‘ವಿಜಯ್‌ 68’ ತಮಿಳು ಸಿನಿಮಾಗೆ ‘ದಿ ಗ್ರೇಟೆಸ್ಟ್ ಆಫ್ ಆಲ್ ಟೈಮ್’ ಎಂದು ನಾಮಕರಣವಾಗಿದೆ. ಚಿತ್ರದ ಫಸ್ಟ್‌ಲುಕ್‌ ಪೋಸ್ಟರ್‌ ಬಿಡುಗಡೆಯಾಗಿದ್ದು, ಹೀರೋ ವಿಜಯ್‌ ಪೈಲಟ್‌ ಪಾತ್ರದಲ್ಲಿದ್ದಾರೆ. ವೆಂಕಟ್‌ ಪ್ರಭು ನಿರ್ದೇಶಿಸುತ್ತಿರುವ ಈ ಸಿನಿಮಾಗೆ ಯುವನ್‌ ಶಂಕರ್‌ ರಾಜಾ ಸಂಗೀತ ಸಂಯೋಜಿಸುತ್ತಿದ್ದಾರೆ.

ವಿಜಯ್ ಮುಖ್ಯಭೂಮಿಕೆಯಲ್ಲಿ ನಟಿಸಲಿರುವ ‘ವಿಜಯ್‌ 68’ ತಮಿಳು ಚಿತ್ರಕ್ಕೆ ‘ದಿ ಗ್ರೇಟೆಸ್ಟ್ ಆಫ್ ಆಲ್ ಟೈಮ್’ ಶೀರ್ಷಿಕೆ ನಿಗಧಿಯಾಗಿದೆ. ಯಶಸ್ವೀ ಚಿತ್ರನಿರ್ದೇಶಕ ವೆಂಕಟ್‌ ಪ್ರಭು ನಿರ್ದೇಶಿಸಲಿರುವ ಚಿತ್ರದ ಫಸ್ಟ್‌ಲುಕ್‌ ಪೋಸ್ಟರ್‌ ಬಿಡುಗಡೆಯಾಗಿದೆ. ಪೋಸ್ಟರ್‌ನಲ್ಲಿ ವಿಜಯ್‌ ಪೈಲಟ್‌ ಆಗಿ ಕಾಣಿಸಿಕೊಂಡಿದ್ದು, ದ್ವಿಪಾತ್ರದ ಸುಳಿವು ಸಿಗುತ್ತದೆ. ಹಾಗೆಯೇ, ‘ಬೆಳಕು ಕತ್ತಲನ್ನು ಕರಗಿಸಬಹುದು, ಆದರೆ ಕತ್ತಲು ಬೆಳಕನ್ನು ಕರಗಿಸಲಾರದು’ ಎನ್ನುವ ಅಡಿಬರಹವಿದೆ. AGS Entertainment ಬ್ಯಾನರ್‌ ಸಿನಿಮಾ ನಿರ್ಮಿಸುತ್ತಿದ್ದು, ಯುವನ್ ಶಂಕರ್ ರಾಜಾ ಸಂಗೀತ ಸಂಯೋಜಿಸುತ್ತಿದ್ದಾರೆ. ‘ಚೆನ್ನೈ 600028’ ಮತ್ತು ‘ಮಾನಾಡು’ ಚಿತ್ರಗಳ ಜೊತೆಗೆ ಅಜಿತ್ ಕುಮಾರ್ ಅವರ ‘ಮಂಗಾಥಾ’ ಚಲನಚಿತ್ರಗಳನ್ನು ವೆಂಕಟ್ ನಿರ್ದೇಶಿಸಿದ್ದಾರೆ. ವಿಜಯ್ ಮತ್ತು ಅಜಿತ್ ಕುಮಾರ್ ಇಬ್ಬರಿಗೂ ಚಲನಚಿತ್ರಗಳನ್ನು ನಿರ್ದೇಶಿಸಿರುವ ಎ ಆರ್ ಮುರುಗದಾಸ್, ವಸಂತ ಸಾಯಿ, ಎಸ್‌ ಜೆ ಸೂರ್ಯ, ಕೆ ಎಸ್ ರವಿಕುಮಾರ್, ವಿಕ್ರಮನ್, ಎಝಿಲ್, ಎ ಎಲ್ ವಿಜಯ್, ಪೇರರಸು ಅವರ ಪಟ್ಟಿಗೆ ಇದೀಗ ನಿರ್ದೇಶಕ ವೆಂಕಟ್‌ ಪ್ರಭು ಅವರೂ ಸೇರ್ಪಡೆಗೊಂಡಂತಾಗಿದೆ.

LEAVE A REPLY

Connect with

Please enter your comment!
Please enter your name here