ರಾಘವ ಲಾರೆನ್ಸ್‌ ಮತ್ತು ಕಂಗನಾ ರನಾವತ್‌ ಅಭಿನಯದ ತೆಲುಗು – ಹಿಂದಿ ದ್ವಿಭಾಷಾ ಸಿನಿಮಾ ‘ಚಂದ್ರಮುಖಿ 2’ ಆಡಿಯೋ ಬಿಡುಗಡೆಯಾಗಿದೆ. ಪಿ ವಾಸು ನಿರ್ದೇಶನದ ಈ ಸಿನಿಮಾ ರಜನೀಕಾಂತ್‌ ನಟನೆಯ ‘ಚಂದ್ರಮುಖಿ’ ಸೀಕ್ವೆಲ್‌. ಇದೇ ಸೆಪ್ಟೆಂಬರ್‌ 19ರಂದು ಸಿನಿಮಾ ರಿಲೀಸ್‌ ಆಗಲಿದೆ.

ಪಿ ವಾಸು ನಿರ್ದೇಶನದಲ್ಲಿ ರಾಘವ ಲಾರೆನ್ಸ್ ಮತ್ತು ಕಂಗನಾ ರನಾವತ್ ಅಭಿನಯಿಸಿರುವ ‘ಚಂದ್ರಮುಖಿ 2’ ಸಿನಿಮಾ ಬಿಡುಗಡೆಯ ಹೊಸ್ತಿಲಲ್ಲಿದೆ. ಸಿನಿಮಾದ ಆಡಿಯೋ ಲಾಂಚ್ ಸಮಾರಂಭ ಚೆನ್ನೈನಲ್ಲಿ ಅದ್ಧೂರಿಯಾಗಿ ‌ನೆರವೇರಿದೆ. ಈ ಕಾರ್ಯಕ್ರಮದಲ್ಲಿ ಭಾಗಿಯಾದ ಚಿತ್ರತಂಡದವರು ತಮ್ಮ ಅನುಭವ ಹಂಚಿಕೊಂಡಿದ್ದಾರೆ. ನಾಯಕ ರಾಘವ್ ಲಾರೆನ್ಸ್ ಮಾತನಾಡಿ, ‘ಸುಭಾಸ್ಕ್ ಕರಣ್ ಅವರ Lyca Productions Bannerನ ಭಾಗವಾಗಿರುವುದಕ್ಕೆ ಹೆಮ್ಮೆ ಪಡುತ್ತೇನೆ. ನಮ್ಮ ನಿರ್ದೇಶಕರಿಗೆ ನಾಲ್ಕು ದಶಕಗಳ ಅನುಭವವಿದೆ. ಕಂಗನಾ ರನಾವತ್ ಈ ಸಿನಿಮಾ ಮಾಡುತ್ತಿದ್ದಾರೆ ಎಂದು ತಿಳಿದಾಗ ಆಶ್ಚರ್ಯವಾಯಿತು. ಕೀರವಾಣಿ ಬಗ್ಗೆ ಮಾತನಾಡಲು ಪದಗಳು ಸಾಕಾಗುವುದಿಲ್ಲ. ಛಾಯಾಗ್ರಾಹಕ ರಾಜಶೇಖರ್, ಕಲಾ ನಿರ್ದೇಶಕ ತೊಟ್ಟ ಥರಣಿಗಾರು, ಸಂಕಲನಕಾರ ಆಂಟನಿ ಅವರು ಇಡೀ ಚಿತ್ರತಂಡದೊಂದಿಗೆ ಅದ್ಭುತ ಚಿತ್ರ ಮಾಡಿದ್ದಾರೆ. ಈ ಸಿನಿಮಾ ಖಂಡಿತ ಪ್ರೇಕ್ಷಕರಿಗೆ ಮನರಂಜನೆ ನೀಡಲಿದೆ’ ಎಂದರು.

ನಟಿ ಕಂಗನಾ ರನಾವತ್‌ ಈ ಸಿನಿಮಾದ ಪ್ರಮುಖ ಆರಕ್ಷಣೆ. ಶೀರ್ಷಿಕೆ ಪಾತ್ರದಲ್ಲಿ ನಟಿಸುತ್ತಿರುವ ಅವರು, ‘ನನ್ನ ನಟನಾ ವೃತ್ತಿಜೀವನದಲ್ಲಿ ನಾನು ‘ಚಂದ್ರಮುಖಿ 2’ದಂತಹ ಚಿತ್ರ ಮಾಡಿಲ್ಲ. ಹಾಗೆ ನೋಡಿದರೆ, ನಾನು ಯಾರಿಗೂ ಅವಕಾಶ ಕೇಳಿರಲಿಲ್ಲ. ಮೊದಲ ಬಾರಿಗೆ ನಾನು ಪಿ. ವಾಸು ಅವರನ್ನು ಕೇಳಿದೆ. ಈ ಚಿತ್ರದಲ್ಲಿ ನಿರ್ದೇಶಕರು ನನ್ನ ಪಾತ್ರದ ಜೊತೆಗೆ ಪ್ರತಿ ಪಾತ್ರಕ್ಕೂ ಸಮಾನ ಪ್ರಾಮುಖ್ಯತೆ ನೀಡಿದ್ದಾರೆ. ಇಡೀ ಕ್ರೆಡಿಟ್ ಅವರಿಗೆ ಸಲ್ಲುತ್ತದೆ. ಲಾರೆನ್ಸ್ ಮಾಸ್ಟರ್ ಅನೇಕರಿಗೆ ಸ್ಫೂರ್ತಿ’ ಎನ್ನುತ್ತಾರೆ. ಚಿತ್ರಕ್ಕೆ ಎಂ ಎಂ ಕೀರವಾಣಿ ಸಂಗೀತ ಸಂಯೋಜಿಸಿದ್ದಾರೆ. ಪ್ರತಿಷ್ಠಿತ ಆಸ್ಕರ್‌ ಗೌರವ ಪಡೆದ ನಂತರ ಅವರು ಸಂಯೋಜಿಸುತ್ತಿರುವ ಮೊದಲ ಚಿತ್ರವಿದು. ವಡಿವೇಲು, ಲಕ್ಷ್ಮೀ ಮೆನನ್, ಮಹಿಮಾ ನಂಬಿಯಾರ್, ರಾಧಿಕಾ ಶರತ್ ಕುಮಾರ್, ಸುರೇಶ್ ಮೆನನ್ ಚಿತ್ರದ ಇತರೆ ಪ್ರಮುಖ ಕಲಾವಿದರು. ಇದೇ ಸೆಪ್ಟೆಂಬರ್‌ 19ರಂದು ಸಿನಿಮಾ ತೆರೆಕಾಣಲಿದೆ.

Previous article‘ತತ್ಸಮ ತದ್ಭವ’ ಟ್ರೈಲರ್‌ | ಮೇಘನಾ ರಾಜ್‌ ಸಿನಿಮಾ ಸೆಪ್ಟೆಂಬರ್‌ 15ರಂದು ತೆರೆಗೆ
Next article‘ಟ್ರೆಂಡಿಂಗಲ್‌ ಬರ್ಬೇಕಂದ್ರೆ’ | ಚಂದನ್‌ ಶೆಟ್ಟಿ ‘ಸೂತ್ರಧಾರಿ’ ಸಿನಿಮಾ ಸಾಂಗ್‌

LEAVE A REPLY

Connect with

Please enter your comment!
Please enter your name here