ರಾಜ್‌ಕುಮಾರ್‌ ಹಿರಾನಿ ಮತ್ತು ಶಾರುಖ್‌ ಸಿನಿಮಾ ‘ಡಂಕಿ’ಗಾಗಿ ಸಿನಿಮಾ ಪ್ರೇಮಿಗಳು ಎದುರು ನೋಡುತ್ತಿದ್ದಾರೆ. ವಿಶಿಷ್ಟ ರೀತಿಯಲ್ಲಿ ಪ್ರೊಮೋಷನ್‌ ನಡೆಸುತ್ತಿರುವ ಚಿತ್ರತಂಡ ‘ಡ್ರಾಪ್‌ 4’ಗಾಗಿ ದುಬೈನಲ್ಲಿ ಶೂಟಿಂಗ್‌ ನಡೆಸುತ್ತಿದೆ. ದುಬೈನ ಅಬುದಬಿಯಲ್ಲಿ ಸ್ಪೆಷಲ್‌ ಸಾಂಗ್‌ ಚಿತ್ರಿಸಲಾಗಿದೆ.

ನಟ ಶಾರುಖ್‌ ಖಾನ್‌ ‘ಪಠಾಣ್‌’ ಮತ್ತು ‘ಜವಾನ್‌’ ಸಿನಿಮಾಗಳ ಯಶಸ್ಸಿನ ನಂತರ ನಟ ಶಾರುಖ್‌ ಅವರ ‘ಡಂಕಿ’ ಸಿನಿಮಾವನ್ನು ಎದುರು ನೋಡುತ್ತಿದ್ದಾರೆ ಅವರ ಅಭಿಮಾನಿಗಳು. ಅದರಲ್ಲೂ ಇದು ರಾಜ್‌ಕುಮಾರ್‌ ಹಿರಾನಿ ನಿರ್ದೇಶನದ ಸಿನಿಮಾ ಎನ್ನುವುದು ವಿಶೇಷ. ಈಗಾಗಲೇ ಟ್ರೇಲರ್‌ ಮತ್ತು ಹಾಡುಗಳಿಂದ ಸದ್ದು ಮಾಡುತ್ತಿರುವ ಸಿನಿಮಾ ‘ಡ್ರಾಪ್‌ 4’ಗಾಗಿ ದುಬೈನ ಅಬುದಬಿಯಲ್ಲಿ ಶೂಟಿಂಗ್‌ ನಡೆಸುತ್ತಿದೆ. ಬಿಡುಗಡೆ ಸಜ್ಜಾಗಿರುವ ಹೊತ್ತಲ್ಲಿ ಚಿತ್ರೀಕರಣವೇ? ಚಿತ್ರದ ಸ್ಪೆಷಲ್ ನಂಬರ್ ಇತ್ತೀಚಿಗಷ್ಟೇ ಅಬುದಬಿಯಲ್ಲಿ ಶೂಟ್ ಮಾಡಲಾಗಿದೆ. ಸುಹಾನಾ ಖಾನ್ ಡೆಬ್ಯು ಸಿನಿಮಾ ‘ದಿ ಆರ್ಚೀಸ್‌’ ಪ್ರೀಮಿಯರ್ ಮುಗಿಸಿ ಯುಎಇಗೆ ಹಾರಿದ ಶಾರುಖ್ ಅಂಡ್ ಟೀಂ, ಅಲ್ಲಿ ಮೂರು ದಿನ ಸ್ಪೆಷಲ್ ನಂಬರ್ ಚಿತ್ರೀಕರಣ ನಡೆಸಿದೆ.

ಡ್ರಾಪ್‌ 5 ರಿಲೀಸ್‌ | ಡ್ರಾಪ್-5 ಶೀರ್ಷಿಕೆಯಡಿ ಚಿತ್ರದ ಮತ್ತೊಂದು ಸಾಂಗ್ ರಿಲೀಸ್ ಆಗಿದೆ. ‘ಓ ಮಾಹಿ..ಓ ಮಾಹಿ’ ಮೆಲೋಡಿ ಟ್ರ್ಯಾಕ್ ಅನಾವರಣಗೊಂಡಿದೆ. ಹಾರ್ಡಿ ಮತ್ತು ಮನು ನಡುವಿನ ಪ್ರೇಮಗೀತೆಯಾಗಿರುವ ಈ ಹಾಡಿಗೆ ಅರ್ಜಿತ್ ಸಿಂಗ್ ಗಾಯನ, ಇರ್ಷಾದ್ ಕಾಮಿಲ್ ಸಾಹಿತ್ಯ, ಪ್ರೀತಂ ಸಂಗೀತ ನಿರ್ದೇಶನವಿದೆ. #AskSRKನಲ್ಲಿ ಕಿಂಗ್ ಖಾನ್ ತಮ್ಮ ನೆಚ್ಚಿನ ಹಾಡು ಇದೇ ಎಂದು ಹೇಳಿಕೊಂಡಿದ್ದರು. ಹೀಗಾಗಿ ಫ್ಯಾನ್ಸ್ ಎಕ್ಸೈಟ್ ಆಗಿದ್ದರು. ಇದೀಗ ಆ ಕುತೂಹಲಕ್ಕೆ ತೆರೆಬಿದ್ದಿದೆ. ಓ‌ಮಾಹಿ ಹಾಡು ರಿಲೀಸ್‌ ಆಗಿದ್ದು ಅಭಿಮಾನಿಗಳು ಮೆಚ್ಚಿಕೊಂಡಿದ್ದಾರೆ. ‘ಡಂಕಿ’ ಸಿನಿಮಾವನ್ನು ಶಾರುಖ್ ಖಾನ್ ಒಡೆತನದ ರೆಡ್ ಚಿಲ್ಲೀಸ್ ಎಂಟರ್‌ಟೇನ್‌ಮೆಂಟ್‌ ಹಾಗೂ ರಾಜ್‌ಕುಮಾರ್ ಹಿರಾನಿ ಫಿಲ್ಮ್ಸ್ ಹಾಗೂ ಜಿಯೋ ಸಿನಿಮಾಸ್ ಬ್ಯಾನರ್‌ ಅಡಿಯಲ್ಲಿ ಗೌರಿ ಖಾನ್ ಹಾಗೂ ರಾಜ್‌ಕುಮಾರ್ ಹಿರಾನಿ ನಿರ್ಮಾಣ ಮಾಡಿದ್ದಾರೆ.

LEAVE A REPLY

Connect with

Please enter your comment!
Please enter your name here