ಜಿ.ವಿ.ಪ್ರಕಾಶ್‌ ಮತ್ತು ಗೌತಮ್ ಮೆನನ್‌ ಆಕ್ಷನ್‌ – ಥ್ರಿಲ್ಲರ್ ಸಿನಿಮಾ ‘ಸೆಲ್ಫೀ’ ತಮಿಳು ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ‘ಬಿಜಿಲ್‌’ ಸಿನಿಮಾ ಖ್ಯಾತಿಯ ವರ್ಷ ಬೊಲ್ಲಮ’ ಚಿತ್ರದ ನಾಯಕನಟಿ. ಮೆಡಿಕಲ್, ಇಂಜಿನಿಯರಿಂಗ್ ಕಾಲೇಜು ಮ್ಯಾನೇಜ್‌ಮೆಂಟ್ ಸೀಟ್ ಮಾಫಿಯಾದ ಕತೆ ಇಲ್ಲಿದೆ.

ಮೂಲತಃ ಸಂಗೀತ ನಿರ್ದೇಶಕರಾದ ಜಿ.ವಿ.ಪ್ರಕಾಶ್ ಹೀರೋ ಆಗಿ ಯಶಸ್ಸು ಕಂಡ ಪ್ರತಿಭೆ. ಅವರು ಕಾಲೇಜು ಸ್ಟೂಡೆಂಟ್‌ ಪಾತ್ರದಲ್ಲಿ ನಟಿಸಿರುವ ‘ಸೆಲ್ಫೀ’ ತಮಿಳು ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಖ್ಯಾತ ನಿರ್ದೇಶಕ  ವೆಟ್ರಿಮಾರನ್‌ ಅವರಲ್ಲಿ ಸಹಾಯಕರಾಗಿದ್ದ ಮತ್ತಿ ಮಾರನ್ ಈ ಸಿನಿಮಾ ನಿರ್ದೇಶಿಸಿದ್ದಾರೆ. ಚಿತ್ರದ ಪ್ರಮುಖ ಪಾತ್ರದಲ್ಲಿ ನಟ, ನಿರ್ದೇಶಕ ಗೌತಮ್ ಮೆನನ್‌ ಇದ್ದಾರೆ ಎನ್ನುವುದು ವಿಶೇಷ. ‘ಬಿಜಿಲ್‌’ ಸಿನಿಮಾ ಖ್ಯಾತಿಯ ವರ್ಷ ಬೊಲ್ಲಮ ಅವರು ಹೀರೋ ಜಿ.ವಿ.ಪ್ರಕಾಶ್ ಅವರಿಗೆ ಜೋಡಿಯಾಗಿದ್ದಾರೆ. ತೊಂಬತ್ತು ಸೆಕೆಂಡ್‌ಗಳ ಟ್ರೈಲರ್‌ ಚಿತ್ರದಲ್ಲಿನ ಆಕ್ಷನ್‌ – ಥ್ರಿಲ್ಲರ್ ಕತೆಯ ಕುರಿತು ಸುಳಿವು ನೀಡುತ್ತದೆ. ಮೆಡಿಕಲ್‌ ಮತ್ತು ಇಂಜಿನಿಯರಿಂಗ್ ಕಾಲೇಜುಗಳ ಮ್ಯಾನೇಜ್‌ಮೆಂಟ್‌ ಸೀಟ್‌ ಮಾಫಿಯಾ ಕತೆ ಇಲ್ಲಿದೆ. ವಿದ್ಯಾರ್ಥಿಗಳಿಗೆ ಮ್ಯಾನೇಜ್‌ಮೆಂಟ್‌ ಸೀಟ್‌ ಕೊಡಿಸುವ ದಂಧೆಯಲ್ಲಿ ಜಿ.ವಿ.ಪ್ರಕಾಶ್ ಮತ್ತು ಗೌತಮ್ ಮೆನನ್‌ ಪಾತ್ರಗಳ ನಡುವಿನ ಜಿದ್ದು, ವೈಷಮ್ಯದ ಕತೆ. ವಗೈ ಚಂದ್ರಶೇಖರ್‌, ಗುಣ ಚಿತ್ರದ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಚಿತ್ರದ ನಟ ಗೌತಮ್ ಮೆನನ್‌ ಅವರು ಟ್ವಿಟರ್‌ನಲ್ಲಿ ಟ್ರೈಲರ್ ಶೇರ್ ಮಾಡಿ, “ಈ ಯುವ ಪ್ರತಿಭಾವಂತ ನಿರ್ದೇಶಕನಿಗೆ ಉತ್ತಮ ಭವಿಷ್ಯವಿದೆ…” ಎಂದು ಬರೆದಿದ್ದಾರೆ.

LEAVE A REPLY

Connect with

Please enter your comment!
Please enter your name here