಾರನ್‌ ಸಹ ಈ ಚಿತ್ರದಲ್ಲಿ ನಟಿಸಿದ್ದಾರೆ. ‘ಸುಲ್ತಾನ್‌’ ಹಾಗೂ ‘ಭಾರತ್‌’ ಸಿನಿಮಾ ಖ್ಯಾತಿಯ ಅಲಿ ಅಬ್ಬಾಸ್‌ ಜಾಫರ್‌ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ಜಾಕಿ ಭಗ್ನಾನಿ ನಿರ್ಮಿಸಿರುವ ಈ ಸಿನಿಮಾ ರಂಜಾನ್‌ ಹಬ್ಬದ ದಿನ ತೆರೆಕಾಣಲಿದೆ.

ಸಿನಿಮಾ ವೀಕ್ಷಿಸಿದ ಸೆನ್ಸಾರ್‌ ಮಂಡಳಿ ಕೆಲವು ದೃಶ್ಯಗಳಿಗೆ ಕತ್ತರಿ ಹಾಕುವುದರ ಜೊತೆಗೆ ಕೆಲ ಬ್ರ್ಯಾಂಡ್‌ಗಳ ಹೆಸರುಗಳನ್ನು ಬದಲಾಯಿಸಲು ಸೂಚನೆ ನೀಡಿದೆ ಎನ್ನಲಾಗುತ್ತಿದೆ. ಇನ್ನು ಸಿನಿಮಾದ ಅವಧಿ 2 ಗಂಟೆ 44 ನಿಮಿಷ ಇದೆ. ಚಿತ್ರದಲ್ಲಿ ಅಕ್ಷಯ್‌ ಕುಮಾರ್‌, ಟೈಗರ್‌ ಶ್ರಾಫ್‌ ಹಾಗೂ ಪೃಥ್ವಿರಾಜ್‌ ಸುಕುಮಾರನ್ ಅವರನ್ನು ಹೊರತುಪಡಿಸಿ ಮಾನುಷಿ ಚಿಲ್ಲರ್‌, ಸೋನಾಕ್ಷಿ ಸಿನ್ಹಾ ಹಾಗೂ ಅಲಾಯ ಅವರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

LEAVE A REPLY

Connect with

Please enter your comment!
Please enter your name here