ವೆಟ್ರಿಮಾರನ್ ನಿರ್ದೇಶನದ ‘ವಿದುಥಲೈ 2’ ತಮಿಳು ಸಿನಿಮಾ ಪ್ರತಿಷ್ಠಿತ 2024ರಲ್ಲಿ ನಡೆಯಲಿರುವ Rotterdam ಫಿಲ್ಮ್ ಫೆಸ್ಟಿವಲ್‌ನಲ್ಲಿ (Limelight ಕೆಟಗರಿ) ಪ್ರೀಮಿಯರ್ ಆಗಲಿದೆ. ವಿಜಯ್ ಸೇತುಪತಿ, ಸೂರಿ, ಚೇತನ್, ಗೌತಮ್ ವಾಸುದೇವ್ ಮೆನನ್, ಭವಾನಿ ಶ್ರೀ ಚಿತ್ರದ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಇಳಯರಾಜ ಅವರ ಸಂಗೀತ ಸಂಯೋಜನೆ ಚಿತ್ರಕ್ಕಿದೆ.
ವೆಟ್ರಿಮಾರನ್ ನಿರ್ದೇಶನದ ‘ವಿದುಥಲೈ’ ತಮಿಳು ಸಿನಿಮಾ ಇದೇ ವರ್ಷ ಮಾರ್ಚ್ 31ರಂದು ತೆರೆಕಂಡಿತ್ತು. ಇದೀಗ ‘ವಿದುಥಲೈ 2’ ಬಿಡುಗಡೆಗೆ ಸಿದ್ಧವಾಗಿದೆ. ಥಿಯೇಟರ್‌ಗೆ ಬರುವ ಮುಂಚೆ ಈ ಸಿನಿಮಾ 2024ರಲ್ಲಿ ನಡೆಯಲಿರುವ Rotterdam ಫಿಲ್ಮ್ ಫೆಸ್ಟಿವಲ್‌ನಲ್ಲಿ ಪ್ರೀಮಿಯರ್ ಆಗಲಿದೆ. ‘ವಿದುಥಲೈ’ ಎರಡೂ ಪಾರ್ಟ್‌ಗಳು ಅಲ್ಲಿ ಸ್ಕ್ರೀನ್ ಆಗಲಿವೆ. ಚಿತ್ರದ ನಟ ಸೂರಿ ಈ ಬಗ್ಗೆ ಟ್ವೀಟ್ ಮಾಡಿ, ‘#Viduthalai Part 1 & 2 has been selected for the Rotterdam Film Festival under the limelight category! Grand Premiere at @IFFR a cinematic experience like no other’ ಎಂದು ಬರೆದಿದ್ದಾರೆ.
ಜಯಮೋಹನ್ ಅವರ ಕಿರುಚಿತ್ರ ‘ಥುನೈವಾನ್’ ಆಧರಿಸಿ ತಯಾರಾಗಿರುವ ಚಿತ್ರವಿದು. ವ್ಯವಸ್ಥೆಯ ವಿರುದ್ಧ ಬಂಡೇಳುವ ವಾಥಿಯಾರ್ (ವಿಜಯ್ ಸೇತುಪತಿ) ಸುತ್ತ ಹೆಣೆದ ಕಥಾಹಂದರ. ಹೊಸದಾಗಿ ಕೆಲಸಕ್ಕೆ ಸೇರಿದ ಪೊಲೀಸ್ ಕಾನ್‌ಸ್ಟೇಬಲ್ ಕುಮಾರೇಸನ್ ದೃಷ್ಟಿಕೋನದಲ್ಲಿ ನಿರ್ದೇಶಕ ವೆಟ್ರಿಮಾರನ್ ಸಿನಿಮಾ ನಿರೂಪಿಸಿದ್ದಾರೆ. ಸಿನಿಮಾ ಪೊಲೀಸ್ ದೌರ್ಜನ್ಯದ ಕುರಿತೂ ಮಾತನಾಡುತ್ತದೆ. ‘ವಿದುಥಲೈ 1’ ಇತ್ತೀಚಿನ ಚೆನ್ನೈ ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ಸ್ಪೆಷಲ್ ಜ್ಯೂರಿ ಪ್ರಶಸ್ತಿ ಪಡೆದಿದೆ. ವಿಜಯ್ ಸೇತುಪತಿ, ಸೂರಿ ಅವರಲ್ಲದೆ ಚೇತನ್, ಗೌತಮ್ ವಾಸುದೇವ್ ಮೆನನ್, ಭವಾನಿ ಶ್ರೀ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಇಳಯರಾಜ ಅವರ ಸಂಗೀತ ಸಂಯೋಜನೆ ಚಿತ್ರಕ್ಕಿದೆ. ವೆಟ್ರಿಮಾರನ್ ಸದ್ಯ ‘ವಾಡಿವಾಸಲ್’ ಸಿನಿಮಾ ನಿರ್ದೇಶನದಲ್ಲಿ ನಿರತರಾಗಿದ್ದಾರೆ. ಕಾದಂಬರಿ ಆಧರಿಸಿದ ಈ ಚಿತ್ರದ ನಾಯಕನಟನಾಗಿ ಸೂರ್ಯ ನಟಿಸುತ್ತಿದ್ದಾರೆ.