Super Good Films ಬ್ಯಾನರ್‌ನ ನೂತನ ತಮಿಳು ಚಿತ್ರದಲ್ಲಿ ವಡಿವೇಲು ಮತ್ತು ಫಹಾದ್‌ ಫಾಸಿಲ್‌ ಜೊತೆಯಾಗಿ ನಟಿಸುತ್ತಿದ್ದಾರೆ. ಕಳೆದ ವರ್ಷ ತೆರೆಕಂಡ ‘ಮಾಮನ್ನನ್‌’ ತಮಿಳು ಚಿತ್ರದಲ್ಲಿ ಇಬ್ಬರೂ ಮಹತ್ವದ ಪಾತ್ರಗಳಲ್ಲಿ ನಟಿಸಿದ್ದರು. ನೂತನ ತಮಿಳು ಚಿತ್ರವನ್ನು ಸುದೇಶ್‌ ಶಂಕರ್‌ ನಿರ್ದೇಶಿಸಲಿದ್ದಾರೆ.

ಫಹಾದ್ ಫಾಸಿಲ್ ಮತ್ತು ವಡಿವೇಲು ಅವರು ಮತ್ತೊಂದು ತಮಿಳು ಚಿತ್ರದಲ್ಲಿ ಜೊತೆಯಾಗಿ ನಟಿಸಲಿದ್ದಾರೆ. ಇವರಿಬ್ಬರು ಈ ಮೊದಲು ಬ್ಲಾಕ್‌ಬಸ್ಟರ್‌ ‘ಮಾಮನ್ನನ್‌’ ಸಿನಿಮಾದಲ್ಲಿ ಒಟ್ಟಿಗೆ ಪರದೆ ಹಂಚಿಕೊಂಡಿದ್ದರು. ಈ ಕುರಿತು ಅಧಿಕೃತ ಘೋಷಣೆಯನ್ನು Super Good Films ತನ್ನ X ಖಾತೆಯಲ್ಲಿ ಹಂಚಿಕೊಂಡಿದ್ದು, ‘ಫಹಾದ್ ಫಾಸಿಲ್ ಮತ್ತು ವಡಿವೇಲು ಅವರ ಸಹಯೋಗದೊಂದಿಗೆ Super Good Films ತನ್ನ 98ನೇ ಚಿತ್ರವನ್ನು ಪ್ರಸ್ತುತಪಡಿಸುತ್ತಿದೆ’ ಎಂದು ಕ್ಯಾಪ್ಶನ್‌ ನೀಡಿದೆ. ಚಿತ್ರತಂಡ ಪೋಸ್ಟರ್‌ ಒಂದನ್ನು ಹಂಚಿಕೊಂಡಿದ್ದು, ಬ್ಯಾಂಕಿನ ಡೆಬಿಟ್‌ ಕಾರ್ಡ್‌ ಒಂದರ ಮೇಲೆ ರಸ್ತೆ ಹಾದುಹೋಗಿರುವ ರೀತಿ ಪೋಸ್ಟರ್‌ ಮೂಡಿಬಂದಿದೆ. ಇದು ರಸ್ತೆ ಪ್ರಯಾಣದ ಕಥೆಯಾಗಿರಬಹುದು ಎನ್ನುವುದರ ಸೂಚನೆ ಸಿಗುತ್ತದೆ. ಸುದೇಶ್‌ ಶಂಕರ್‌ ಚಿತ್ರವನ್ನು ನಿರ್ದೇಶಿಸಲಿದ್ದಾರೆ.

ಇನ್ನೂ ಹೆಸರಿಡದ ಯೋಜನೆಗೆ ಸಂಬಂಧಿಸಿದ ಇತರ ವಿವರಗಳು ಶೀಘ್ರದಲ್ಲೇ ಬಹಿರಂಗಗೊಳಿಸುವುದಾಗಿ ಚಿತ್ರತಂಡ ತಿಳಿಸಿದೆ. ಈ ಚಿತ್ರವು ಫಹಾದ್‌ ಫಾಸಿಲ್‌ ಅವರ 6ನೇ ತಮಿಳು ಸಿನಿಮಾ ಆಗಿದೆ. ಇವರು ಈ ಹಿಂದೆ ‘ವೆಲೈಕ್ಕಾರನ್’ (2017), ತ್ಯಾಗರಾಜನ್ ಕುಮಾರರಾಜ ಅವರ ‘ಸೂಪರ್ ಡಿಲಕ್ಸ್’ (2019) ಮತ್ತು ಲೋಕೇಶ್ ಕನಗರಾಜ್ ಅವರ ‘ವಿಕ್ರಮ್’ (2022) ಚಿತ್ರಗಳಲ್ಲಿ ನಟಿಸಿದ್ದಾರೆ. ಪ್ರಸ್ತುತ ರಜನೀಕಾಂತ್ ಮತ್ತು ಟಿಜೆ ಜ್ಞಾನವೇಲ್ ಅವರ ‘ವೆಟ್ಟೈಯಾನ್’ ಚಿತ್ರೀಕರಣದಲ್ಲಿ ನಿರತರಾಗಿದ್ದಾರೆ.

LEAVE A REPLY

Connect with

Please enter your comment!
Please enter your name here